ಜೂನ್‍ 06ರಂದು ಬಿಡಗಡೆ ಆಗ್ತಿಲ್ಲ ‘Ekka’; ಬಿಡುಗಡೆ ಯಾವಾಗ?

ಬಿಡುಗಡೆಗೆ 10 ದಿನಗಳಷ್ಟೇ ಇವೆ, ಆದರೆ ಚಿತ್ರದ ಬಗ್ಗೆ ಸುದ್ದಿಯೇ ಇರಲಿಲ್ಲ. ಬಹುಶಃ ಚಿತ್ರದ ಬಿಡುಗಡೆಗೆ ಮುಂದಕ್ಕೆ ಹೋಗಿರಬಹುದು ಎಂಬ ಗುಸುಗುಸು ಅಭಿಮಾನಿಗಳ ವಲಯದಲ್ಲಿ ಇದ್ದೇ ಇತ್ತು. ಅದೀಗ ನಿಜವಾಗಿದೆ ಅಷ್ಟೇ. ಜೂನ್‍ 06ರಂದು ಬಿಡುಗಡೆ ಆಗಬೇಕಿದ್ದ ಯುವ ರಾಜಕುಮಾರ್‍ ಚಿತ್ರವು ಮುಂದಕ್ಕೆ ಹೋಗಿದ್ದು, ಇದೀಗ ಜುಲೈ 18ರಂದು ಬಿಡುಗಡೆಯಾಗಲಿದೆ.

’ಎಕ್ಕ’ (Ekka) ಚಿತ್ರದ ಮುಹೂರ್ತದ ದಿನವೇ ಚಿತ್ರವನ್ನು ಜೂನ್‍ 06ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಘೋಷಿಸಲಾಗಿತ್ತು. ಆದರೆ, ಚಿತ್ರದ ಬಿಡುಗಡೆ ಹತ್ತಿರ ಬಂದರೂ, ಬಿಡುಗಡೆಯ ಮಾತಿರಲಿಲ್ಲ. ಈಗ ಚಿತ್ರತಂಡದವರೇ, ಸೋಷಿಯಲ್‍ ಮೀಡಿಯಾದಲ್ಲಿ ಚಿತ್ರ ಜುಲೈ 18ರಂದು ಬಿಡುಗಡೆಯಾಗುತ್ತಿರುವ ಘೋಷಣೆ ಮಾಡಿದೆ.

‘ಎಕ್ಕ’ ಚಿತ್ರದ ಟೀಸರ್‍ ಕಳೆದ ತಿಂಗಳು ಬಿಡುಗಡೆಯಾಗಿದ್ದು, ಈ ಟೀಸರ್‍ನಲ್ಲಿ ಯುವ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಮಗು-ಮೃಗ ಎಂದು ಡೈಲಾಗ್‌ ಹೊಡೆಯುತ್ತಾ ಕೈಯಲ್ಲಿ ಪೊರಕೆ ಹಿಡಿದು ಮಿಂಚಿದ್ದರು. ಅಷ್ಟೇ ಅಲ್ಲ, ‘ಇದು ಇಲ್ಲಿಗೆ ನಿಲ್ಲೋದಿಲ್ಲ …’ ಎಂದು ಸೂಚನೆ ಸಹ ಕೊಟ್ಟಿದ್ದರು. ಈ ಟೀಸರ್‍ ಅಲ್ಲದೆ, ಚಿತ್ರದ ಒಂದು ಹಾಡು ಬಿಡುಗಡೆಯಾಗಿದೆ.

ಈ ಚಿತ್ರವನ್ನು PRK ಪ್ರೊಡಕ್ಷನ್ಸ್ ಬ್ಯಾನರ್‍ ಅಡಿ ಅಶ್ವಿನಿ ಪುನೀತ್‍ ರಾಜಕುಮಾರ್‍, ಜಯಣ್ಣ ಫಿಲಂಸ್‍ ಬ್ಯಾನr ಅಡಿ ಜಯಣ್ಣ ಮತ್ತು ಭೋಗೇಂದ್ರ ಮತ್ತು KRG ಸ್ಟುಡಿಯೋಸ್‍ ಅಡಿ ಕಾರ್ತಿಕ್‍ ಗೌಡ ಮತ್ತು ಯೋಗಿ ಜೊತೆಯಾಗಿ ನಿರ್ಮಿಸುತ್ತಿದ್ದಾರೆ.

ರೋಹಿತ್‍ ಪದಕಿ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಯುವಗೆ ಸಂಜನಾ ಆನಂದ್‍ ಮತ್ತು ಸಂಪದ ನಾಯಕಿಯರಾಗಿ ನಟಿಸಿದ್ದು, ಮಿಕ್ಕಂತೆ ಅತುಲ್ ಕುಲಕರ್ಣಿ, ಆದಿತ್ಯ, ಶ್ರುತಿ, ಪೂರ್ಣಚಂದ್ರ ಮೈಸೂರು, ಪುನೀತ್‍ ರುದ್ರನಾಗ್‍, ಸಾಧು ಕೋಕಿಲ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣವಿದೆ.

ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

  1. РЈ меня РЅРµ бьётся вторые РёС… трек. И Р±СЂРѕ РІ скайпе РЅРµ РІРёРґРЅРѕ. РњРѕР¶ приняли РёС… посылки РЅР° почте? РўРѕР¶Рµ…

One thought on “ಜೂನ್‍ 06ರಂದು ಬಿಡಗಡೆ ಆಗ್ತಿಲ್ಲ ‘Ekka’; ಬಿಡುಗಡೆ ಯಾವಾಗ?

Leave a Reply

Your email address will not be published. Required fields are marked *