ಹೀರೋ ಆದ Siddu Moolimani; ’ಸೀಟ್ ಎಡ್ಜ್’ನಿಂದ ಹೊರಬಂತು ಹೊಸ ಹಾಡು …

‘ರಂಗಿ ತರಂಗ’ ಮೂಲಕ ಬೆಳಕಿಗೆ ಬಂದ ಸಿದ್ದು ಮೂಲಿಮನಿ, ಆ ನಂತರ ‘ವಿಕ್ರಾಂತ್ ರೋಣ’, ‘ಅಜ್ಞಾತವಾಸಿ’, ‘ಅಭಿರಾಮಚಂದ್ರ’ ಸೇರಿದಂತೆ ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಇದೇ ಮೊದಲ ಬಾರಿಗೆ ಅವರು ಹೀರೋ ಆಗಿದ್ದು, ‘ಸೀಟ್‍ ಎಡ್ಜ್’ ಎಂಬ ಚಿತ್ರದ ಮೂಲಕ ಹೀರೋ ಆಗಿದ್ದಾರೆ.

‘ಸೀಟ್‍ ಎಡ್ಜ್’ ಎಂಬ ಹೆಸರೇ ಹೇಳುವಂತೆ ಸೀಟಿನ ತುದಿಗೆ ತಂದು ಕೂರಿಸುವ ಹಾರರ್‍ ಥ್ರಿಲ್‍ಲರ್‍ ಚಿತ್ರ. ಈ ಚಿತ್ರವನ್ನು ಎನ್. ಆರ್. ಸಿನಿಮಾ ಪ್ರೊಡಕ್ಷನ್ಸ್ ಬ್ಯಾನರಿನಲ್ಲಿ ಗಿರಿಧರ ಟಿ. ವಸಂತಪುರ ಮತ್ತು ಸುಜಾತ ಗಿರಿಧರ ನಿರ್ಮಿಸುತ್ತಿದ್ದು, ಚೇತನ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡದಲ್ಲಿ ‘ಕೆಮಿಸ್ಟ್ರೀ ಆಫ್ ಕರಿಯಪ್ಪ’ ಹಾಗೂ ‘ಕ್ರಿಟಿಕಲ್ ಕೀರ್ತನೆಗಳು’ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿರುವ ಚೇತನ್ ಶೆಟ್ಟಿ, ‘ಸೀಟ್ ಎಡ್ಜ್’ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ.

ಡಾರ್ಕ್ ಕಾಮಿಡಿ ಜೊತೆಗೆ ಹಾರರ್-ಥ್ರಿಲ್ಲರ್ ಶೈಲಿಯಲ್ಲಿ ‘ಸೀಟ್ ಎಡ್ಜ್’ ಸಿನಿಮಾ ಮೂಡಿಬಂದಿದೆ. ಯೂಟ್ಯೂಬ್ ಬ್ಲಾಗರ್ ಆಗಿರುವ ಹುಡುಗನೊಬ್ಬನ ಘೋಸ್ಟ್ ಹಂಟಿಂಗ್ ಮಾಡುವಾಗ, ಅದರಲ್ಲಿ ಏನೇನು ಸಮಸ್ಯೆಗಳನ್ನು ಎದುರಿಸುತ್ತಾನೆ ಎಂಬುದರ ಸುತ್ತ ಚಿತ್ರ ಸಾಗುತ್ತದೆ. ಬೆಂಗಳೂರು, ಮೈಸೂರು, ಶಿವಮೊಗ್ಗ ಸುತ್ತಮುತ್ತ 45 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.

‘ಸೀಟ್ ಎಡ್ಜ್’ ಚಿತ್ರದಲ್ಲಿ ಸಿದ್ದು ಮೂಲಿಮನಿಗೆ ರವೀಕ್ಷಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ರಾಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ, ಲಕ್ಷ್ಮಿ ಸಿದ್ದಯ್ಯ, ಪುನೀತ್ ಬಾಬು, ತೇಜು ಪೊನ್ನಪ್ಪ, ಮನಮೋಹನ್ ರೈ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಮಡಿದ್ದಾರೆ. ಚಿತ್ರಕ್ಕೆ ಆಕಾಶ್ ಪರ್ವ ಸಂಗೀತ ಸಂಯೋಜಿಸಿದ್ದು, ‘ಸಾರಿ ಹೇಳುವೆ ಜಗಕೆ …’ ಎಂಬ ಗೀತೆ ಬಿಡುಗಡೆಯಾಗಿದ್ದು, ಸಿದ್ದು ಮೂಲಿಮನಿ ಹಾಗೂ ರವೀಕ್ಷಾ ಜೋಡಿಯಾಗಿ ಹೆಜ್ಜೆ ಹಾಕಿದ್ದರು. ಇದರ ಬೆನ್ನಲ್ಲೇ ಇತ್ತೀಚೆಗಷ್ಟೇ, ‘ಸೀಟ್ ಎಡ್ಜ್’ ಚಿತ್ರದ ‘ಅಂಗೋ ಇಂಗೋ …’ ಎಂಬ ಮತ್ತೊಂದು ವಿಡಿಯೋ ಸಾಂಗ್ ಬಿಡುಗಡೆ ಆಗಿದೆ. ಲಕ್ಷ್ಮಿ ರಮೇಶ್ ಸಾಹಿತ್ಯವಿರುವ ಈ ಹಾಡಿಗೆ ಗಾಯಕ ಟಿಪ್ಪು ಧ್ವನಿಯಾಗಿದ್ದಾರೆ.

ಚಿತ್ರಕ್ಕೆ ದೀಪಕ್ ಕುಮಾರ್ ಜೆ. ಕೆ ಛಾಯಾಗ್ರಹಣ, ನಾಗೇಂದ್ರ ಉಜ್ಜನಿ ಸಂಕಲನವಿದ್ದು, ಇದೇ ಜುಲೈನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಇದನ್ನೂ ಓದಿ:-


ಹೆಚ್ಚಿನ ಓದಿಗೆ :-

  1. РєРѕРіРґР° появится РЅРѕРІРёРЅРєРё?? https://form.jotform.com/252456485701056 РїРѕРєР° никто ничего тут РЅРµ берите!!!!!!!!!!!!!!!!!!!!!!!!!!!!!!!!!!!!!!!!РјРѕСЏ ситуация решится если то СЏ сообщу.РџРѕРєР° кидалово нарисоваывается.Дабы даже Рѕ…

2 thoughts on “ಹೀರೋ ಆದ Siddu Moolimani; ’ಸೀಟ್ ಎಡ್ಜ್’ನಿಂದ ಹೊರಬಂತು ಹೊಸ ಹಾಡು …

Leave a Reply

Your email address will not be published. Required fields are marked *