ಎರಡು ಬೇರೆ ಪೀಳಿಗೆಗೆ ಸೇರಿದ ವ್ಯಕ್ತಿಗಳ ಸುತ್ತ ಸುತ್ತುವ ಕಥೆಯೇ ‘ನಮೋ ವೆಂಕಟೇಶ’

ಒಂದು ಕಾಲಕ್ಕೆ ಚಿತ್ರಮಂದಿರಗಳಲ್ಲಿ ಬೆಳಿಗ್ಗೆ ಪ್ರದರ್ಶನಕ್ಕೂ ಮೊದಲು ಕೇಳಿಬರುತ್ತಿದ್ದ ಒಂದು ಹಾಡೆಂದರೆ, ಅದು ಘಂಟಸಾಲ ಹಾಡಿರುವ ‘ನಮೋ ವೆಂಕಟೇಶ, ನಮೋ ತಿರುಮಲೇಶ …’. ಈಗ ‘ನಮೋ ವೆಂಕಟೇಶ’ (Namo Venkatesha) ಎಂಬ ಶೀರ್ಷಿಕೆಯನ್ನು ಚಿತ್ರವೊಂದಕ್ಕೆ ಇಡಲಾಗಿದ್ದು, ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಆರುಶ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಶ್ರೀನಿವಾಸ ಗೆಜ್ಜಲಗೆರೆ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ವಿಜಯ್ ಭಾರದ್ವಾಜ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಅವರಿಗೆ ನಾಯಕಿಯಾಗಿ ‘ಗಟ್ಟಿಮೇಳ’ ಧಾರಾವಾಹಿಯ ಆದ್ಯ ಪಾತ್ರದಿಂದ ಹೆಸರಾದ ಅನ್ವಿತಾ ಸಾಗರ್ ಅಭಿನಯಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.

‘ನಮೋ ವೆಂಕಟೇಶ’ ಹೆಸರಿಗೂ, ತಿರುಪತಿ ತಿಮ್ಮಪ್ಪನಿಗೂ ಯಾವುದೇ ಸಂಬಂಧವಿಲ್ಲವಂತೆ. ಇದೊಂದು ಮನರಂಜನಾತ್ಮಕ ಚಿತ್ರವಾಗಿದ್ದ, ಕಥೆಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ ‘ನಮೋ ವೆಂಕಟೇಶ’ ಎಂಬ ಶೀರ್ಷಿಕೆ ಇಟ್ಟಿದೆ. ಹಾಸ್ಯದ ಜೊತೆಗೊಂದು ಪ್ರೇಮಕಥೆಯನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ.

ಕಿರುತೆರೆಯಲ್ಲಿ ಟಿ.ಎನ್‍. ಸೀತಾರಾಂ ಜೊತೆಗೆ ಪಳಗಿರುವ ವಿಜಯ್‍ ಭಾರದ್ವಾಜ್‍ ಅವರಿಗೆ ಸ್ವತಂತ್ರ ನಿರ್ದೇಶಕರಾಗಿ ಇದು ಮೊದಲ ಚಿತ್ರ. ಈ ಚಿತ್ರದ ಕುರಿತು ಮಾತನಾಡುವ ಅವರು, ‘ಈ ಚಿತ್ರದಲ್ಲಿ ನಾಯಕನ ಹೆಸರು ವೆಂಕಟೇಶ. ಆತ ಏಕೆ ನಮೋ ವೆಂಕಟೇಶ ಏಕೆ ಆದ ಎನ್ನುವುದು ಚಿತ್ರದ ಕಥೆ. ಎರಡು ಬೇರೆ, ಬೇರೆ ಪೀಳಿಗೆಗೆ ಸೇರಿದ ಇಬ್ಬರು ವ್ಯಕ್ತಿಗಳ ಸುತ್ತ ಸುತ್ತುವ ಕಥೆ ಈ ಚಿತ್ರದಲ್ಲಿದೆ. ಒಬ್ಬರ ಆಲೋಚನೆಗಳಿಂದ ಮತ್ತೊಬ್ಬರ ಮೇಲೆ ಬೀರುವ ಸೂಕ್ಷ್ಮ ಪ್ರಭಾವಗಳು, ಅದರಿಂದ ಅವರವರ ಬದುಕು ಪಡೆದುಕೊಳ್ಳುವ ತಿರುವುಗಳ ಸುತ್ತ ನಡೆವ ಕಥೆಯಿದು’ ಎಂದರು.

‘ನಮೋ ವೆಂಕಟೇಶ’ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಶರತ್ ಆರೋಹಣ ಅವರ ಸಂಗೀತ ಸಂಯೋಜನೆಯಿದೆ. ನಿರಂಜನ್‌ದಾಸ್ ಮತ್ತು ವಿನೋದ್ ಲೋಕಣ್ಣನವರ್ ಛಾಯಾಗ್ರಹಣ ಇರುವ ಚಿತ್ರದಲ್ಲಿ ಶ್ಯಾಮ್ ಸುಂದರ್, ನಾಗರಾಜರಾವ್, ರವಿಕುಮಾರ್, ದೀಪಾ, ಮಂಜುನಾಥ್ ಹೆಗಡೆ, ಸುಧಾ ಪ್ರಸನ್ನ ಹಾಗೂ ಇತರರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ವಿಜಯ್‍ ಭಾರದ್ವಾಜ್‍ಗೆ ನಾಯಕಿಯಾಗಿ ‘ಗಟ್ಟಿಮೇಳ’ ಧಾರಾವಾಹಿಯ ಆದ್ಯ ಪಾತ್ರದಿಂದ ಹೆಸರಾದ ಅನ್ವಿತಾ ಸಾಗರ್ ಅಭಿನಯಿಸಿದ್ದಾರೆ.

ಹೆಚ್ಚಿನ ಓದಿಗೆ:-

  1. с искреннем уважением к вам! https://kemono.im/weoygnedueo/geroin-po-nizkoi-tsene-kupit сказали отпрака на следующий день после платежа!

  2. Всем РґРѕР±СЂРѕРіРѕ времени суток. Р’РѕРїСЂРѕСЃ такой – РљРѕ скольки лучше делать РњРќ Рё как быстро растет толер??? https://linkin.bio/walterguzmanwal Всем привет!

2 thoughts on “ಎರಡು ಬೇರೆ ಪೀಳಿಗೆಗೆ ಸೇರಿದ ವ್ಯಕ್ತಿಗಳ ಸುತ್ತ ಸುತ್ತುವ ಕಥೆಯೇ ‘ನಮೋ ವೆಂಕಟೇಶ’

Leave a Reply

Your email address will not be published. Required fields are marked *