ಮಗನ ಚಿತ್ರಕ್ಕೆ Script ಪೂಜೆ, ಅಮ್ಮನ ಚಿತ್ರಕ್ಕೆ ಮುಹೂರ್ತ; ಪ್ರಿಯಾಂಕಾ ಹೊಸ ಚಿತ್ರ ಪ್ರಾರಂಭ

ಇತ್ತೀಚೆಗಷ್ಟೇ, ಉಪೇಂದ್ರ (Upendra) ಮತ್ತು ಪ್ರಿಯಾಂಕಾ ಉಪೇಂದ್ರ (Priyanka Upendra) ಅವರ ಮುದ್ದಿನ ಮಗ ಆಯುಷ್‍ ಮೊದಲ ಚಿತ್ರದ ಸ್ಕ್ರಿಪ್ಟ್ ಪೂಜೆ, ಮಂತ್ರಾಲಯದಲ್ಲಿ ನಡೆದಿತ್ತು. ಇದೀಗ ಪ್ರಿಯಾಂಕಾ ಉಪೇಂದ್ರ ಅವರ ಹೊಸ ಚಿತ್ರ ‘ಸೆಪ್ಟೆಂಬರ್‍ 21’ಕ್ಕೆ ಬೆಂಗಳೂರಿನಲ್ಲಿ ಚಾಲನೆ ಚಿಕ್ಕಿದೆ.

ಪ್ರಿಯಾಂಕಾ ಉಪೇಂದ್ರ, ‘ಸೆಪ್ಟೆಂಬರ್‍ 21’ ಎಂಬ ಬಾಲಿವುಡ್‍ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಇತ್ತೀಚೆಗೆ ಕೇಳಿ ಬಂದಿತ್ತು. ಈ ಚಿತ್ರದ ಮುಹೂರ್ತ, ಬೆಂಗಳೂರಿನಲ್ಲಿ ಆಗಿದೆ. ಇಂದ್ರಜಿತ್‍ ಲಂಕೇಶ್‍ (Indrajit Lankesh) ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿಸುವ ಮೂಲಕ ಚಾಲನೆ ನೀಡಿದ್ದಾರೆ.

21 ವರ್ಷದ ಕನ್ನಡತಿ ಕರೆನ್ ಕ್ಷಿತಿ ಸುವರ್ಣ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಆಲ್ಝೈಮರ್ ರೋಗಿ ಮತ್ತು ಆತನ ಆರೈಕೆ ಮಾಡುವ ಶುಶ್ರೂಷಕಿಯ ನಡುವೆ ಕಥೆ ಸಾಗುತ್ತದೆ. ಈ ಚಿತ್ರವು ಹಿಂದಿಯಲ್ಲಿ ಮೂಡಿಬರುತ್ತಿದ್ದು, ಆಲ್ಜೈಮರ್‍ ರೋಗಿಯಾಗಿ ಪ್ರವೀಣ್‍ ಸಿಂಗ್‍ ಸಿಸೋಡಿಯಾ ಕಾಣಿಸಿಕೊಂಡರೆ, ಪ್ರಿಯಾಂಕಾ ಉಪೇಂದ್ರ ಶುಶ್ರೂಕಿಯಾಗಿ ನಟಿಸುತ್ತಿದ್ದಾರೆ. ಜೊತೆಗೆ, ಹಿಂದಿಯ ಹಿರಿಯ ನಟಿ ಜರೀನಾ ವಹಾಬ್ ಮುಂತಾದವರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ವಿನಯ್ ಚಂದ್ರ ಸಂಗೀತ, ಅನಿಲ್ ಕುಮಾರ್ ಛಾಯಾಗ್ರಹಣವಿದೆ.

ಕರೆನ್ ಕ್ಷಿತಿ ಸುವರ್ಣ ಈ ಹಿಂದೆ ‘ಹೈಡ್ ಅಂಡ್ ಸೀಕ್’ ಎಂಬ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದರಂತೆ. ಈ ಕಿರು ಚಿತ್ರ ಜಾಗತಿಕ ಮಟ್ಟದಲ್ಲಿ  ಗುರುತಿಸಿಕೊಂಡಿತ್ತಂತೆ‌.‌ ‘ಈಗ ‘ಸೆಪ್ಟೆಂಬರ್ 21’ ಚಿತ್ರವನ್ನು ನಿರ್ದೇಶಿಸಿತ್ತಿದ್ದೇನೆ. ಈ ಕಥೆಯನ್ನು ಪಿ. ರಾಜಶೇಖರ್ ಅವರು ಮಲಯಾಳಂನಲ್ಲಿ ಬರೆದಿದ್ದಾರೆ. ಆಲ್ಝೈಮರ್ ರೋಗದ ಸುತ್ತಲ್ಲಿನ ಕಥಾಹಂದರವನ್ನು ಈ ಚಿತ್ರ ಹೊಂದಿದೆ‌. ಸದ್ಯದಲ್ಲೇ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ’ ಎಂದು ತಿಳಿಸಿದರು. 

 ಆಲ್ಝೈಮರ್ ರೋಗದಿಂದ ಬಳಲುತ್ತಿರುವ ರೋಗಿಯನ್ನು ಶುಶ್ರೂಷೆ ಮಾಡುವ ಕೇರ್‍ಟೇಕರ್ ಪಾತ್ರವನ್ನು ನಿರ್ವಹಿಸಿಸುತ್ತಿದ್ದೇನೆ ಎಂದು ಮಾತು ಶುರು ಮಾಡಿದ ಪ್ರಿಯಾಂಕಾ, ‘ಕಮಲಾ ನನ್ನ ಪಾತ್ರದ ಹೆಸರು. ನಾನು ಕಳೆದ 25 ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದರೂ, ಮಹಿಳಾ ನಿರ್ದೇಶಕಿಯ ಜೊತೆಗೆ ಪೂರ್ಣಪ್ರಮಾಣದಲ್ಲಿ ಕೆಲಸ ಮಾಡಿದ್ದು ಕಡಿಮೆಯೇ. ಅಪರ್ಣಾ ಸೇನ್‍ ನಿರ್ದೇಶನದ ಒಂದು ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ನಟಿಸಿದ್ದೆ. ಈಗ ಇದೇ ಮೊದಲ ಬಾರಿಗೆ ಕಿರಿಯ ವಯಸ್ಸಿನ ನಿರ್ದೇಶಕಿಯ ಜೊತೆಗೆ ಕೆಲಸ ಮಾಡುತ್ತಿದ್ದೇನೆ. ಸನನ್ನ ತಂದೆ ಉತ್ತರ ಪ್ರದೇಶದವರು. ಹಾಗಾಗಿ, ನನಗೆ ಹಿಂದಿ ಮಾತನಾಡಲು ಹಾಗೂ ಓದಲು ಬರುತ್ತದೆ’ ಎಂದರು.

‘ಸೆಪ್ಟೆಂಬರ್ 21’ ಚಿತ್ರವನ್ನು ಬೆಲ್ಜಿಯಂ ಮೂಲದ ನಿರ್ಮಾಣ ಸಂಸ್ಥೆ ಜಂಟಿ ಸಹಯೋಗದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

  1. хороших отзывов – полно ) просто РјРЅРѕРіРёРµ РЅРµ пишут РѕСЃРѕР±Рѕ Рѕ качестве товара. пришло, прёт, зашибись. http://www.pageorama.com/?p=ufyiicohyf Заказал РІ понедельник…

One thought on “ಮಗನ ಚಿತ್ರಕ್ಕೆ Script ಪೂಜೆ, ಅಮ್ಮನ ಚಿತ್ರಕ್ಕೆ ಮುಹೂರ್ತ; ಪ್ರಿಯಾಂಕಾ ಹೊಸ ಚಿತ್ರ ಪ್ರಾರಂಭ

Leave a Reply

Your email address will not be published. Required fields are marked *