ಜನಾರ್ಧನ ರೆಡ್ಡಿ ಮಗನ ಚಿತ್ರ ಯಾಕೆ ಅಷ್ಟೊಂದು ವಿಳಂಬ ಆಯ್ತು ಗೊತ್ತಾ?

ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ ಮಗ ಕಿರೀಟಿ, ‘ಜ್ಯೂನಿಯರ್’ ಎಂಬ ಚಿತ್ರದಲ್ಲಿ ನಟಿಸುತ್ತಿರುವುದು, ಆ ಚಿತ್ರದ ಮುಹೂರ್ತ ಸುಮಾರು ಮೂರು ವರ್ಷಗಳ ಹಿಂದೆ ಆಗಿದ್ದು ನೆನಪಿರಬಹುದು. ಈ ನಡುವೆ ಚಿತ್ರ ಸುದ್ದಿಯೇ ಇರಲಿಲ್ಲ. ಈಗ ಚಿತ್ರದ ಕೆಲಸಗಳು ಮುಗಿದಿದ್ದು, ಜುಲೈ 18ರಂದು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಮೊದಲ ಹಂತವಾಗಿ ಚಿತ್ರದ ಪ್ರಚಾರ ಕೆಲಸಗಳು ಪ್ರಾರಂಭವಾಗಿದ್ದು, ಒಂದು ಹಾಡು ಸಹ ಬಿಡುಗಡೆಯಾಗಿದೆ.
ದೇವಿ ಶ್ರೀಪ್ರಸಾದ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ‘ಲೆಟ್ಸ್ ಲೀವ್ ದಿಸ್ ಮೂವೆಂಟ್ …’ ಹಾಡಿಗೆ ಪವನ್ ಭಟ್ ಸಾಹಿತ್ಯ ಬರೆದಿದ್ದು, ನಕುಲ್ ಅಭಯಂಕರ್ ಧ್ವನಿಯಾಗಿದ್ದಾರೆ. ಈ ಹಾಡು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಆದಿತ್ಯ ಮ್ಯೂಸಿಕ್ ಚಾನೆಲ್‍ನಲ್ಲಿ ಬಿಡುಗಡೆ ಆಗಿದೆ. ಈ ಹಾಡನ್ನು ರವಿಚಂದ್ರನ್ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲ, ಚಿತ್ರದ ಪ್ರಮುಖ ಪಾತ್ರದಲ್ಲೂ ಅವರು ನಟಿಸಿದ್ದಾರೆ.

ಇಷ್ಟಕ್ಕೂ ಚಿತ್ರ ತಡವಾಗಿದ್ದೇಕೆ? ಈ ಕುರಿತು ಮಾತನಾಡುವ ಕಿರೀಟಿ, ‘ಅದಕ್ಕೆ ಕಾರಣ ಫೈಟ್ ಮಾಡುವಾಗ ನನಗೆ ಬೆನ್ನು ಇಂಜೂರಿ ಆಗಿತ್ತು. ಇದರಿಂದ ಕೆಲವು ಸಮಯ ವಿಶ್ರಾಂತಿ ಪಡೆಯಬೇಕಾಯಿತು. ಹಾಗಾಗಿ, ಚಿತ್ರ ಸ್ವಲ್ಪ ವಿಳಂಬವಾಯಿತು. ಇದರ ಹೊರತು ಬೇರೆ ಕಾರಣವಿಲ್ಲ. ರವಿ ಸರ್ ಜೊತೆ 25 ದಿನ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಇದು ನನ್ನ ಪುಣ್ಯ. ಅವರಿಂದ ತುಂಬಾ ವಿಷಯಗಳನ್ನು ಕಲಿತೆ’ ಎಂದರು.
ಈ ಚಿತ್ರದಲ್ಲಿ ರವಿಚಂದ್ರನ್, ಕಿರೀಟಿಯ ತಂದೆಯಾಗಿ ಕಾಣಿಸಿಕೊಂಡಿದ್ದಾರಂತೆ. ‘ಇದೊಂದು ಫ್ಯಾಮಿಲಿ ಚಿತ್ರ. ಅಪ್ಪ-ಮಗನ ಬಾಂಧವ್ಯದ ಕುರಿತಾದ ಚಿತ್ರ. ಚಿತ್ರ ನೋಡಿ ಹೊರಬರುತ್ತಿದ್ದಂತೆ ಕಣ್ಣಲ್ಲಿ ನೀರು ಬರುತ್ತದೆ. ಈ ಚಿತ್ರದಲ್ಲಿ ಜೆನಿಲಿಯಾ ಅವರದ್ದು ನನ್ನ ಮಗಳ ಪಾತ್ರ. ನಿರ್ದೇಶಕ ರಾಧಾಕೃಷ್ಣ ಕಥೆ ಹೇಳೋದು ಕಿವಿಯಲ್ಲಿ ಪಿಸುಗುಟ್ಟಿದಂತೆ ಇರುತ್ತದೆ. ಆದರೆ, ಅವರು ಹೇಳುವ ಕಥೆ ಮನಸ್ಸು ಮುಟ್ಟುತ್ತದೆ. ಇದೊಂದು ಲಾಂಗ್ ಜರ್ನಿ. ಸಿನಿಮಾ ಶುರುವಾಗಿ ಮೂರು ವರ್ಷಗಳಾಗಿವೆ. ಚಿತ್ರದ ರಷಸ್ ನೋಡಿದಾಗ ಹ್ಯಾಪಿ ಜರ್ನಿ ಎಂದನಿಸಿತು. ಒಂದು ಸಿನಿಮಾ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎನ್ನುವುದು ಮುಖ್ಯವಲ್ಲ, ಎಷ್ಟು ಸಮಯ ಕೊಡಿಸುತ್ತದೆ ಎನ್ನುವುದು ಬಹಳ ಮುಖ್ಯ’ ಎಂದರು.

ಈ ತರಹದ ಕಥೆ ಆಯ್ಕೆ ಮಾಡಿಕೊಳ್ಳುವುದಕ್ಕೆ ಧೈರ್ಯ ಬೇಕು ಎನ್ನುವ ರವಿಚಂದ್ರನ್, ‘ಇಡೀ ಸಿನಿಮಾದಲ್ಲಿ ಕಿರೀಟಿ ಕಾಣಿಸಿಕೊಳ್ಳಬಹುದಿತ್ತು. ಆದರೆ, ಎಲ್ಲರಿಗೂ ಅವಕಾಶವಿರುವ ಒಂದು ಚಿತ್ರವನ್ನು ಕಿರೀಟಿ ಆಯ್ಕೆ ಮಾಡಿಕೊಂಡಿದ್ದಾರೆ. ನಾನು ಮೆರೆಯೋದಕ್ಕಿಂತ ಸಿನಿಮಾ ನನ್ನನ್ನು ಮೆರೆಸಬೇಕು ಎಂದು ಚಿತ್ರ ಮಾಡಿದ್ದಾರೆ. ಇವತ್ತಿನ ಯುವಕರು ಈ ತರಹದ ಕಥೆ ಒಪ್ಪಿಕೊಳ್ಳೋದು ಬಹಳ ಅಪರೂಪ’ ಎಂದರು.
ರಾಧಾಕೃಷ್ಣ ರೆಡ್ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ಜ್ಯೂನಿಯrರರ’ ಚಿತ್ರವನ್ನು ವಾರಾಹಿ ಫಿಲ್ಮಂ ಪ್ರೊಡಕ್ಷನ್ ನಿರ್ಮಿಸಿದೆ. ‘ಬಾಹುಬಲಿ’ ಖ್ಯಾತಿಯ ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕಿರೀಟಿ ಎದುರು ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದಾರೆ.

ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
[…] […]
[…] ಹಳೆಯ ‘ರಾಜದ್ರೋಹಿ’ ಹೊಸ ರೂಪದಲ್ಲಿ ಬಿಡುಗಡೆಗೆ ಸಜ್ಜು … […]
[…] […]
[…] 250 ದಿನಗಳ ಚಿತ್ರೀಕರಣದ ನಂತರ ‘Kantara Chapter 1’ ಸಂಪೂರ್ಣ […]
https://the.hosting/