ಯಶ್‍ ಮನೆ ಸಿನಿಮಾ ಎಂದರೆ ಇಡೀ ದೇಶ ನೋಡುತ್ತದೆ: ಯಶ್‍ ತಾಯಿ ಪುಷ್ಪಾ

ಯಶ್‍ ಅವರ ತಾಯಿ ಪುಷ್ಪಾ, ಪಿಎ (ಪುಷ್ಪಾ ಅರುಣ್‍ ಕುಮಾರ್‌) ಎಂಬ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಅದರಡಿ ‘ಕೊತ್ತಲವಾಡಿ’ (Kothalavadi) ಎಂಬ ಚಿತ್ರ ನಿರ್ಮಿಸಿದ್ದಾರೆ. ಈ ಚಿತ್ರದ ಟೀಸರನ್ನು ನಟ ಶರಣ್‍ (Sharan) ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

‘ಕೊತ್ತಲವಾಡಿ’ ಚಿತ್ರ ಪ್ರಾರಂಭವಾಗಿ ಇಷ್ಟು ದಿನವಾದರೂ ಯಾಕೆ ಈ ವಿಷಯವಾಗಿ ಮಾತನಾಡಿರಲಿಲ್ಲ. ಇಂಥದ್ದೊಂದು ಪ್ರಶ್ನೆಯನ್ನು ಪುಷ್ಪಾ ಅವರ ಮುಂದಿಟ್ಟರೆ, ‘ನಾವು ಮಾತನಾಡಬಾರದು. ನಮ್ಮ ಕೆಲಸ ಮಾತನಾಡಬೇಕು’ ಎನ್ನುತ್ತಾರೆ.

‘ಯಶ್‍ ಮನೆ ಸಿನಿಮಾ ಎಂದರೆ ಇಡೀ ದೇಶ ನೋಡುತ್ತದೆ. ಅದಕ್ಕೆ ತಕ್ಕ ಹಾಗೆ ಮಾಡುವುದಾದರೆ ಮಾಡಿ ಎಂದಿದ್ದೆ. ಅವರಿಗೆ ಏನೋ ಬೇಕೋ ಎಲ್ಲವನ್ನೂ ಕೊಟ್ಟಿದ್ದೇವೆ. ಯಾವುದಕ್ಕೂ ನಿರ್ಬಂಧ ಮಾಡಿಲ್ಲ. ಅದಕ್ಕೆ ಪ್ರತಿಯಾಗಿ ಒಳ್ಳೆಯ ಚಿತ್ರ ಕೊಡಬೇಕು ಎಂದು ಹೇಳಿದ್ದೆ. ಅವರು ಒಳ್ಳೆಯ ಚಿತ್ರ ಮಾಡಿಕೊಟ್ಟಿದ್ದಾರೆ. ಮೊದಲು ನಂಬಿಕೆ ಮುಖ್ಯ. ನಂಬಿಕೆ ಇಲ್ಲದಿದ್ದರೆ ಏನೂ ಮಾಡೋಕೆ ಆಗಲ್ಲ. ಯಶ್‍ ಸಹ ಒಂದು ಕಾಲಕ್ಕೆ ಹೊಸಬ. ಅವನನ್ನು ಯಾರೋ ನಂಬಿ ಚಿತ್ರ ಮಾಡದಿದ್ದರೆ, ಅವಕಾಶ ಸಿಗುತ್ತಿರಲಿಲ್ಲ. ಇವರನ್ನೂ ನಂಬಿ ಅವಕಾಶ ಕೊಟ್ಟಿದ್ದೇವೆ. ಇವರು ಸಹ ನಂಬಿಕೆ ಉಳಿಸಿಕೊಳ್ಳಬೇಕು’ ಎಂದರು.

ತಮ್ಮ ನಿರ್ಮಾಣದ ಚಿತ್ರದಲ್ಲಿ ಯಶ್‍ ತಲೆ ಹಾಕುವುದಿಲ್ಲ ಎನ್ನುವ ಅವರ ತಾಯಿ, ‘ನಾವು ಚಿತ್ರ ಮಾಡುತ್ತಿರುವ ವಿಷಯ ಯಶ್‍ಗೆ ಗೊತ್ತಿದೆ. ಆದರೆ, ಅವನು ತಲೆ ಹಾಕುವುದಿಲ್ಲ. ಅದೇ ರೀತಿ ಅವನ ವಿಷಯದಲ್ಲಿ ನಾವು ತಲೆ ಹಾಕುವುದಿಲ್ಲ. ನಾವು ಒಂದು ದಿನ ಅವನ ಸೆಟ್‍ಗೆ ಹೋಗಿ ನೋಡಿಲ್ಲ. ಅವನು ಶೂಟಿಂಗ್‍ನಲ್ಲಿದ್ದಾನೆ. ಒಂದೂವರೆ ಎರಡು ವರ್ಷಗಳ ಕಾಲ ಸಿಗುವುದಿಲ್ಲ ಎಂದು ಹೇಳಿದ್ದಾನೆ. ಮುಂಬೈನಲ್ಲಿ ಚಿತ್ರೀಕರಣದಲ್ಲಿರುವುದರಿಂದ ಒಂದು ದಿನ ಮನೆಗೆ ಬರಬೇಕೆಂದರೂ ಅನುಮತಿ ಪಡೆದು ಬರಬೇಕು’ ಎಂದರು.

‘ಕೊತ್ತಲವಾಡಿ’ ಚಿತ್ರವನ್ನು ಶ್ರೀರಾಜ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ವಿಕಾಸ್‌ ವಸಿಷ್ಠ ಸಂಗೀತ, ಅಭಿನಂದನ್‌ ಕಶ್ಯಪ್‌ ಹಿನ್ನೆಲೆ ಸಂಗೀತ, ಕಾರ್ತಿಕ್‍ ಛಾಯಾಗ್ರಹಣವಿದೆ. ಚಿತ್ರದಲ್ಲಿ ಪೃಥ್ವಿ ಅಂಬಾರ್‌, ಕಾವ್ಯ, ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್‍ ನಟರಂಗ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

  1. […] ಯಶ್‍ ಮನೆ ಸಿನಿಮಾ ಎಂದರೆ ಇಡೀ ದೇಶ ನೋಡುತ್ತದೆ: ಯಶ್‍ ತಾಯಿ ಪುಷ್ಪಾ […]

One thought on “ಯಶ್‍ ಮನೆ ಸಿನಿಮಾ ಎಂದರೆ ಇಡೀ ದೇಶ ನೋಡುತ್ತದೆ: ಯಶ್‍ ತಾಯಿ ಪುಷ್ಪಾ

Leave a Reply

Your email address will not be published. Required fields are marked *