ಇದು ನಾಯಿಯ ಆತ್ಮದ ಕಥೆ; ಹಾರರ್ ಚಿತ್ರದಲ್ಲಿ ರೇಬಿಸ್ ಕುರಿತು ಎಚ್ಚರಿಕೆ

ಪ್ರಾಣಿಗಳನ್ನು ಅದರಲ್ಲೂ ಶ್ವಾನಗಳನ್ನು ಪ್ರಮುಖವಾಗಿಟ್ಟುಕೊಂಡು ಹಲವು ಚಿತ್ರಗಳು ಇದುವರೆಗೂ ಕನ್ನಡದಲ್ಲಿ ಬಂದಿವೆ. ಈ ಸಾಲಿಗೆ ಹೊಸ ಸೇರ್ಪಡೆ ‘ನಾಯಿ ಇದೆ ಎಚ್ಚರಿಕೆ’.
ನಾಯಿ ಸಾಕಿರುವವರ ಮನೆಯ ಮುಂದೆ ಸಾಮಾನ್ಯವಾಗಿ ‘ನಾಯಿ ಇದೆ ಎಚ್ಚರಿಕೆ’ ಎಂಬ ಬೋರ್ಡು ಕಾಣುತ್ತದೆ. ಈಗ ಇದೇ ಚಿತ್ರವೊಂದರ ಶೀರ್ಷಿಕೆಯಾಗಿದೆ. ಈ ಚಿತ್ರವನ್ನು ಡಾ. ಲೀಲಾ ಮೋಹನ್ ನಿರ್ಮಿಸುವುದರ ಜೊತೆಗೆ ಚಿತ್ರದಲ್ಲಿ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಇಂದ್ರಜಿತ್ ಲಂಕೇಶ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಪ್ರಥಮ್ ಸಹ ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಚಿತ್ರಕ್ಕೆ ಕಲಿ ಗೌಡ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ‘ತನಿಖೆ’ ಎಂಬ ಚಿತ್ರ ನಿರ್ದೇಶಿಸಿದ್ದ ಅವರಿಗೆ ನಿರ್ದೇಶಕನಾಗಿ ಇದು ಎರಡನೇ ಚಿತ್ರ. ‘ನಾಯಿ ನಿಯತ್ತಿನ ಪ್ರಾಣಿ ಎಂದು ಎಲ್ಲರಿಗೂ ಗೊತ್ತು. ಅದು ಬದುಕಿದಾಗಷ್ಟೇ ಅಲ್ಲ. ಸತ್ತ ಮೇಲೂ ಅದರ ನಿಯತ್ತು ಕಡಿಮೆ ಆಗಲ್ಲ ಎಂಬದನ್ನು ನಮ್ಮ ಚಿತ್ರದ ಮೂಲಕ ತೋರಿಸಿದ್ದೇವೆ. ಈ ಚಿತ್ರದಲ್ಲಿ ನಾಯಿ ಸತ್ತು ಆತ್ಮ ಆಗಿರುತ್ತದೆ. ಇದೊಂದು ಕಾಲ್ಪನಿಕ ಕಥೆ. ಈ ಚಿತ್ರದ ಮೂಲಕ ರೇಬೀಸ್ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ’ ಎಂದರು.

ಡಾ. ಲೀಲಾ ಮೋಹನ್ ಇದಕ್ಕೂ ಮೊದಲು ‘ಗಡಿಯಾರ’, ‘ರೋಡ್ ಕಿಂಗ್’ ಮುಂತಾದ ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದಾರೆ. ‘ನಾನು ವೃತ್ತಿಯಲ್ಲಿ ವೈದ್ಯ. ಈ ಚಿತ್ರದಲ್ಲೂ ವೈದ್ಯ. ಈ ಚಿತ್ರದಲ್ಲಿ ಸಸ್ಪೆನ್ಸ್, ಥ್ರಿಲ್ಲರ್, ಹಾರಾರ್, ಸೆಂಟಿಮೆಂಟ್ ಎಲ್ಲಾ ಅಂಶಗಳೂ ಇವೆ. ಇದು ನಾಯಿ ಹಾಗೂ ಮನುಷ್ಯನ ಬಾಂಧವ್ಯದ ಕುರಿತಾದ ಸಿನಿಮಾ. ಜೊತೆಗೆ ನಾಯಿ ಕಚ್ಚುವುದರಿಂದ ಆಗುವ ದುಷ್ಪರಿಣಾಮಗಳನ್ನು ತೋರಿಸಿರುವ ಸಿನಿಮಾ’ ಎಂದರು.
‘ನಾಯಿ ಇದೆ ಎಚ್ಚರಿಕೆ’ ಚಿತ್ರದಲ್ಲಿ ಡಾ. ಲೀಲಾ ಮೋಹನ್ ಅವರಿಗೆ ದಿವ್ಯಶ್ರೀ ನಾಯಕಿಯಾಗಿ ನಟಿಸಿದ್ದು, ಮಿಕ್ಕಂತೆ ಪ್ರಮೋದ್ ಶೆಟ್ಟಿ, ಬಲಾ ರಾಜ್ವಾಡಿ, ದಿನೇಶ್ ಮಂಗಳೂರು, ನಾಗೇಂದ್ರ ಅರಸ್, ಮಾನಸ, ಚಂದನ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ:-
ಹೆಚ್ಚಿನ ಓದಿಗೆ :-
https://the.hosting/
[…] […]
[…] ಹಳೆಯ ‘ರಾಜದ್ರೋಹಿ’ ಹೊಸ ರೂಪದಲ್ಲಿ ಬಿಡುಗಡೆಗೆ ಸಜ್ಜು … […]
[…] […]
[…] 250 ದಿನಗಳ ಚಿತ್ರೀಕರಣದ ನಂತರ ‘Kantara Chapter 1’ ಸಂಪೂರ್ಣ […]
One thought on “ಇದು ನಾಯಿಯ ಆತ್ಮದ ಕಥೆ; ಹಾರರ್ ಚಿತ್ರದಲ್ಲಿ ರೇಬಿಸ್ ಕುರಿತು ಎಚ್ಚರಿಕೆ”