2025ರಲ್ಲಿ 1971ರ ಕಥೆ; ಸುಬ್ಬರಾಯನ ಸರಳ ಪ್ರೇಮಕಥೆ

ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ರೆಟ್ರೋ ಕಥೆಗಳು ಬಂದಿವೆ. ‘1990s’, ‘ವಿಷ್ಣುಪ್ರಿಯಾ’ ಮುಂತಾದ ಚಿತ್ರಗಳಲ್ಲಿ 20 ಚಿತ್ರಗಳ ಹಿಂದಿನ ಕಥೆಗಳನ್ನು ಕಟ್ಟಿಕೊಡಲಾಗಿದೆ. ಇದೀಗ 54 ವರ್ಷಗಳ ಹಿಂದಿನ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ ನಿರ್ದೇಶಕ ಮಂಜು ಸ್ವರಾಜ್.
‘ಶ್ರಾವಣಿ ಸುಬ್ರಹ್ಮಣ್ಯ’, ‘ಶ್ರೀಕಂಠ’, ‘ಮನೆ ಮಾರಾಟಕ್ಕಿದೆ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಮಂಜು ಸ್ವರಾಜ್ ಇದೀಗ ಹೊಸ ಚಿತ್ರದೊಂದಿಗೆ ಬಂದಿದ್ದಾರೆ. ಅದೇ ‘ಸರಳ ಸುಬ್ಬರಾವ್’ (Sarala Subbarao). ಅಜೇಯ್ ರಾವ್ (Krishna Ajai Rao) ಹಾಗೂ ಮಿಶಾ ನಾರಂಗ್ (Misha Narang) ನಾಯಕ- ನಾಯಕಿಯಾಗಿ ನಟಿಸಿರುವ ಈ ಚಿತ್ರದ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ.
ರಿಯಾನ್ ಕ್ರಿಯೇಷನ್ಸ್ ಲಾಂಛನದಲ್ಲಿ ಲೋಹಿತ್ ನಂಜುಂಡಯ್ಯ ನಿರ್ಮಿಸಿರುವ, ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಈ ಹಾಡನ್ನು ಕವಿರಾಜ್ ಬರೆದಿದ್ದಾರೆ. ಈ ಪ್ರೇಮಗೀತೆ ಇದೀಗ ಸರಿಗಮ ಯೂಟ್ಯೂಬ್ ಚಾನಲ್‍ನಲ್ಲಿ ಬಿಡುಗಡೆಯಾಗಿದೆ.

’ಸರಳ ಸುಬ್ಬರಾವ್’ ನಮ್ಮ ಚಿತ್ರದ ನಾಯಕ-ನಾಯಕಿಯ ಹೆಸರು ಎಂದು ಮಾತು ಪ್ರಾರಂಭಿಸುವ ಮಂಜು, ‘ಇದು 1971ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಕನ್ನಡದಲ್ಲಿ ತೀರ ಅಪರೂಪ ಎನ್ನಬಹುದಾದ ರೆಟ್ರೊ ಶೈಲಿಯ ಕಥೆ ಈ ಚಿತ್ರದಲ್ಲಿದೆ. ನನ್ನ ಅಂದಾಜಿನ ಪ್ರಕಾರ ಕನ್ನಡದಲ್ಲಿ ತುಂಬಾ ವರ್ಷಗಳಿಂದ ಇಂತಹ ಕಥೆ ಬಂದಿಲ್ಲ. ಈ ಕಥೆಯನ್ನು ನಾನು ನಿರ್ಮಾಪಕ ಲೋಹಿತ್ ಅವರ ಮುಂದೆ ಹೇಳಿದಾಗ ಅವರು ಕೇಳಿ ತುಂಬಾ ಮೆಚ್ಚಿಕೊಂಡರು. ಈ ಕಥೆಗೆ ಅಜೇಯ್ ರಾವ್ ಅವರೆ ಸೂಕ್ತ ನಾಯಕ ಎನಿಸಿತು. ಅವರು ಕೂಡ ಒಪ್ಪಿಕೊಂಡರು. ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ’ ಎಂದು ಹೇಳಿದರು.
ಈ ಚಿತ್ರದಲ್ಲಿ ನಟಿಸಿರುವುದು ನನ್ನ ವೈಯ್ಯಕ್ತಿಕ ಹಾಗೂ ವೃತ್ತಿಜೀವನದ ಹೆಮ್ಮೆ ಎಂದ ಅಜೇಯ್ ರಾವ್, ‘ಇದೊಂದು ಸುಂದರ ಸಾಂಸಾರಿಕ ಚಿತ್ರ. ನಾನು ಚಿಕ್ಕವಯಸ್ಸಿನಲ್ಲಿ ಸೂಪರ್ ಮ್ಯಾನ್ ಮುಂತಾದ ಚಿತ್ರಗಳನ್ನು ಹೆಚ್ಚು ನೋಡುತ್ತಿದ್ದೆ. ನಾನೇ ಸೂಪರ್ ಹೀರೋ ಅಂದುಕೊಳ್ಳುತ್ತಿದ್ದೆ. ಈ ಚಿತ್ರದಲ್ಲೂ ನಾನು ಸೂಪರ್ ಹೀರೊ. ಈ ಚಿತ್ರದಲ್ಲಿ ರೆಟ್ರೊ ಶೈಲಿಯ ಉಡುಗೆಗಳನ್ನು ಹಾಕಿದಾಗ ನಾನು ನನ್ನ ಪಾತ್ರದಲ್ಲಿ ಡಾ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತನಾಗ್ ಅವರನ್ನು ನೋಡಿದ್ದೇನೆ’ ಎಂದರು ನಾಯಕ ಅಜೇಯ್ ರಾವ್.
‘ಸರಳ ಸುಬ್ಬರಾವ್’ ಚಿತ್ರದಲ್ಲಿ ರಂಗಾಯಣ ರಘು, ವೀಣಾ ಸುಂದರ್, ಶ್ರೀ, ರಘು ರಾಮನಕೊಪ್ಪ, ವಿಜಯ್ ಚಂಡೂರ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಪ್ರದೀಪ್ ಪದ್ಮಕುಮಾರ್ ಛಾಯಾಗ್ರಹಣವಿದೆ.

ಇದನ್ನೂ ಓದಿ:-
https://the.hosting/
[…] […]
[…] ಹಳೆಯ ‘ರಾಜದ್ರೋಹಿ’ ಹೊಸ ರೂಪದಲ್ಲಿ ಬಿಡುಗಡೆಗೆ ಸಜ್ಜು … […]
[…] […]
[…] 250 ದಿನಗಳ ಚಿತ್ರೀಕರಣದ ನಂತರ ‘Kantara Chapter 1’ ಸಂಪೂರ್ಣ […]
2 thoughts on “2025ರಲ್ಲಿ 1971ರ ಕಥೆ; ಸುಬ್ಬರಾಯನ ಸರಳ ಪ್ರೇಮಕಥೆ”