IPL ಕುರಿತ ಹೊಸ ಚಿತ್ರದಲ್ಲಿ Upendra ನಟನೆ

‘UI’ ಚಿತ್ರದ ನಂತರ ಒಂದಿಷ್ಟು ವಿಶ್ರಾಂತಿ ಪಡೆದ ಉಪೇಂದ್ರ (Upendra), ಇದೀಗ ಬ್ಯಾಕ್‌ ಟು ಬ್ಯಾಕ್‍ ಚಿತ್ರಗಳಲ್ಲಿ ನಟಿಸುವುದಕ್ಕೆ ತಯಾರಿ ನಡೆಸಿದ್ದಾರೆ. ಇತ್ತೀಚೆಗೆ ಅವರು ತೆಲುಗಿನ ರಾಮ್‍ ಪೋತಿನೇನಿ ಅಭಿನಯದ ಹೊಸ ಚಿತ್ರದಲ್ಲಿ ನಟಸುತ್ತಿರುವ ಸುದ್ದಿ ಬಂದಿತ್ತು. ನಾಗಣ್ಣ ನಿರ್ದೇಶನದ ‘ಭಾರ್ಗವ’ ಚಿತ್ರದಲ್ಲೂ ಉಪೇಂದ್ರ ತಯಾರಿ ನಡೆಸುತ್ತಿರುವ ಮಾತು ಕೇಳಿ ಬಂದಿತ್ತು. ಇದೆಲ್ಲದರ ಜೊತೆಗೆ ಉಪೇಂದ್ರ ಸದ್ದಿಲ್ಲದೆ ಇನ್ನೊಂದು ಚಿತ್ರದಲ್ಲಿ ನಟಿಸುವುದಕ್ಕೆ ತಯಾರಿ ನಡೆಸಿದ್ದಾರೆ.

‘ಛೂ ಮಂತರ್‌’ ನಿರ್ದೇಶಿಸಿದ್ದ ‘ಕರ್ವ’ ನವನೀತ್‍, ಇದೀಗ ಕ್ರಿಕೆಟ್‍ ಹಿನ್ನೆಲೆಯ ಕಥೆಯೊಂದನ್ನು ತೆರೆಗೆ ತರುವುದಕ್ಕೆ ತಯಾರಿ ನಡೆಸಿದ್ದಾರೆ. ಈ ಚಿತ್ರದಲ್ಲಿ ಉಪೇಂದ್ರ ನಾಯಕರಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಇದುವರೆಗೂ ಹಾರರ್ ಚಿತ್ರಗಳನ್ನೇ ಹೆಚ್ಚಾಗಿ ನಿರ್ದೇಶಿಸಿರುವ ನವನೀತ್‍, ಇದೀಗ ತಮ್ಮ ಪಥ ಬದಲಿ ಕಾಮಿಡಿ ಚಿತ್ರ ನಿರ್ದೇಶನ ಮಾಡುತ್ತಿರುವುದು ವಿಶೇಷ.

ಈ ಚಿತ್ರದ ಒಂದೆಳೆಯನ್ನು ಅವರು ಕೆಲವು ವರ್ಷಗಳ ಹಿಂದೆಯೇ ಹೇಳಿದ್ದರಂತೆ. ಆದರೆ, ಆ ಸಂದರ್ಭದಲ್ಲಿ ಉಪೇಂದ್ರ ತಮ್ಮದೇ ಚಿತ್ರಗಳಲ್ಲಿ ಬ್ಯುಸಿಯಾಗಿದ್ದರು. ಆ ನಂತರ ‘UI’ ನಿರ್ದೇಶನಕ್ಕೆ ಕೈ ಹಾಕಿದರು. ಈಗ ತಮ್ಮೆಲ್ಲಾ ಕೆಲಸಗಳನ್ನು ಮುಗಿಸಿಕೊಂಡಿರುವ ಉಪೇಂದ್ರ, ನವನೀತ್‍ಗೆ ಡೇಟ್ಸ್ ಕೊಟ್ಟಿದ್ದಾರಂತೆ. ಜುಲೈ 15ರ ನಂತರ ಈ ಹೊಸ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. ಇದು ಕ್ರಿಕೆಟ್‍ ಮತ್ತು ಐಪಿಎಲ್‍ ಹಿನ್ನೆಲೆಯ ಕಥೆಯಾದ್ದರಿಂದ, ಚಿತ್ರವನ್ನು ಪ್ಯಾನ್‍ ಇಂಡಿಯಾ ಮಟ್ಟಕ್ಕೆ ಮಾಡುವುದು ನವನೀತ್‍ ಯೋಚನೆ.

ಈ  ಚಿತ್ರದ ಬಹುತೇಕ ಚಿತ್ರೀಕರಣ ನಡೆಯಲಿದ್ದು, ಅದರಲ್ಲೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೆಚ್ಚು ಚಿತ್ರೀಕರಣ ನಡೆಯಲಿದೆಯಂತ. ಒಂದು ಪಕ್ಷ ಚಿತ್ರೀಕರಣಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಸಿಗದಿದ್ದರೆ, ಆಗ ಶ್ರೀಲಂಕದಲ್ಲಿ ಚಿತ್ರೀಕರಣ ಮಾಡುವ ಸಾಧ್ಯತೆ ಇದೆ. ಇದೊಂದು ಕ್ರೀಡೆ ಹಿನ್ನೆಲೆಯ ಚಿತ್ರವಾದರೂ ಹಾಸ್ಯಮಯವಾಗಿ ಸಾಗಲಿದ್ದು, ಉಪೇಂದ್ರ ಈ ಚಿತ್ರದಲ್ಲಿ ಶ್ರೀಮಂತ ಉದ್ಯಮಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ವಿಶೇಷವೆಂದರೆ, ಈ ಚಿತ್ರದಲ್ಲಿ ಉಪೇಂದ್ರ ಜೊತೆಗೆ ಒಬ್ಬ ಚಿರಪರಿಚಿತ ಕ್ರಿಕೆಟ್‍ ಆಟಗಾರ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸದ್ಯದಲ್ಲೇ ಚಿತ್ರದ ಟೀಸರ್‍ ಚಿತ್ರೀಕರಣ ನಡೆಯಲಿದ್ದು, ಅದನ್ನು ಬಿಡುಗಡೆ ಮಾಡುವುದರ ಜೊತೆಗೆ ಚಿತ್ರದ ಮುಹೂರ್ತ ಸಹ ನಡೆಯಲಿದೆಯಂತೆ.

ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

  1. РЈ меня РЅРµ бьётся вторые РёС… трек. И Р±СЂРѕ РІ скайпе РЅРµ РІРёРґРЅРѕ. РњРѕР¶ приняли РёС… посылки РЅР° почте? РўРѕР¶Рµ…

Leave a Reply

Your email address will not be published. Required fields are marked *