ಚಿತ್ರಮಂದಿರಗಳಲ್ಲಿ ‘Ajnathavasi’ ನೋಡದವರಿಗೆ ಓಟಿಟಿಯಲ್ಲಿ ನೋಡಲು ಅವಕಾಶ

ಹೇಮಂತ್ ರಾವ್ ನಿರ್ಮಾಣದ, ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ‘ಅಜ್ಞಾತವಾಸಿ’ (Ajnathavasi) ಚಿತ್ರವು ಏಪ್ರಿಲ್ 11ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಸಾಕಷ್ಟು ನಿರೀಕ್ಷೆಗಳ ನಡುವೆ ಬಿಡುಗಡೆಯಾದ ಚಿತ್ರ, ಬಾಕ್ಸ್ ಆಫೀಸ್‍ನಲ್ಲಿ ಅಷ್ಟೇನೂ ದೊಡ್ಡ ಸದ್ದು ಮಾಡಲಿಲ್ಲ. ಈಗ ಚಿತ್ರವು ಓಟಿಟಿಯಲ್ಲಿ ಪ್ರಸಾರವಾಗುವುದಕ್ಕೆ ಸಜ್ಜಾಗಿದೆ. ಈಗ ಚಿತ್ರವು ಜೀ 5ನಲ್ಲಿ ಇದೇ ಮೇ 28ರಿಂದ ಸ್ಟ್ರೀಮ್ ಆಗಲು ಸಜ್ಜಾಗಿದೆ.
ಇತ್ತೀಚಿನ ದಿನಗಳಲ್ಲಿ ಹಲವು ಕನ್ನಡ ಚಿತ್ರಗಳು ಅಮೇಜಾನ್ ಪ್ರೈಮ್‍ನಲ್ಲಿ ಬಿಡುಗಡೆಯಾಗಿವೆ. ಈ ಚಿತ್ರದ ಸ್ಯಾಟಿಲೈಟ್ ಮತ್ತು ಡಿಜಿಟಲ್ ಹಕ್ಕುಗಳನ್ನು ಜೀ ಕನ್ನಡ ತನ್ನದಾಗಿಸಿಕೊಂಡಿದ್ದು, ಮೊದಲ ಹಂತವಾಗಿ ಜೀ 5 ಓಟಿಟಿಯಲ್ಲಿ ‘ಅಜ್ಞಾತವಾಸಿ’ ಸ್ಟ್ರೀಮ್ ಆಗಲಿದೆ. ನಂತರದ ದಿನಗಳಲ್ಲಿ ಜೀ ಕನ್ನಡದಲ್ಲಿ ಚಿತ್ರವು ಪ್ರಸಾರವಗಲಿದೆ.
ಮಲೆನಾಡಿನಲ್ಲಿ 90ರ ಕಾಲಘಟ್ಟದಲ್ಲಿ ನಡೆಯುವ ಒಂದಿಷ್ಟು ಕೊಲೆಗಳ ಸುತ್ತ ಸುತ್ತುವ ಈ ಚಿತ್ರದಲ್ಲಿ ರಂಗಾಯಣ ರಘು, ಶರತ್ ಲೋಹಿತಾಶ್ವ, ಪಾವನಾ ಗೌಡ, ಸಿದ್ದು ಮೂಲಿಮನಿ, ರವಿಶಂಕರ್ ಗೌಡ, ಯಮುನಾ ಶ್ರೀನಿಧಿ ಮುಂತಾದವರು ನಟಿಸಿದ್ದಾರೆ.
ಈ ‘ಅಜ್ಞಾತವಾಸಿ’ಯ ಒಂದು ವಿಶೇಷತೆಯೆಂದರೆ, ಈ ಚಿತ್ರವನ್ನು ಇಬ್ಬರು ನಿರ್ದೇಶಕರು ರೂಪಿಸಿದ್ದಾರೆ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಖ್ಯಾತಿಯ ಹೇಮಂತ್ ಎಂ. ರಾವ್ ಈ ಚಿತ್ರವನ್ನು ನಿರ್ಮಿಸಿದರೆ, ‘ಗುಳ್ಟು’ ಖ್ಯಾತಿಯ ಜನಾರ್ಧನ್ ಚಿಕ್ಕಣ್ಣ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
‘ಅಜ್ಞಾತವಾಸಿ’ ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಅದ್ವೈತ ಗುರುಮೂರ್ತಿ ಛಾಯಾಗ್ರಹಣವಿದೆ.

ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
Hi there, the whole thing is going well here and ofcourse every one is sharing information, that’s really excellent, keep…
РЈ меня РЅРµ бьётся вторые РёС… трек. Р Р±СЂРѕ РІ скайпе РЅРµ РІРёРґРЅРѕ. РњРѕР¶ приняли РёС… посылки РЅР° почте? РўРѕР¶Рµ…
Increase Blog Trafic – Why Hosting A Blog Carnival Will Bring More Visiitors blog (Guillermo)
бери не пожалеешь. https://linkin.bio/nuwyquqazixow Магазин агонь! Брал как то давно. все ровно!
Наша платформа работает круглосуточно и не знает слова перерыв. Бронировать и планировать можно где угодно: в поезде, на даче, в…
(The Kannada mystery-thriller film Agnyathavasi, directed by Janardhan Chikkanna and produced by Hemanth M Rao, is set to premiere on ZEE5 on May 28, 2025. The film stars Rangayana Raghu in a career-defining role as Inspector Govindu, alongside Paavana Gowda, Siddu Moolimani, Sharath Lohithashwa, and Ravishankar Gowda. Set in the misty Malenadu region of Karnataka during the late 1990s, the story follows Inspector Govindu as he investigates the mysterious death of a local landlord, uncovering long-buried secrets and confronting painful truths of the past.
Agnyathavasi was released theatrically on April 11, 2025, and received generally positive reviews for its performances, atmosphere, and technical aspects, though some critics noted a weak climax. The film’s digital premiere on ZEE5 will allow a wider audience to experience this haunting mystery)
2 thoughts on “ಚಿತ್ರಮಂದಿರಗಳಲ್ಲಿ ‘Ajnathavasi’ ನೋಡದವರಿಗೆ ಓಟಿಟಿಯಲ್ಲಿ ನೋಡಲು ಅವಕಾಶ”