ತಮಿಳಿನ ಐಟಂ ಡ್ಯಾನ್ಸ್ಗೆ ಹೆಜ್ಜೆ ಹಾಕಿದ Tanisha Kuppanda

‘Pen Drive’ ಎಂಬ ಚಿತ್ರದಲ್ಲಿ ನಟಿಸಿರುವ ತನಿಷಾ ಕುಪ್ಪಂಡ, ಆ ಚಿತ್ರದ ಬಿಡುಗಡೆಗೆ ಕಾದಿದ್ದಾರೆ. ಈ ಮಧ್ಯೆ, ಅವರು ಸದ್ದಿಲ್ಲದೆ ತಮಿಳಿನ ಚಿತ್ರವೊಂದರಲ್ಲಿ ನಟಿಸಿ ಬಂದಿದ್ದು, ಇನ್‍ಸ್ಟಾಗ್ರಾಂನಲ್ಲಿ ಅದರ ಮೇಕಿಂಗ್ ವೀಡಿಯೋ ಹಂಚಿಕೊಂಡಿದ್ದಾರೆ.
ಅಂದಹಾಗೆ, ತನಿಷಾ ಕುಪ್ಪಂಡ ನಟಿಸಿರುವ ತಮಿಳು ಚಿತ್ರದ ಹೆಸರು ‘ಎನ್ ಕಾದಲೇ’. ಈ ಚಿತ್ರದ ‘ರಾಸಾನಾ ಓತಾ ರೋಸಾ …’ ಎಂಬ ಐಟಂ ಸಾಂಗ್‍ನಲ್ಲಿ ತನಿಷಾ ಹೆಜ್ಜೆ ಹಾಕಿದ್ದಾರೆ. ಈ ಹಾಡಿನ ಮೇಕಿಂಗ್ ವಿಡಿಯೋವನ್ನು ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಈ ಹಾಡು ಈಗಾಗಲೇ ಬಿಡುಗಡೆ ಆಗಿದೆ. ಈ ಹಾಡಿನ ಚಿತ್ರೀಕರಣದಲ್ಲಿ ತೆರೆಹಿಂದಿನ ತಯಾರಿ ಹೇಗಿತ್ತು ಎಂಬುದರ ಝಲಕ್ ಅನ್ನು ತನಿಷಾ ಹಂಚಿಕೊಂಡಿದ್ದಾರೆ. ಈ ಹಾಡನ್ನು ನೋಡಿರುವ ಅಭಿಮಾನಿಗಳು, ‘ಬೆಂಕಿ ಡ್ಯಾನ್ಸ್’ ಎಂದು ಕೊಂಡಾಡಿದ್ದಾರೆ.
ಕನ್ನಡದಲ್ಲಿ ‘ಪೆನ್ ಡ್ರೈವ್’ ಅಲ್ಲದೆ, ಕೋಮಲ್ ಅಭಿನಯದ ‘Kona’ ಎಂಬ ಚಿತ್ರದಲ್ಲಿ ನಟಿಸುವುದರ ಜೊತೆಗೆ, ಆ ಚಿತ್ರವನ್ನು ಸ್ನೇಹಿತರ ಜೊತೆಗೆ ಸೇರಿ ನಿರ್ಮಾಣ ಮಾಡಿದ್ದಾರೆ ತನಿಷಾ. ಆ ಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ಅವರು, ‘ಮೊದಲು ಆಲ್ಬಂ ಸಾಂಗ್ ಮಾಡೋಣ ಎಂಬ ಯೋಚನೆ ಇತ್ತು. ಆ ಬಳಿಕ ಸಿನಿಮಾ ನಿರ್ಮಾಣಕ್ಕೂ ಕೈಹಾಕುವ ಆಸೆ ಇತ್ತು. ಎಲ್ಲಾ ಸ್ನೇಹಿತರು ಜೊತೆಗೂಡಿ ಸಿನಿಮಾ ಶುರು ಮಾಡಿದ್ದೇವೆ’ ಎಂದು ಹೇಳಿದ್ದರು.
ಇದಕ್ಕೂ ಮುನ್ನ ‘ಬಿಗ್ ಬಾಸ್’ ರಿಯಾಲಿಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತನಿಷಾ, ಗುರು ದೇಶಪಾಂಡೆ ನಿರ್ಮಾನದ ‘ಪೆಂಟಗನ್’ ಚಿತ್ರದಲ್ಲೂ ನಟಿಸಿದ್ದರು.
ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
My brother recommended I might like this website. He was totally right. This post truly made my day. You cann’t…
Респектос бразы радуете РЅРµ только Р РѕСЃСЃРёСЋ РЅРѕ Рё Украину )) отличный магаз https://hoo.be/pufydqicve Так что тут 50:50 если тебя РїСЂРёРјСѓС‚.…
Thanks for every other informative blog. The place else may just I am getting that kind of information written in…
You ought to be a part of a contest for one of the greatest blogs online. I’m going to highly…
Its like you read my mind! You appear to know so much about this, like you wrote the book in…
2 thoughts on “ತಮಿಳಿನ ಐಟಂ ಡ್ಯಾನ್ಸ್ಗೆ ಹೆಜ್ಜೆ ಹಾಕಿದ Tanisha Kuppanda”