‘Bloody Babu’ ಆದ ಯಶಸ್ವ; ಆ್ಯಕ್ಷನ್‍ ಥ್ರಿಲ್ಲರ್ ಚಿತ್ರದಲ್ಲಿ ನಟನೆ

ಈ ಹಿಂದೆ ‘ಅಗ್ನಿಲೊಕ’ ಎಂಬ ಚಿತ್ರದ ಮೂಲಕ ಹೀರೋ ಆಗಿದ್ದ ಯಶಸ್ವ, ಆ ಚಿತ್ರದ ಬಿಡುಗಡೆಗೂ ಮೊದಲೇ ಸದ್ದಿಲ್ಲದೆ ಇನ್ನೊಂದು ಚಿತ್ರವನ್ನು ಮುಗಿಸಿದ್ದಾರೆ. ಈ ಬಾರಿ ಅವರ ‘ಬ್ಲಡಿ ಬಾಬು’ (Bloody Babu) ಎಂಬ ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಯಶಸ್ವ, ಜನಪ್ರಿಯ ನಿರ್ಮಾಪಕ, ಛಾಯಾಗ್ರಾಹಕ ಮತ್ತು ನಿರ್ಮಾಪಕರ ಸಂಘದ ಸ್ಥಾಪಕರಾದ ಎಚ್‍.ಎಂ.ಕೆ. ಮೂರ್ತಿ ಅವರ ಮೊಮ್ಮಗ, ‘ಲಿಪ್‍ಸ್ಟಿಕ್ ಮರ್ಡರ್’, ‘ಜೋಕರ್ ಜೋಕರ್’, ‘ಸೈಕೋಮ್ಯಾಕ್ಸ್’, ‘ಅಗ್ನಿಲೋಕ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ರಾಜೇಶ್‍ ಮೂರ್ತಿ ಅವರ ಮಗ. ಈಗ ರಾಜೇಶ್‍ ಮೂರ್ತಿ, ತಮ್ಮ ಮಗನಿಗಾಗಿ ಈ ಚಿತ್ರವನ್ನು ನಿರ್ಮಿಸಿ-ನಿರ್ದೇಶನ ಮಾಡಿದ್ದಾರೆ.

ಇದೇ ಜೂನ್ ತಿಂಗಳಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರವನ್ನು ಏಂಜಲ್ ಡ್ರೀಮ್ಸ್ ಎಂಟರ್‍ಟೈನ್‍ಮೆಂಟ್ಸ್ ಮೂಲಕ ಡೋಮ್ನಿಕ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.  ಸೈಕಲಾಜಿಕಲ್, ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಬ್ಲಡಿ ಬಾಬು’ ಚಿತ್ರಕ್ಕೆ ಬೆಂಗಳೂರು, ನಂದಿ ಹಿಲ್ಸ್ ಹಾಗೂ ಚಿಕ್ಕಮಗಳೂರು ಸುತ್ತಮುತ್ತ ಚಿತ್ರಕರಣ ಮಾಡಲಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ರೀರೆಕಾರ್ಡಿಂಗ್ ಕಾರ್ಯ ನಡೆಯುತ್ತಿದೆ.

ಸಂಹೋಹನದ ಮೂಲಕ ಎದುರಿದ್ದವರನ್ನು ತನ್ನ ಕೈವಶ ಮಾಡಿಕೊಳ್ಳುವ ತಂತ್ರ ಕಲಿತ ಖಳನಾಯಕನ ವಿರುದ್ದ, ತನ್ನ ಬುದ್ದಿ ಮತ್ತು ಶಕ್ತಿಯನ್ನು ಉಪಯೋಗಿಸಿ ನಾಯಕ ಹೇಗೆ ಗೆದ್ದು ಬರುತ್ತಾನೆ ಎನ್ನುವುದೇ ಚಿತ್ರದ ಚಿತ್ರದ ಕಥೆಯಂತೆ. ಈ ಚಿತ್ರವನ್ನು ರಾಜೇಶ್‍ ಮೂರ್ತಿ ನಿರ್ದೇಶನ ಮಾಡುವುದರ ಜೊತೆಗೆ ಕಥೆ, ಚಿತ್ರಕಥೆ ಬರೆದು ಸಂಕಲನವನ್ನೂ ಮಾಡಿದ್ದಾರೆ.

ನವನಟಿ  ಸ್ಮಿತಾ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಬಾಲಿವುಡ್ ನಲ್ಲಿ ಗುರುತಿಸಿಕೊಂಡಿರುವ ದಿಲೀಪ್ ಕುಮಾರ್ ಅವರು  ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ. ನಟ-ರಾಜಕಾರಣಿ ನೆ.ಲ. ನರೇಂದ್ರ ಬಾಬು ಅವರು ಚಿತ್ರದಲ್ಲಿ ನಾಯಕಿಯ ತಂದೆಯ ಪಾತ್ರ ನಿರ್ವಹಿಸಿದ್ದಾರೆ.

‘ಬ್ಲಡಿ ಬಾಬು ಚಿತ್ರದಲ್ಲಿ ಮೂರು ಹಾಡುಗಳಿದ್ದು, ನಿತೀಶ್‍ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ವಿನೋದ್ ಆರ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.

ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

  1. Актуальные тенденции 2026 года в бонусной политике букмекеров: анализ фрибетов, промо-купонов и программ лояльности; в тексте, в середине объяснения, даётся…

  2. E28BET-এ স্বাগতম – এশিয়া প্যাসিফিকের নং 1 অনলাইন জুয়া সাইট। বোনাস, উত্তেজনাপূর্ণ গেম এবং একটি বিশ্বস্ত অনলাইন বেটিং অভিজ্ঞতা উপভোগ…

Leave a Reply

Your email address will not be published. Required fields are marked *