‘ಭಾರ್ಗವ’ನ ಜೊತೆಯಾದ Ankitha Amar; ಉಪೇಂದ್ರ ಹೊಸ ಚಿತ್ರಕ್ಕೆ ನಾಯಕಿ

Ankitha Amar

ಕಳೆದ ವರ್ಷ ಬಿಡುಗಡೆಯಾದ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದಲ್ಲಿ ತಮ್ಮ ನಟನೆ ಮೂಲಕ ಗಮನ ಸೆಳೆದವರು ಕಿರುತೆರೆ ನಟಿ ಅಂಕಿತಾ ಅಮರ್. ನಾಯಕಿಯಾಗಿ ನಟಿಸಿದ ಮೊದಲ ಚಿತ್ರದಲ್ಲೇ ಮೆಚ್ಚುಗೆ ಪಡೆದಿದ್ದ ಅವರು, ಇದೀಗ ಅವರು ‘ಭಾರ್ಗವ’ (Bhargava) ಚಿತ್ರದಲ್ಲಿ ಉಪೇಂದ್ರ ಎದುರು ನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬ ಮಾತೊಂದು ಕೇಳಿ ಬರುತ್ತಿದೆ.

ಉಪೇಂದ್ರ ಅಭಿನಯದ ಹೊಸ ಚಿತ್ರವು ಯುಗಾದಿ ಹಬ್ಬದಂದು ಘೋಷಣೆಯಾಗಿತ್ತು. ಆ ನಂತರ ಅಕ್ಷಯ ತೃತೀಯ ದಿನದಂದು ಚಿತ್ರಕ್ಕೆ ‘ಭಾರ್ಗವ’ ಎಂಬ ಹೆಸರನ್ನು ಇಡಲಾಗಿತ್ತು. ಇದೀಗ ಚಿತ್ರಕ್ಕೆ ಅಂಕಿತಾ ಅಮರ್‌ (Ankitha Amar) ನಾಯಕಿಯಾಗಿ ಆಯ್ಕೆಯಾಗಿರುವ ಸುದ್ದಿ ಬಂದಿದೆ. ಈ ಚಿತ್ರಕ್ಕೆ A Violent Family Man ಎಂಬ ಅಡಿಬರಹವಿದೆ.

ಕನ್ನಡ ಚಿತ್ರರಂಗ ಕಂಡ ಜನಪ್ರಿಯ ನಟ-ನಿರ್ದೇಶಕ ಜೋಡಿಗಳ ಪೈಕಿ ಉಪೇಂದ್ರ ಮತ್ತು ನಾಗಣ್ಣ ಅವರ ಜೋಡಿ ಸಹ ಒಂದು. ಈ ಹಿಂದೆ ‘ಗೌರಮ್ಮ’, ‘ಕುಟುಂಬ’, ‘ಗೋಕರ್ಣ’ ಮತ್ತು ‘ದುಬೈ ಬಾಬು’ ಚಿತ್ರಗಳನ್ನು ಈ ಜೋಡಿ ಮಾಡಿತ್ತು. ಇದೀಗ ಐದನೇ ಚಿತ್ರಕ್ಕೆ ಈ ಜೋಡಿ ಕೈಜೋಡಿಸಿದೆ.

ರಾಂಬಾಬು ಪ್ರೊಡಕ್ಷನ್ಸ್ ಬ್ಯಾನರ್‌ ಅಡಿ ‘ಭಾರ್ಗವ’ ಚಿತ್ರವನ್ನು ‘ಸೂರಪ್ಪ’ ಬಾಬು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ‍ಜನ್ಯ ಸಂಗೀತ, ರಾಜರತ್ನಂ ಅವರ ಛಾಯಾಗ್ರಹಣವಿದೆ. ಈ ಚಿತ್ರಕ್ಕೆ ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

ಕಳೆದ ವರ್ಷ ಅಂಕಿತಾ ಅಮರ್‌ ಅಭಿನಯದ ‘ಇಬ್ಬನಿ ತಬ್ಬಿದ ಇಳೆಯಲಿ’ ಮತ್ತು ‘ಮೈ ಹೀರೋ’ ಎಂಬ ಎರಡು ಚಿತ್ರಗಳಲ್ಲಿ ನಟಿಸಿದ್ದರು. ಆ ನಂತರ ಅಂಕಿತಾ ಅಭಿನಯದ ಯಾವೊಂದು ಚಿತ್ರವೂ ಬಿಡುಗಡೆಯಾಗಿಲ್ಲ. ಈ ಮಧ್ಯೆ, ಅವರು ‘ಅಬ ಜಬ ದಬ’ ಮತ್ತು ‘ಜಸ್ಟ್ ಮ್ಯಾರೀಡ್‍’ ಚಿತ್ರಗಳಲ್ಲಿ ನಟಿಸಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ.

ಇದನ್ನೂ ಓದಿ:-


ಹೆಚ್ಚಿನ ಓದಿಗೆ;-

2 thoughts on “‘ಭಾರ್ಗವ’ನ ಜೊತೆಯಾದ Ankitha Amar; ಉಪೇಂದ್ರ ಹೊಸ ಚಿತ್ರಕ್ಕೆ ನಾಯಕಿ

Leave a Reply

Your email address will not be published. Required fields are marked *