‘ಸ್ನೇಹದ ಕಡಲಲ್ಲಿ’ ಸುಮಂತ್‍; ಇಂದಿನಿಂದ ಸ್ಟಾರ್ ಸುವರ್ಣದಲ್ಲಿ ಹೊಸ ಧಾರಾವಾಹಿ

ಹಿರಿಯ ನಟ ಸುಮನ್‍, ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಯಕರಾಗಿ ಬಂದ ಅವರು ಪೋಷಕ ನಟರಾಗಿಯೂ ಕಾಣಿಸಿಕೊಂಡಿದ್ದಾರೆ. ಈಗ ಇದೇ ಮೊದಲ ಬಾರಿಗೆ ಅವರು ಧಾರಾವಾಹಿಯೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸ್ಟಾರ್‌ ಸುವರ್ಣದಲ್ಲಿ ಇಂದಿನಿಂದ (ಮೇ 12) ಹೊಸ ಧಾರಾವಾಹಿ ‘ಸ್ನೇಹದ ಕಡಲಲ್ಲಿ’ (Snehada Kadalalli) ಆರಂಭವಾಗಲಿದೆ. ಪ್ರೀತಂ ಶೆಟ್ಟಿ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿದೆ.  ಈ ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಸುಮನ್ ತಲ್ವಾರ್, ಚಂದು ಗೌಡ ಹಾಗೂ ಕಾವ್ಯ ಮಹದೇವ್ ಕಾಣಿಸಿಕೊಳ್ಳುತ್ತಿದ್ದಾರೆ.

‘ಸ್ನೇಹದ ಕಡಲಲ್ಲ’ ಕುರಿತು ಮಾತನಾಡುವ ಪ್ರೀತಂ ಶೆಟ್ಟಿ, ‘ಧಾರಾವಾಹಿಗಳಲ್ಲಿ ಒಂದು ಮದುವೆಯನ್ನು ಒಂದು ವಾರ ತೋರಿಸುತ್ತೀರಾ ಎಂಬ ಮಾತು‌ ಕೇಳಿ ಬರುತ್ತದೆ. ಆದರೆ, ನಮ್ಮ ಧಾರಾವಾಹಿಯಲ್ಲಿ ಕೇವಲ ನಾಲ್ಕು ನಿಮಿಷಗಳಲ್ಲಿ ಮದುವೆ ಸನ್ನಿವೇಶ ಮುಕ್ತಾಯವಾಗುತ್ತದೆ. ಸಾಮಾನ್ಯವಾಗಿ ಧಾರಾವಾಹಿಗಳ ಹಿನ್ನೆಲೆ ಸಂಗೀತದಲ್ಲಿ ಸಿನಿಮಾ ಹಾಡುಗಳನ್ನು ಬಳಸಿಕೊಳ್ಳುವುದು ವಾಡಿಕೆ. ಆದರೆ, ನಾವು ಹೊಸ ಹಾಡನ್ನು ಸಿದ್ದ ಮಾಡಿದ್ದೇವೆ‌. ಹೀಗೆ ಹಲವು ವಿಶೇಷಗಳಿರುವ ಈ ಧಾರಾವಾಹಿಯನ್ನು ಪಿಂಗಾರ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗುತ್ತಿದೆ’ ಎಂದರು.

ನಾನು ಚಿತ್ರರಂಗಕ್ಕೆ ಬಂದು 47 ವರ್ಷಗಳಾಯಿತು ಎಂದ ಸುಮನ್‍, ‘ಕನ್ನಡ, ತಮಿಳು, ‌ತೆಲುಗು ಸೇರಿದಂತೆ 11 ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದೇನೆ. ಈ ಧಾರಾವಾಹಿ ನಿರ್ದೇಶಕ ಪ್ರೀತಂ ಶೆಟ್ಟಿ ಅವರ ನಿರ್ದೇಶನದ ಚಿತ್ರದಲ್ಲೂ ನಟಿಸಿದ್ದೇನೆ. ‘ಸ್ನೇಹದ ಕಡಲಲ್ಲಿ’ ನಾನು ನಟಿಸುತ್ತಿರುವ ಮೊದಲ ಕನ್ನಡ ಧಾರಾವಾಹಿ. ಕಥೆ ಇಷ್ಟವಾಯಿತು. ಹಾಗಾಗಿ, ನಾನು ಈ ಧಾರಾವಾಹಿಯಲ್ಲಿ ಅಭಿನಯಿಸಲು ಒಪ್ಪಿಕೊಂಡೆ’ ಎಂದು ಹೇಳಿದರು.

ಚಂದು ಗೌಡ ಮಾತನಾಡಿ, ‘ನಾನು ಕಿರುತೆರೆಗೆ ಬಂದು ಸುಮಾರು 11 ವರ್ಷಗಳಾಯಿತು. ಆನಂತರ ಕೆಲವು ಚಿತ್ರಗಳಲ್ಲೂ ನಟಿಸಿದ್ದೇನೆ. ನನಗೆ ಸಿನಿಮಾದಲ್ಲಿ ಹಾಗೂ ಧಾರಾವಾಹಿಯಲ್ಲಿ ನಟಿಸುವುದು ಎರಡೂ ಒಂದೇ. ಶಿವರಾಜ್ ಅರಸ್ ನನ್ನ ಪಾತ್ರದ ಹೆಸರು. ಸುಮನ್‍ ಅವರು ನನ್ನ ತಂದೆ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಖುಷಿಯಾಗಿದೆ’ ಎಂದರು.

‘ಸ್ನೇಹದ ಕಡಲಲ್ಲಿ’ ಧಾರಾವಾಹಿಯು ಇದೇ ಸೋಮವಾರದಿಂದ (ಮೇ 12) ರಾತ್ರಿ 8.30 ಕ್ಕೆ ಪ್ರಸಾರವಾಗಲಿದೆ.


ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

2 thoughts on “‘ಸ್ನೇಹದ ಕಡಲಲ್ಲಿ’ ಸುಮಂತ್‍; ಇಂದಿನಿಂದ ಸ್ಟಾರ್ ಸುವರ್ಣದಲ್ಲಿ ಹೊಸ ಧಾರಾವಾಹಿ

Leave a Reply

Your email address will not be published. Required fields are marked *