‘ಯಶೋಧರ ಚರಿತೆ’ ಆಧರಿಸಿದ ‘Amruthamathi’ ಚಿತ್ರವನ್ನು ಅಮೇಜಾನ್ ಪ್ರೈಮ್‍ನಲ್ಲಿ ನೋಡಿ …

ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳುವುದರ ಜೊತೆಗೆ ನೊಯ್ಡಾದಲ್ಲಿ ನಡೆದ ನಾಲ್ಕನೇ ಇಂಡಿಯನ್ ವರ್ಲ್ಡ್ ಫಿಲಂ ಫೆಸ್ಟಿವಲ್‍ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದ ಡಾ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಚಿತ್ರ ಇದೀಗ ಅಮೇಜಾನ್ ಪ್ರೈಮ್‍ಗೆ (Amazon Prime Video) ಬಂದಿದೆ.
‘ಅಮೃತಮತಿ’ (Amruthamathi) ಚಿತ್ರವು 13ನೇ ಶತಮಾನದ ಖ್ಯಾತ ಕನ್ನಡ ಕವಿ ಜನ್ನನ ‘ಯಶೋಧರ ಚರಿತೆ’ ಕಾವ್ಯ ಪ್ರಸಂಗವನ್ನು ಆಧರಿಸಿ ಈ ಚಿತ್ರವು ರೂಪುಗೊಂಡಿದೆ. ಈ ಚಿತ್ರದಲ್ಲಿ ಮೂಲ ಕಥನವನ್ನು ಮರುಸೃಷ್ಟಿ ಮಾಡಿ ನಿರೂಪಿಸಿರುವುದು ಒಂದು ವಿಶೇಷ. ಹರಿಪ್ರಿಯಾ, ಅಮೃತಮತಿಯಾಗಿ ಕಾಣಿಸಿಕೊಂಡರೆ, ಕಿಶೋರ್, ಯಶೋಧರನ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಇಂಚರ ಪುಟ್ಟಣ್ಣ ಪ್ರೊಡಕ್ಷನ್ ಲಾಂಛನದಲ್ಲಿ ಪುಟ್ಟಣ್ಣ ನಿರ್ಮಿಸಿರುವ ಅಮೃತಮತಿ ಚಿತ್ರಕ್ಕೆ ಡಾ. ಬರಗೂರು ರಾಮಚಂದ್ರಪ್ಪ ಚಿತ್ರಕತೆ, ಸಂಭಾಷಣೆ ಮತ್ತು ಗೀತರಚನೆ ಮಾಡಿದ್ದಾರೆ. ಚಿತ್ರಕ್ಕೆ ಸುರೇಶ್ ಅರಸ್ ಸಂಕಲನ, ನಾಗರಾಜ್ ಆದವಾನಿಯವರು ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತವಿದೆ.
ಹರಿಪ್ರಿಯಾ ಮತ್ತು ಕಿಶೋರ್ ಅಲ್ಲದೆ, ಚಿತ್ರದಲ್ಲಿ ಹಿರಿಯ ನಟ ಸುಂದರರಾಜ್, ಪ್ರಮೀಳಾ ಜೋಷಾಯ್, ತಿಲಕ್, ಅಂಬರೀಶ್ ಸಾರಂಗಿ, ವತ್ಸಲಾ ಮೋಹನ್, ಸುಪ್ರಿಯಾ ರಾವ್ ಮುಂತಾದವರು ಅಭಿನಯಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ತಾಯಿ ಕಸ್ತೂರ್’ ಚಿತ್ರವು ಅಮೇಜಾನ್ ಪ್ರೈಮ್‍ನಲ್ಲಿ ಬಿಡುಗಡೆಯಾಗಿತ್ತು. ಇದೀಗ ಅವರ ಇನ್ನೊಂದು ಚಿತ್ರ ಅದೇ ಅಮೇಜಾನ್ ಪ್ರೈಮ್‍ಗೆ ಬಂದಿರುವುದು ವಿಶೇಷ.

ಇದನ್ನೂ ಓದಿ:-
[…] […]
[…] […]
[…] Ramayana Rocking Star Yash ಫಸ್ಟ್ ಲುಕ್ […]
[…] Ramayana Rocking Star Yash ಫಸ್ಟ್ ಲುಕ್ […]
[…] Jungle Mangal; ಅರಣ್ಯದಲ್ಲಿ ಬಂಧಿಯಾದ Yash Shetty […]