ಧೀರೇನ್‍ಗೆ ನಾಯಕಿಯಾದ ಪ್ರೇಮ್‍ ಮಗಳು ಅಮೃತಾ; ‘Pabbar’ ಪ್ರಾರಂಭ

Pabbar Amrutha Prem Dheeren Ramkumar

ಧೀರೇನ್‍ ರಾಮ್‍ಕುಮಾರ್ (Dheeren Ramkumar) ಅಭಿನಯದಲ್ಲಿ ‘ಶಾಖಾಹಾರಿ’ ನಿರ್ದೇಶಕ ಸಂದೀಪ್‍ ಸುಂಕದ್ (Sandeep Sunkad) ಚಿತ್ರ ನಿರ್ದೇಶಿಸುತ್ತಾರೆ ಎಂಬುದು ಕಳೆದ ವರ್ಷದ ಸುದ್ದಿ. ಆ ಚಿತ್ರ ಕೊನೆಗೂ ಪ್ರಾರಂಭವಾಗಿದೆ. ಈ ಚಿತ್ರಕ್ಕೆ ‘ನೆನಪಿರಲಿ’ ಪ್ರೇಮ್‍ ಮಗಳು ಅಮೃತಾ ಪ್ರೇಮ್‍ (Amrutha Prem) ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

‘ಪಬ್ಬಾರ್’ ಚಿತ್ರವನ್ನು ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿ ನಿರ್ಮಾಣ ಮಾಡುತ್ತಿರುವುದು ಶಿವರಾಜಕುಮಾರ್ ಮತ್ತು ಗೀತಾ ಶಿವರಾಜಕುಮಾರ್‌. ಮಹಾಲಕ್ಷಮೀ ಲೇಔಟ್‍ನ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದ್ದು, ಈ ಮುಹೂರ್ತದಲ್ಲಿ ಶಿವರಾಜಕುಮಾರ್, ಗೀತಾ ಶಿವರಾಜಕುಮಾರ್, ರಾಮ್‍ಕುಮಾರ್‌, ಪೂರ್ಣಿಮಾ ರಾಮ್‍ಕುಮಾರ್, ನಾಗಶೇಖರ್,‍ ಶ್ರೀನಗರ ಕಿಟ್ಟಿ ಮುಂತಾದವರು ಹಾಜರಿದ್ದು, ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜಕುಮಾರ್, ‘ಸಂದೀಪ್‍ ಬಂದು ಕಥೆ ಹೇಳಿದಾಗ, ಬಹಳ ಖುಷಿ ಆಯ್ತು. ‘ಶಾಖಾಹಾರಿ’ ವೆಜಿಟೇರಿಯನ್‍ ಆಗಿತ್ತು. ಇದು ನಾನ್‍-ವೆಜಿಟೇರಿಯರನ್‍. ಏಕೆಂದರೆ, ಚಿತ್ರದಲ್ಲಿ ಎಲ್ಲಾ ತರಹದ ಅಂಶಗಳು ಇವೆ. ನನಗೆ ಕಥೆ ಇಷ್ಟವಾಯ್ತು. ಚಿತ್ರ ನಿರ್ಮಾಣ ಮಾಡುವ ಯೋಚನೆಯಿಂದ ಕಥೆ ಕೇಳಲಿಲ್ಲ. ಸುಮ್ಮನೆ ಕಥೆ ಕೇಳಿದೆವು. ಇಷ್ಟವಾಗಿದ್ದರಿಂದ ನಾವೇ ನಿರ್ಮಿಸೋಣ ಎಂದು ತೀರ್ಮಾನಿಸಿದೆವು’ ಎಂದರು.

ಪಬ್ಬಾರ್‌ ಎನ್ನುವುದು ಹಿಮಾಚಲ ಪ್ರದೇಶದಲ್ಲಿರುವ ಒಂದು ಕಣಿವೆ. ಅಲ್ಲಿ ಕಥೆ ಸಾಗುವುದರಿಂದ ಚಿತ್ರಕ್ಕೆ ಅದೇ ಹೆಸರನ್ನು ಇಡಲಾಗಿದೆ. ಇಲ್ಲಿ ಪಬ್ಬಾರ್‌ ಒಂದು ಪಾತ್ರವಾಗಿರಲಿದೆಯಂತೆ. ಇದೊಂದು ಅಡ್ವೆಂಚರಸ್‍ ಕ್ರೈಮ್‍ ಥ್ರಿಲ್ಲರ್‌ ಎನ್ನುವ ನಿರ್ದೇಶಕ ಸಂದೀಪ್‍ ಸುಂಕದ್, ‘ಈ ಚಿತ್ರದಲ್ಲಿ ಧೀರೇನ್‍ ಪೊಲೀಸ್‍ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಎರಡು ತರಹದ ಪ್ರಯಾಣಗಳಿವೆ. ಒಂದು ಕೇಸ್‍ ಜರ್ನಿಯಾದರೆ, ಇನ್ನೊಂದು ವೈಯಕ್ತಿಕ ಜರ್ನಿಯೂ ಇದೆ. ಇದರ ಜೊತೆಗೆ ಪಬ್ಬಾರ್‌ (Pabbar) ಸಹ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಪಬ್ಬರ್‌ ಎಂದರೆ ಹಿಮಾಚಲ ಪ್ರದೇಶದ ಒಂದು ಕಣಿವೆ. ಅದು ನದಿ ತೀರ. ಅದು ನಮ್ಮ ಸಿನಿಮಾದ ಮುಖ್ಯ ಪಾತ್ರ’ ಎಂದರು.

ಇದು ತಮಗೆ ಪುನರ್ಜನ್ಮ ಎನ್ನುವ ಧೀರೇನ್‍, ‘ಈ ಚಿತ್ರದಲ್ಲಿ ಒಂದು ವಿಭಿನ್ನ ಪಾತ್ರವಿದೆ. ಈ ಚಿತ್ರಕ್ಕೆ 10 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ಸಾಕಷ್ಟು ತಯಾರಿ ನಡೆಸಿದ್ದೇನೆ’ ಎಂದರು.

‘ಪಬ್ಬಾರ್’ ಚಿತ್ರಕ್ಕೆ ಸಂದೀಪ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ, ಸಂಕಲನವನ್ನೂ ಮಾಡುತ್ತಿದ್ದಾರೆ. ‘ಶಾಖಾಹಾರಿ’ ಚಿತ್ರಕ್ಕೆ ಕೆಲಸ ಮಾಡಿದ ಚಿತ್ರತಂಡವೇ ಇಲ್ಲೂ ಕೆಲಸ ಮಾಡುತ್ತಿದೆ. ವಿಶ್ವಜಿತ್‍ ರಾವ್‍ ಛಾಯಾಗ್ರಹಣ ಮತ್ತು ಮಯೂರ್‌ ಅಂಬೆಕಲ್ಲು ಅವರ ಸಂಗೀತ ಈ ಚಿತ್ರಕ್ಕಿದೆ.

ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

  1. Меня кинули РЅР° 15000. Р’ жабере удалили учетку. РќРµ покупайте ничего. РїРѕС…РѕРґСѓ магазин сливается. https://www.impactio.com/researcher/vetterdj48peter РјРЅРµ продавец так Рё РЅРµ…

  2. Такие как СЏ всегда РѕР±Рѕ всем приобретенном или полученном как РїСЂРѕР±РЅРёРє расписывают количество Рё качество, РЅРѕ такие Р¶Рµ как СЏ…

2 thoughts on “ಧೀರೇನ್‍ಗೆ ನಾಯಕಿಯಾದ ಪ್ರೇಮ್‍ ಮಗಳು ಅಮೃತಾ; ‘Pabbar’ ಪ್ರಾರಂಭ

Leave a Reply

Your email address will not be published. Required fields are marked *