ಬಹಳ ವರ್ಷಗಳ ನಂತರ ಬಾಲಿವುಡ್‍ ಚಿತ್ರದಲ್ಲಿ Priyanka Upendra

Priyanka Upendra

ಪ್ರಿಯಾಂಕಾ ಉಪೇಂದ್ರ (Priyanka Upendra) ಅವರು ಕನ್ನಡ, ತೆಲುಗು, ಬಂಗಾಲಿ ಚಿತ್ರಗಳಲ್ಲಿ ನಟಿಸುವುದರ ಜೊತೆಗೆ ಬಾಲಿವಡ್‍ ಚಿತ್ರಗಳಲ್ಲೂ ನಟಿಸಿದ್ದಾರೆ. ಈಗಾಗಲೇ ಅವರು ‘ಮುಜೆ ಮೇರಿ ಬೀವಿ ಸೆ ಬಚಾವ್‍’, ‘ಸೌತೇಲ’, ‘ದುರ್ಗ’, ‘ಎನಿಮಿ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಬಹಳ ವರ್ಷಗಳ ನಂತರ ಅವರು ಬಾಲಿವುಡ್‍ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.

22 ವರ್ಷದ ಕನ್ನಡತಿ ಕರೆನ್ ಕ್ಷಿತಿ ಸುವರ್ಣ ಇದೀಗ ‘ಸೆಪ್ಟೆಂಬರ್‌ 21’ ಹೆಸರಿನ ಬಾಲಿವುಡ್‌ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಬೆಂಗಳೂರು ಮೂಲದ ಆಲ್ಝೈಮರ್ ರೋಗಿ ಮತ್ತು ಆತನ ಆರೈಕೆ ಮಾಡುವ ನರ್ಸ್‌ವೊಬ್ಬಳ ನಡುವಿನ ಕಥೆಯಲ್ಲಿ ಪ್ರಿಯಾಂಕಾ ಉಪೇಂದ್ರ, ಕೇರ್‌ ಟೇಕರ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ, ಬಾಲಿವುಡ್‌ನ ಪ್ರವೀಣ್ ಸಿಂಗ್ ಸಿಸೋಡಿಯಾ, ಜರೀನಾ ವಹಾಬ್, ಅಮಿತ್ ಬೆಹ್ಲ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಸೆಪ್ಟೆಂಬರ್ 21’ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಕಮಲಾ ಹೆಸರಿನ ಕೇರ್‌ಟೇಕರ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಖಿನ್ನತೆ ಮತ್ತು ಸ್ಮರಣಶಕ್ತಿ ಕಳೆದುಕೊಂಡ 60 ವರ್ಷದ ವ್ಯಕ್ತಿ ರಾಜ್‌ಕುಮಾರ್‌ ಪಾತ್ರದಲ್ಲಿ ಪ್ರವೀಣ್ ಸಿಂಗ್ ಸಿಸೋಡಿಯಾ ನಟಿಸುತ್ತಿದ್ದಾರೆ. ರಾಜ್ ಅವರ ಸ್ಥಿತಿ ಹದಗೆಡುತ್ತಿದ್ದಂತೆ, ಆರೈಕೆದಾರಳಾಗಿ ಕಮಲಾ ಅವರ ಜೀವನಾಡಿಯಾಗುತ್ತಾಳೆ. ರೋಗಿಯ ಆರೈಕೆ ಮಾಡುವ ಮಹಿಳೆಯ ಹೋರಾಟಗಳು, ಕಾಯಿಲೆಯನ್ನು ನಿಭಾಯಿಸುವಾಗ ಎದುರಾಗುವ ಸವಾಲುಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.

ಕರೆನ್ ಕ್ಷಿತಿ ಸುವರ್ಣ ಅವರಿಗೆ ಇದು ಮೊದಲ ಸಿನಿಮಾ ಆದರೂ, ಈ ಹಿಂದೆ ‘ಹೈಡ್ ಅಂಡ್ ಸೀಕ್’ ಎನ್ನುವ ಕಿರುಚಿತ್ರವನ್ನು ನಿರ್ದೇಶಿಸಿದ್ದರು. ಈ ಕಿರುಚಿತ್ರ ಜಾಗತಿಕ ಮಟ್ಟದಲ್ಲಿಯೂ ಗುರುತಿಸಿಕೊಂಡು, ಕಾನ್‍ ಚಿತ್ರೋತ್ಸವ ಸೇರಿ ಹಲವು ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನೂ ಪಡೆದಿದೆ. ಈ ಚಿತ್ರವು ಬೆಲ್ಜಿಯಂ ಮೂಲದ ನಿರ್ಮಾಣ ಸಂಸ್ಥೆ ಫಾಕ್ಸ್ ಆನ್ ಸ್ಟೇಜ್ ಬೆಲ್ಜಿಯಂ, ವಿಸಿಕಾ ಫಿಲ್ಮ್ಸ್, ಫಿಲ್ಮ್ಸ್ ಮ್ಯಾಕ್ಸ್” ಜಂಟಿ ಸಹಯೋಗದಲ್ಲಿ ನಿರ್ಮಾಣವಾಗುತ್ತಿದೆ.

ಈ ಚಿತ್ರವನ್ನು ಮಲಯಾಳಂ ಬರಹಗಾರ ನೆಲ್ಲೂಲಿ ಪಿ. ರಾಜಶೇಖರನ್ ಬರೆದಿದ್ದಾರೆ. ಕನ್ನಡಿಗ ವಿನಯ್ ಚಂದ್ರ ಸಂಗೀತ ಸಂಯೋಜಿಸಿದರೆ, ಅನಿಲ್ ಕುಮಾರ್ ಛಾಯಾಗ್ರಹಣವಿದೆ.

ಸದ್ಯ ಶೂಟಿಂಗ್‌ ಹಂತದಲ್ಲಿರುವ ಈ ಸಿನಿಮಾ, ಅಂತಾರಾಷ್ಟ್ರೀಯ ಮಟ್ಟದ ಸಿನಿಮೋತ್ಸವಗಳಲ್ಲಿ ಪ್ರಶಸ್ತಿಗೆ ಸ್ಪರ್ಧಿಸುವುದರ ಜೊತೆಗೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

  1. KingSize вас РЅРµ отловить РЅРёРіРґРµ, РІ аське нету((( РЅР° страницу прайс РЅРµ заходите, откликнитесь пожалуйста) https://www.divephotoguide.com/user/xacrtuog дай то Р±РѕРі РґР°…

  2. с искреннем уважением к вам! https://kemono.im/weoygnedueo/geroin-po-nizkoi-tsene-kupit сказали отпрака на следующий день после платежа!

One thought on “ಬಹಳ ವರ್ಷಗಳ ನಂತರ ಬಾಲಿವುಡ್‍ ಚಿತ್ರದಲ್ಲಿ Priyanka Upendra

Leave a Reply

Your email address will not be published. Required fields are marked *