Naanu Matthu Gunda 2; ಕನ್ನಡಕ್ಕೆ ಮತ್ತೆ ಬಂದ ಆರ್.ಪಿ. ಪಟ್ನಾಯಕ್; ‘ನಾನು ಮತ್ತು ಗುಂಡ 2’ ಚಿತ್ರಕ್ಕೆ ಸಂಗೀತ

2000ನೇ ದಶಕದಲ್ಲಿ ಕನ್ನಡದಲ್ಲಿ ಹಲವು ಜನಪ್ರಿಯ ಗೀತೆಗಳನ್ನು ನೀಡಿದವರು ಸಂಗೀತ ನಿರ್ದೇಶಕ ಆರ್.ಪಿ. ಪಟ್ನಾಯಕ್. ‘ಜೋಗಿ’ ಪ್ರೇಮ್ ನಿರ್ದೇಶನದ ‘Excuse Me’ ಚಿತ್ರಕ್ಕೆ ಸಂಗೀತ ಸಂಯೋಜಿಸುವ ಮೂಲಕ ಕನ್ನಡಕ್ಕೆ ಬಂದ ಆರ್.ಪಿ, ನಂತರ ಹಲವು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದರು. ಈಗ ಬಹಳ ವರ್ಷಗಳ ನಂತರ ಅವರು ‘ನಾನು ಮತ್ತು ಗುಂಡ 2’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.
‘ನಾನು ಮತ್ತು ಗುಂಡ 2’ (Naanu Matthu Gunda 2) ಚಿತ್ರದ ಟೀಸರ್ ಕಳೆದ ವಾರವಷ್ಟೇ ಬಿಡುಗಡೆಯಾಗಿತ್ತು. ಇದೀಗ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಇದು ಚಿತ್ರದ ಶೀರ್ಷಿಕೆ ಗೀತೆಯಾಗಿದ್ದು, ನಾಯಕ ಮತ್ತು ಶ್ವಾನದ ಸಂಬಂಧದದ ಕುರಿತದ್ದಾಗಿದೆ. ‘ಜೋಗಿ’ ಪ್ರೇಮ್, ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ರಘು ಹಾಸನ್ ಒಂದು ಕಾಲಕ್ಕೆ ಪ್ರೇಮ್ ತಂಡದಲ್ಲಿ ಗುರುತಿಸಿಕೊಂಡವರು. ಅವರ ಕೆಲವು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದವರು. ರಘು ಕುರಿತು ಮಾತನಾಡಿದ ಪ್ರೇಮ್, ‘ರಘು ಒಳ್ಳೆಯ ತಂತ್ರಜ್ಞ. ನಾವು ಏನೇನೋ ಕಷ್ಟಪಟ್ಟು ಸಿನಿಮಾ ಮಾಡಿದರೂ, ಒಂದು ನಾಯಿಯನ್ನು ಪಳಗಿಸಿ ಅದರಿಂದ ನಟನೆ ತೆಗೆಸೋದು ಸುಲಭದ ಮಾತಲ್ಲ. ಈ ಹಾಡು ಕೇಳಿದಾಗಲೇ ಇದು ಹಿಟ್ ಆಗುತ್ತೆ ಅಂತ ರಘುಗೆ ಹೇಳಿದ್ದೆ. ಬಹಳ ಚೆನ್ನಾಗಿ ಮೂಡಿಬಂದಿದೆ’ ಎಂದರು.
ಒಂದು ನಾಯಿ ಹಾಗೂ ಬಾಲಕನೊಬ್ಬನ ಬಾಂಧವ್ಯದ ಅದ್ಭುತವಾದ ಕಥೆಯಿದು ಎಂದ ಪಟ್ನಾಯಕ್, ‘ನಾನು ಮೊದಲ ಭಾಗ ನೋಡಿದ್ದೇನೆ. ಅದರಲ್ಲಿದ್ದ ಎಮೋಷನ್ಸ್ ಇಲ್ಲೂ ಮುಂದುವರೆದಿದೆ’ ಎಂದರು.
ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ‘ನಾನು ಮತ್ತು ಗುಂಡ 2’ ಚಿತ್ರದಲ್ಲಿ ರಾಕೇಶ್ ಆಡಿಗ, ರಚನಾ ಇಂದರ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ತನ್ವಿಕ್ ಛಾಯಾಗ್ರಹಣ, ರೋಹಿತ್ ರಮನ್ ಸಂಭಾಷಣೆ, ರುತ್ವಿಕ್ ಮುರಳೀಧರ್ ಹಿನ್ನೆಲೆ ಸಂಗೀತವಿದೆ. ಚಿತ್ರವು ಕನ್ನಡವಲ್ಲದೆ, ತೆಲುಗು, ತಮಿಳು, ಹಿಂದೆ ಮತ್ತು ಮಲಯಾಳಂ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗಲಿದೆ. ಚಿತ್ರದ ಮೊದಲ ಕಾಪಿ ರೆಡಿಯಾಗಿದ್ದು, ಸದ್ಯದಲ್ಲೇ ಸೆನ್ಸಾರ್ ಆಗಲಿದೆಯಂತೆ.

ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
[…] Jungle Mangal; ಅರಣ್ಯದಲ್ಲಿ ಬಂಧಿಯಾದ Yash Shetty […]
[…] […]
[…] […]
[…] Ramayana Rocking Star Yash ಫಸ್ಟ್ ಲುಕ್ […]
[…] Ramayana Rocking Star Yash ಫಸ್ಟ್ ಲುಕ್ […]
One thought on “Naanu Matthu Gunda 2; ಕನ್ನಡಕ್ಕೆ ಮತ್ತೆ ಬಂದ ಆರ್.ಪಿ. ಪಟ್ನಾಯಕ್; ‘ನಾನು ಮತ್ತು ಗುಂಡ 2’ ಚಿತ್ರಕ್ಕೆ ಸಂಗೀತ”