Dharama kirthiraj; ಚಟಕ್ಕೆ ಬಲಿಯಾದವರ ನೋವಿನ ಕಥೆ; ಮೇ 16ರಂದು ಬರಲಿದೆ ‘ಟಕಿಲಾ’

ನಶೆಯ ಚಟಕ್ಕೆ ಬಿದ್ದು, ಅದರಿಂದ ಹೊರಬರಲಾಗದೆ, ತಮ್ಮ ಜೀವನವನ್ನೇ ನಾಶ ಮಾಡಿಕೊಂಡ ಅದೆಷ್ಟೋ ಕಥೆಗಳಿವೆ. ಈಗ ನಿರ್ದೇಶಕ ಪ್ರವೀಣ್ ನಾಯಕ್ ಸಹ ತಮ್ ‘ಟಕಿಲಾ’ ಚಿತ್ರದ ಮೂಲಕ ಅಂಥದ್ದೊಂದು ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ.
ಈ ಹಿಂದೆ ‘Z’, ‘ಹೂಂ ಅಂತೀಯ ಉಹೂಂ ಅಂತೀಯ’ ಮತ್ತು ‘ಮೀಸೆ ಚಿಗುರಿದಾಗ’ ಚಿತ್ರಗಳನ್ನು ನಿರ್ದೇಶಿಸಿದ್ದ ಪ್ರವೀಣ್ ನಾಯಕ್, ಧರ್ಮ ಕೀರ್ತಿರಾಜ್ (Dharama kirthiraj) ಮತ್ತು ನಿಖಿತಾ ಸ್ವಾಮಿ (Nikitha Swamy) ಅಭಿನಯದ ‘ಟಕಿಲಾ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಮೇ. 16ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.
ಈ ಚಿತ್ರದ ಕುರಿತು ಮಾತನಾಡುವ ಪ್ರವೀಣ್ ನಾಯಕ್, ‘ಕಳೆದ 30ಕ್ಕೂ ಹೆಚ್ಚು ವರ್ಷಗಳಿಂದ ಮಾನಸ ಹೀಲಿಂಗ್ ಸೆಂಟರ್ ಎಂಬ ಸಂಸ್ಥೆಯ ಮೂಲಕ ಮಾನಸಿಕ ಸಮಸ್ಯೆ ಎದುರಿಸುತ್ತಿರುವ ಹಲವರಿಗೆ ಪರಿಹಾರ ಕೊಡುವ ಕೆಲಸ ಮಾಡುತ್ತಿದ್ದೇನೆ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಯೋಚನೆ, ನೋವು ಕಾಡುತ್ತಲೇ ಇರುತ್ತದೆ. ಎಲ್ಲಿ ತಪ್ಪಾಗುತ್ತಿದೆ ಮತ್ತು ನಾವು ಎಲ್ಲಿ ಸರಿ ಮಾಡಿಕೊಳ್ಳಬೇಕು ಎಂದು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ಚಟದಿಂದ ಏನೆಲ್ಲಾ ಆಗುತ್ತದೆ ಮತ್ತು ಜೀವನ ಯಾವ ಮಟ್ಟಕ್ಕೆ ತಲುಪಬಹುದು ಎಂಬುದೇ ಈ ಚಿತ್ರದ ಕಥೆ’ ಎಂದರು.
ಧರ್ಮ ಕೀರ್ತಿರಾಜ್‍ಗೆ ಈ ಚಿತ್ರದಲ್ಲಿ ಎರಡು ಶೇಡ್‍ಗಳಿರುವ ಪಾತ್ರವಿದೆಯಂತೆ. ‘ಈ ಚಿತ್ರದಲ್ಲಿ ದೊಡ್ಡ ಬ್ಯುಸಿನೆಸ್‍ಮ್ಯಾನ್ ಆಗಿ ಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರಕ್ಕೆ ಎರಡು ಶೇಡ್‍ಗಳಿವೆ. ಚಿತ್ರದಲ್ಲೊಂದು ಒಳ್ಳೆಯ ಸಂದೇಶವಿದೆ. ಈ ಚಿತ್ರದಿಂದ ನನ್ನ ಚಿತ್ರಜೀವನದ ಇನ್ನೊಂದು ಮಜಲು ಪ್ರಾರಂಭವಾಗುವ ನಿರೀಕ್ಷೆಯಲ್ಲಿದ್ದಾರೆ’ ಎಂದರು. ನಿಖಿತಾ ಸ್ವಾಮಿ ಸಹ ಒಳ್ಳೆಯ ಪಾತ್ರ ಸಿಕ್ಕಿರುವುದಾಗಿ ಹೇಳಿಕೊಂಡರು.
ಈ ಹಿಂದೆ ‘ಮುನಿಯಾ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ಮರಡಿಹಳ್ಳಿ ನಾಗಚಂದ್ರ ಈ ಚಿತ್ರವನ್ನು ನಿರ್ಮಿಸಿದ್ದಾರೆ. ‘ಟಾಪ್ ಸ್ಟಾರ್’ ರೇಣು ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಶರಣ್ ಹಾಡಿರುವ ಶೀರ್ಷಿಕೆ ಗೀತೆ ಇತ್ತೀಚೆಗೆ ಬಿಡುಗಡೆಯಾಗಿದೆ.
ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
[…] Jungle Mangal; ಅರಣ್ಯದಲ್ಲಿ ಬಂಧಿಯಾದ Yash Shetty […]
[…] […]
[…] […]
[…] Ramayana Rocking Star Yash ಫಸ್ಟ್ ಲುಕ್ […]
[…] Ramayana Rocking Star Yash ಫಸ್ಟ್ ಲುಕ್ […]
One thought on “Dharama kirthiraj; ಚಟಕ್ಕೆ ಬಲಿಯಾದವರ ನೋವಿನ ಕಥೆ; ಮೇ 16ರಂದು ಬರಲಿದೆ ‘ಟಕಿಲಾ’”