Duniya Vijay; ಕಾಲಿವುಡ್ ವಿಜಯ್ ಎದುರು ಸ್ಯಾಂಡಲ್‍ವುಡ್ ವಿಜಯ್; ಪುರಿ ಜಗನ್ನಾಥ್ ಚಿತ್ರದಲ್ಲಿ ನಟನೆ

‘ಡಬಲ್ ಇಸ್ಮಾರ್ಟ್’ ಸೋತ ಹಿನ್ನೆಲೆಯಲ್ಲಿ ನಿರ್ದೇಶಕ ಪುರಿ ಜಗನ್ನಾಥ್ ದೊಡ್ಡ ಪ್ರಯತ್ನವೊಂದಕ್ಕೆ ಕೈಹಾಕಿದ್ದಾರೆ. ಈ ಬಾರಿ ಅವರು ಬರೀ ತೆಲುಗು ಚಿತ್ರಕ್ಕಷ್ಟೇ ಸೀಮಿತವಾಗಿಲ್ಲ, ಬಹುಭಾಷಾ ಕಲಾವಿದರ ತಾರಾಗಣದ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ದೇಶಿಸುವುದಕ್ಕೆ ಸಜ್ಜಾಗಿದ್ದಾರೆ.
ಯುಗಾದಿ ಹಬ್ಬದ ದಿನ ತಮಿಳು ನಟ ವಿಜಯ್ ಸೇತುಪತಿ ಅಭಿನಯದಲ್ಲಿ ಪುರಿ ಜಗನ್ನಾಥ್ ಒಂದು ಚಿತ್ರ ನಿರ್ದೇಶಿಸುತ್ತಿದ್ದಾರೆ ಎಂಬ ಸುದ್ದಿ ಬಂತು. ಆ ನಂತರ ಬಾಲಿವುಡ್ ನಟಿ ಟಬು ಈ ಚಿತ್ರಕ್ಕೆ ಸೇರ್ಪಡೆಯಾಗಿದ್ದಾರೆ ಎಂಬ ಸುದ್ದಿಯೂ ಕೆಲವು ದಿನಗಳ ಹಿಂದೆ ಬಂದಿತ್ತು. ಈಗ ಆ ಚಿತ್ರದಲ್ಲಿ ‘ದುನಿಯಾ’ ವಿಜಯ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ನಿರ್ದೇಶಕ ಪುರಿ ಮತ್ತು ನಿರ್ಮಾಪಕಿ ಚಾರ್ಮಿ ಕೌರ್, ಇಬ್ಬರೂ ವಿಜಯ್ ಅವರನ್ನು ಭೇಟಿ ಮಾಡಿ ಚಿತ್ರದ ಕಥೆ ಹೇಳಿ, ಅವರಿಂದ ಒಪ್ಪಿಗೆ ಪಡೆದು ಬಂದಿದ್ದಾರೆ. ಈ ಚಿತ್ರವನ್ನು ಪುರಿ ಕನೆಕ್ಟ್ಸ್ ಸಂಸ್ಥೆಯಡಿ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಜೊತೆಯಾಗಿ ನಿರ್ಮಿಸಿದರೆ, ಪುರಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹೆಸರಿಡದ ಚಿತ್ರವು ಜೂನ್‍ನಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ.
‘ದುನಿಯಾ’ ವಿಜಯ್ ಇದಕ್ಕೂ ಮೊದಲು ನಂದಮೂರಿ ಬಾಲಕೃಷ್ಣ ಅಭಿನಯದ ‘ವೀರ ಸಿಂಹ ರೆಡ್ಡಿ’ ಚಿತ್ರದಲ್ಲಿ ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ ಹೋಗಿದ್ದರು ‘ದುನಿಯಾ’ ವಿಜಯ್. ಈಗ ಪುರಿ ಜಗನ್ನಾಥ್ ನಿರ್ದೇಶನದ ಚಿತ್ರವು ಅವರ ಎರಡನೇ ತೆಲುಗು ಚಿತ್ರವಾಗಲಿದೆ.
ಇದಲ್ಲದೆ, ನಯನತಾರಾ ಅಭಿನಯದ ‘ಮೂಕುತಿ ಅಮ್ಮನ್ 2’ ಚಿತ್ರದಲ್ಲಿ ವಿಜಯ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದ ವಿಷಯ ಹೇಳುವುದಾದರೆ, ವಿಜಯ್ ಸದ್ಯ ‘ಲ್ಯಾಂಡ್ ಲಾರ್ಡ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ‘ಸಿಟಿ ಲೈಟ್ಸ್’ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಬಿಡುಗಡೆಯ ವಿಷಯಕ್ಕೆ ಬಂದರೆ, ಎಸ್. ನಾರಾಯಣ್ ನಿರ್ದೇಶನದ ‘ಮಾರುತ’ ಚಿತ್ರದಲ್ಲೂ ವಿಜಯ್ ನಟಿಸಿದ್ದು, ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಹೆಚ್ಚಿನ ಓದಿಗೆ:-
[…] ಚಕ್ರವರ್ತಿ ಚಂದ್ರಚೂಡ್ ನಿರ್ದೇಶನದಲ್ಲಿ Raj… […]
[…] […]
[…] ಈ ದಿನದಂದು ಬಿಡುಗಡೆಯಾಗಲಿದೆ #NTRNeel ಜೋಡಿಯ ಹೊ… […]
[…] ಈ ದಿನದಂದು ಬಿಡುಗಡೆಯಾಗಲಿದೆ #NTRNeel ಜೋಡಿಯ ಹೊಸ ಚಿತ್ರ […]
[…] […]
One thought on “Duniya Vijay; ಕಾಲಿವುಡ್ ವಿಜಯ್ ಎದುರು ಸ್ಯಾಂಡಲ್‍ವುಡ್ ವಿಜಯ್; ಪುರಿ ಜಗನ್ನಾಥ್ ಚಿತ್ರದಲ್ಲಿ ನಟನೆ”