‘ಕಿಲ್ಲರ್’ ಆದ Jyothi Rai; ಗನ್‍ ಹಿಡಿದು ಹೊಸ ಕಥೆ ಹೇಳೋಕೆ ರೆಡಿ

Jyothi Rai Killer Movie new poster got viral

ಕನ್ನಡದಲ್ಲಿ ‘99’, ‘ಸುಂದರಾಂಗ ಜಾಣ’, ‘5ಡಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಕರಾವಳಿ ಮೂಲದ ಜ್ಯೋತಿ ರೈ, ಇದೀಗ ಗನ್‍ ಹಿಡಿದು ಅಬ್ಬರಿಸುವುದಕ್ಕೆ ಸಜ್ಜಾಗಿದ್ದಾರೆ. ಜ್ಯೋತಿ, ‘ಕಿಲ್ಲರ್’ ಎಂಬ ಆ್ಯಕ್ಷನ್‍ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರದ ಟೀಸರ್‌ ಸದ್ಯದಲ್ಲೇ ಬಿಡುಗಡೆ ಆಗಲಿದೆ.

‘ಕಿಲ್ಲರ್’ ಒಂದು ದ್ವಿಭಾಷಾ ಚಿತ್ರವಾಗಿದ್ದು, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಇದುವರೆಗೂ ಪೋಷಕ ಪಾತ್ರಗಳಲ್ಲೇ ಹೆಚ್ಚಾಗಿ ನಟಿಸಿದ್ದ ಜ್ಯೋತಿ, ಈ ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕಿಯಾಗಿ ಅಭಿನಯಿಸುತ್ತಿರುವುದು ವಿಶೇಷ. ಈ ಚಿತ್ರದ ಮೊದಲ ನೋಟ, ಏಪ್ರಿಲ್‍ 30ರಂದು ಮಧ್ಯಾಹ್ನ 12:06ಕ್ಕೆ ಬಿಡುಗಡೆಯಾಗಲಿದೆ.

ವಿಶೇಷವೆಂದರೆ, ಈ ಚಿತ್ರವನ್ನು ಅವರ ಪತಿ ಪೂರ್ವಜ್‍ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಜ್ಯೋತಿ ಪೂರ್ವಜ್‍, ಪ್ರಜಯ್‍ ಕಾಮತ್‍ ಮತ್ತು ಪದ್ಮನಾಭ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಜಗದೀಶ್‍ ಬೊಮ್ಮಿಶೆಟ್ಟಿ ಛಾಯಾಗ್ರಹಣ ಮತ್ತು ಆಶೀರ್ವಾದ್‍ ಹಾಗೂ ಸುಮನ್‍ ಜೀವ ಅವರ ಸಂಗೀತವಿದೆ.

ಬರೀ ಕಥೆ ಮತ್ತು ನಿರ್ದೇಶನವಷ್ಟೇ ಅಲ್ಲ, ಈ ಚಿತ್ರದಲ್ಲಿ ಪೂರ್ವಜ್‍ ನಾಯಕನಾಗಿಯೂ ಅಭಿನಯಿಸುತ್ತಿದ್ದಾರೆ. ಗಂಡ ನಾಯಕನಾದರೆ, ಹೆಂಡತಿ ನಾಯಕಿಯಾಗಿ ಅಭಿನಯಿಸುತ್ತಿರುವ ಚಿತ್ರವಿದು. ಪೂರ್ವಜ್‍ ಮತ್ತು ಜ್ಯೋತಿ ಜೊತೆಗೆ ಚಂದ್ರಕಾಂತ್‍ ಕೊಳ್ಳು, ವಿಶಾಲ್‍ ರಾಜ್‍, ಅರ್ಚನಾ ಅನಂತ್‍ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಜೋಗುಳ’ ಧಾರಾವಾಹಿ ಮೂಲಕ ದೊಡ್ಡ ಮಟ್ಟದಲ್ಲಿ ಗಮನಸೆಳೆದ ಜ್ಯೋತಿ ರೈ, ನಂತರದ ದಿನಗಳಲ್ಲಿ ‘ಶುಭ ಮಂಗಳ’, ‘ಕಿನ್ನರಿ’, ‘ಲವ್‍ ಲವಿಕೆ’, ‘ಜೋ ಜೋ ಲಾಲಿ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬರೀ ಕನ್ನಡವಷ್ಟೇ ಅಲ್ಲ, ‘ಗುಪ್ಪೆಂಡಂತಾ ಮನಸು’, ‘ಕಾಟ್ರುಕ್ಕೆನ್ನ ವೇಳಿ’ ಎಂಬ ತೆಲುಗು ಹಾಗೂ ತಮಿಳು ಧಾರಾವಾಹಿಗಳಲ್ಲೂ ನಟಿಸಿದ್ದಾರೆ.

‘ಕಿಲ್ಲರ್’ ಚಿತ್ರದ ಜೊತೆ ‘ಮಾಸ್ಟರ್ ಪೀಸ್’ ಎಂಬ ಚಿತ್ರ ಕೂಡ ಜ್ಯೋತಿ ಮಾಡುತ್ತಿದ್ದಾರೆ. ಅದನ್ನು ಪೂರ್ವಜ್ ಅವರೇ ನಿರ್ದೇಶನ ಮಾಡುತ್ತಿದ್ದು, ಮೇನಲ್ಲಿ ಶೂಟಿಂಗ್ ಶುರುವಾಗಲಿದೆ.


ಹೆಚ್ಚಿನ ಓದಿಗೆ:-

Leave a Reply

Your email address will not be published. Required fields are marked *