Preethi Prema Panganama; ಪ್ರೀತಿ, ಪ್ರೇಮ ಮಾಡಿ ಪಂಗನಾಮ ಹಾಕಲು ಹೊರಟವರ ಕಥೆ ಇದು …

ಕೆಲವು ವರ್ಷಗಳ ಹಿಂದೆ ಉದಯ ಟಿ.ವಿಯಲ್ಲಿ ಪ್ರಸಾರವಾಗುತ್ತಿದ್ದ ಅತ್ಯಂತ ಜನಪ್ರಿಯ ಕಾರ್ಯಕ್ರಮವೆಂದರೆ ಅದು ‘ಹಾಸ್ಯ ಲಾಸ್ಯ’. ಮುತ್ತುರಾಜ್ ಮತ್ತು ಶ್ರೀಕಂಠ ಜೋಡಿಯ ಈ ಕಾರ್ಯಕ್ರಮ ಸಾಕಷ್ಟು ಯಶಸ್ವಿಯಾಗಿತ್ತು. ಈಗ ಈ ಜೋಡಿ, ಹೊಸ ಚಿತ್ರವೊಂದರ ಮೂಲಕ ವಾಪಸ್ಸಾಗಿದ್ದಾರೆ.
ಸಿನಿಮಾ ಮಾಡಬೇಕು ಎನ್ನುವುದು ಮುತ್ತುರಾಜ್ ಮತ್ತು ಶ್ರೀಕಂಠ ಅವರ ಬಹುವರ್ಷಗಳ ಕನಸಾಗಿತ್ತಂತೆ. ಅದು ಈಗ ‘ಪ್ರೀತಿ ಪ್ರೇಮ ಪಂಗನಾಮ’ (Preethi Prema Panganama) ಎಂಬ ಹೊಸ ಚಿತ್ರದ ಮೂಲಕ ಈಡೇರಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಶ್ರೀಕಂಠ ನಿರ್ದೇಶನ ಮಾಡಿದರೆ, ಮುತ್ತುರಾಜ್ ನಿರ್ಮಾಣ ಮಾಡಿದ್ದಾರೆ. ಇಬ್ಬರೂ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
‘ಪ್ರೀತಿ ಪ್ರೇಮ ಪಂಗನಾಮ’ ಚಿತ್ರದ ಕೆಲಸಗಳು ಮುಗಿದಿದ್ದು, ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಚಿತ್ರದ ಟೀಸರ್ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಮೊದಲು ಮುತ್ತುರಾಜ್ ಮಾತನಾಡಿ, ‘ನೆಲ್ಸನ್ ಮಂಡೇಲ ಹುಟ್ಟುಹಬ್ಬದ ದಿನದಂದು ನೂರಾರು ಜನರಿಗೆ ಉಚಿತ ಹೇರ್ ಕಟಿಂಗ್ ಮಾಡುವ ಮೂಲಕ ಸಮಾಜ ಸೇವೆ ಆರಂಭಿಸಿ ನಿರಂತರವಾಗಿ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ಡಾ. ರಾಜಕುಮಾರ್, ಡಾ. ವಿಷ್ಣುವರ್ಧನ್, ದೇವೆಗೌಡರು ನಮ್ಮ ಧಾರವಾಹಿಗಳನ್ನು ತಪ್ಪದೆ ನೋಡುತ್ತಿದ್ದರು. ಮೂರು ದಶಕದ ಗೆಳೆಯ ಶ್ರೀಕಂಠ ಡೈರಕ್ಷನ್ ಮಾಡಲು ಆಸೆ ಪಟ್ಟಿದ್ದರು. ಅದರಂತೆ ನಾನು ಬಂಡವಾಳ ಹೂಡಿದ್ದೇನೆ’ ಎಂದರು.
ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಶ್ರೀಕಂಠ ಹೇಳುವಂತೆ ಗತಕಾಲದಲ್ಲಿ ಪ್ರೀತಿ ಪ್ರೇಮಕ್ಕೆ ಬೆಲೆ ಇತ್ತು. ‘ಇಂದು ಮೂರೇ ದಿವಸಕ್ಕೆ ದುಡ್ಡು ಇಲ್ಲವೆ ಕೊಲೆಯಲ್ಲಿ ಅಂತ್ಯ ಕಾಣುತ್ತದೆ. ಜಗತ್ತಿನಲ್ಲಿ ಜಾತಿಗಿಂತ ದೊಡ್ಡದು ಪ್ರೀತಿ. ಯಾರಾದರೇನು? ಗಂಡು-ಹೆಣ್ಣು ಎರಡೇ ಜಾತಿ ಇರುವುದು. ನಾವುಗಳು ಬಡತನದಿಂದ ಬಂದಿದ್ದರೂ, ನಮ್ಮ ಮಕ್ಕಳು ಹಾಗಾಗಬಾರದು. ಅವರನ್ನು ಶ್ರೀಮಂತರನ್ನಾಗಿ ಮಾಡಲು ಹೋದಾಗ ಹೇಗೆ ಪಂಗನಾಮ ಹಾಕಿಸಿಕೊಳ್ಳುತ್ತೇವೆ ಎನ್ನುವುದನ್ನು ಹಾಸ್ಯದೊಂದಿಗೆ ಜತೆಗೆ ಒಂದಷ್ಟು ಉತ್ತಮ ಸಂದೇಶಗಳನ್ನು ಸಮಾಜಕ್ಕೆ ಹೇಳುವ ಪ್ರಯತ್ನ ಮಾಡಲಾಗಿದೆ’ ಎಂದರು.
ಈ ಚಿತ್ರಕ್ಕೆ ಧೀರಜ್, ಉದಯ್ ನಾಯಕರು. ಡಯಾನ, ಚೈತ್ರಾ ನಾಯಕಿಯರು. ಇವರೊಂದಿಗೆ ಭದ್ರಾವತಿ ಶ್ರೀನಿವಾಸ್ ಮುಂತಾದವರು ಅಭಿನಯಿಸಿದ್ದಾರೆ. ಕುಮಾರ್ ಈಶ್ವರ್ ಸಂಗೀತ, ಗುರುರಾಜ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಹಾಸನ, ಚಿಕ್ಕಮಗಳೂರು, ಮಡಕೇರಿ, ಮೈಸೂರು ಮುಂತಾದ ಕಡೆ ಚಿತ್ರೀಕರಣ ನಡೆಸಲಾಗಿದೆ.
ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
[…] […]
[…] […]
[…] […]
[…] Yuddakanda box office collection; ಗಳಿಕೆ ಗೊತ್ತಿಲ್ಲ, ಒಳ್ಳೆಯ ಪ್ರಯತ್ನ ಗೆದ್ದಿದೆ ಎಂದ ಅಜೇಯ್ ರಾವ್ […]
[…] Yuva Rajkumar Ekka; ‘ಎಕ್ಕ’ದಲ್ಲಿ ಪುನೀತ್ ಅವರನ್ನು ನೆನಪಿಸಿದ ಯುವ ರಾಜಕುಮಾರ್ […]
One thought on “Preethi Prema Panganama; ಪ್ರೀತಿ, ಪ್ರೇಮ ಮಾಡಿ ಪಂಗನಾಮ ಹಾಕಲು ಹೊರಟವರ ಕಥೆ ಇದು …”