Yuva Rajkumar Ekka; ‘ಎಕ್ಕ’ದಲ್ಲಿ ಪುನೀತ್ ಅವರನ್ನು ನೆನಪಿಸಿದ ಯುವ ರಾಜಕುಮಾರ್
ಪುನೀತ್ ರಾಜಕುಮಾರ್ ಅಭಿನಯದ ‘ಜಾಕಿ’ ಚಿತ್ರದಲ್ಲಿನ ಒಂದು ದೃಶ್ಯ ನೆನಪಿರಬಹುದು. ಚಿತ್ರದ ನಾಯಕ ಒಬ್ಬ ಸೈಕೋನನ್ನು ಹಿಡಿಯುವುದಕ್ಕೆ ಮಾನಸಿಕ ಅಸ್ವಸ್ಥನ ತರಹ ಆಡಿ, ಹೊಡೆದಾಡಿ ಸೆರೆಹಿಡಿಯುತ್ತಾನೆ. ವಿಷಲ್ ಊದುತ್ತಾ, ತಲೆಗೆ ಒಂದು ಟೋಪಿ ಧರಿಸಿ, ಒಡೆದ ಕನ್ನಡಕವನ್ನು ತೊಟ್ಟು ಪುನೀತ್ ವಿಭಿನ್ನ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದರು.
ಈಗ ಆ ದೃಶ್ಯವನ್ನು ಯುವ ರಾಜಕುಮಾರ್ (Yuva Rajkumar), ತಮ್ಮ ಹೊಸ ಚಿತ್ರ ‘ಎಕ್ಕ’ (Ekka) ದಲ್ಲಿ ಮತ್ತೊಮ್ಮೆ ನೆನಪಿಸಿದ್ದಾರೆ. ‘ಎಕ್ಕ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅದರಲ್ಲಿ ಯುವ ಸಹ ಅದೇ ತರಹ ಗೆಟಪ್‍ನಲ್ಲಿ ಪೊರಕೆ ಹಿಡಿದು ಕಾಣಿಸಿಕೊಂಡಿದ್ದಾರೆ.
ಯುವ ರಾಜಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಬುಧವಾರ (ಏಪ್ರಿಲ್ 23), ‘ಎಕ್ಕ’ ಚಿತ್ರದ ಟೀಸರ್ ಬಿಡುಗಡೆ ಆಗಬೇಕಿತ್ತು. ಆದರೆ, ಫುಲ್ವಾಮಾದಲ್ಲಿ, ಮೃತಪಟ್ಟವರ ಗೌರವ ಸೂಚಕವಾಗಿ ಚಿತ್ರದ ಟೀಸರ್ ಬಿಡುಗಡೆಯನ್ನು ಗುರುವಾರಕ್ಕೆ ಮುಂದೂಡಲಾಗಿತ್ತು. ಅದರಂತೆ ಗುರುವಾರ ಟೀಸರ್ ಬಿಡುಗಡೆಯಾಗಿದೆ.
ಒಂದು ನಿಮಿಷ ಒಂಬತ್ತು ಸೆಕೆಂಡ್ ಇರುವ ಟೀಸರ್‍ನಲ್ಲಿ ಯುವ, ಮಗು-ಮೃಗ ಎಂದು ಮಸ್ತ್ ಡೈಲಾಗ್ ಹೊಡೆಯುತ್ತಾ ಕೈಯಲ್ಲಿ ಪೊರಕೆ ಹಿಡಿದು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಅಂತ್ಯದಲ್ಲಿ ‘ಇದು ಇಲ್ಲಿಗೆ ನಿಲ್ಲೋದಿಲ್ಲ …’ ಎಂಬ ಸಂದೇಶವನ್ನೂ ನೀಡಿದ್ದಾರೆ.
‘ಎಕ್ಕ’ ಚಿತ್ರವನ್ನು ಅಶ್ವಿನಿ ಪುನೀತ್ ರಾಜಕುಮಾರ್, ಜಯಣ್ಣ, ಭೋಗೇಂದ್ರ, ಕಾರ್ತಿಕ್ ಗೌಡ ಮತ್ತು ಯೋಗಿ ಜೊತೆಯಾಗಿ PRK ಪ್ರೊಡಕ್ಷನ್ಸ್, ಜಯಣ್ಣ ಫಿಲಂಸ್ ಮತ್ತು KRG ಸ್ಟುಡಿಯೋಸ್ ಜೊತೆಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿರುವುದು ವಿಶೇಷ. ರೋಹಿತ್ ಪದಕಿ ನಿರ್ದೇಶನದ ಈ ಚಿತ್ರದಲ್ಲಿ ಯುವಗೆ ಸಂಜನಾ ಆನಂದ್ ಮತ್ತು ಸಂಪದ ನಾಯಕಿಯರಾಗಿ ನಟಿಸಿದ್ದು, ಮಿಕ್ಕಂತೆ ಅತುಲ್ ಕುಲಕರ್ಣಿ, ಆದಿತ್ಯ, ಶ್ರುತಿ, ಪೂರ್ಣಚಂದ್ರ ಮೈಸೂರು, ಪುನೀತ್ ರುದ್ರನಾಗ್, ಸಾಧು ಕೋಕಿಲ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
I got this site from my buddy who informed me about this web site and at the moment this time…
I love what you guys are usually up too. This sort of clever work and exposure! Keep up the wonderful…
Actually when someone doesn’t be aware of afterward its up to other people that they will help, so here it…
tipster wettbüro Feel free to visit my website mathematische wettstrategie (Jarred)
wettbüro innsbruck My web site – bester wettanbieter österreich





3 thoughts on “Yuva Rajkumar Ekka; ‘ಎಕ್ಕ’ದಲ್ಲಿ ಪುನೀತ್ ಅವರನ್ನು ನೆನಪಿಸಿದ ಯುವ ರಾಜಕುಮಾರ್”