Yuddakanda box office collection; ಗಳಿಕೆ ಗೊತ್ತಿಲ್ಲ, ಒಳ್ಳೆಯ ಪ್ರಯತ್ನ ಗೆದ್ದಿದೆ ಎಂದ ಅಜೇಯ್‍ ರಾವ್‍

‘ಇದು ಇಲ್ಲಿಗೆ ಮುಗಿದಿಲ್ಲ. ನನಗೆ ತುಂಬಾ ತಾಳ್ಮೆ ಇದೆ. ಚಿತ್ರರಂಗದಲ್ಲಿ 25 ವರ್ಷ ಇಂಥದ್ದೊಂದು ಹಿಟ್‍ಗೆ ಕಾದಿದ್ದೇನೆ. ಇನ್ನೂ ಮುಂದೆ ಜನ ಬರುತ್ತಾರೆ, ಇಲ್ಲಿಗೇ ಎಲ್ಲಾ ಮುಗಿದಿಲ್ಲ ಎಂಬ ನಂಬಿಕೆ ಇದೆ …’

ಹಾಗೆ ಹೇಳಿದ್ದು ಅಜೇಯ್‍ ರಾವ್‍. ಅವರ ಅಭಿನಯದ ಮತ್ತು ನಿರ್ಮಾಣದ ‘ಯುದ್ಧಕಾಂಡ’ ಚಿತ್ರವು ಏಪ್ರಿಲ್‍ 18ರಂದು ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಕಾಳಜಿ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬಂದರೂ, ಗಳಿಕೆ ಓಹೋ ಎನ್ನುವಂತದ್ದೇನೂ ಇಲ್ಲ. ‘ಯುದ್ಧಕಾಂಡ’ 100 ದಿನ ಪ್ರದರ್ಶನ ಕಾಣುತ್ತದೆ ಎಂಬ ನಂಬಿಕೆ ಇದೆ ಎನ್ನುವ ಅಜೇಯ್‍, ‘ಒಂದೇ ದಿನದಲ್ಲಿ ಅಷ್ಟು ಗಳಿಕೆ ಆಗಬೇಕು ಅಂತಿಲ್ಲ. ನಿಧಾನಕ್ಕೆ ಪ್ರದರ್ಶನ ಕಾಲಿ’ ಎಂದಿದ್ದಾರೆ.

ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಸಿನಿಮಾ ಎಷ್ಟು ಗಳಿಕೆ ಮಾಡಿತು ಎನ್ನುವುದಕ್ಕಿಂತ, ಮನಸ್ಸಿನಿಂದ ಬರುವ ಪ್ರಶಂಸೆ ಮತ್ತು ಮನಸ್ಸಿನಿಂದ ಸ್ವೀಕಾರ ಮಾಡುವ ಚಿತ್ರಗಳು ಬಹಳ ಅಪರೂಪ. ಕನ್ನಡ ಚಿತ್ರಗಳನ್ನು ಜನ ನೋಡುತ್ತಿಲ್ಲ, ಗಳಿಕೆ ಸಾಲುತ್ತಿಲ್ಲ, ಇನ್ನೂ ಕಲೆಕ್ಷನ್‍ ಬರಬೇಕಿತ್ತು ಎಂಬ ಮಾತು ಸಹಜ. ಆದರೆ, ಬಂದಷ್ಟು ಜನರಿಗೆ ನಾವು ಧನ್ಯವಾದ ಸಲ್ಲಿಸಬೇಕು. ಚಿತ್ರಕ್ಕಾಗಿ, ಒಂದೊಳ್ಳೆಯ ಉದ್ದೇಶಕ್ಕಾಗಿ ಜನ ಬಂದಿದ್ದಾರೆ. ಎಷ್ಟು ಸಂಖ್ಯೆಯಲ್ಲಿ ಬಂದಿದ್ದಾರೋ ಅವರಿಗೆ ‍ಥ್ಯಾಂಕ್ಸ್’ ಎಂದರು.

ಗಳಿಕೆ ವಿಷಯದಲ್ಲದಿದ್ದರೂ, ಬೇರೆ ವಿಷಯದಲ್ಲಿ ಗೆದ್ದಿದ್ದೇವೆ ಎನ್ನುವ ಅಜೇಯ್‍, ‘ಕೆಟ್ಟ ಕೃತ್ಯ ಮಾಡುವುದಕ್ಕೆ ಸಾಕಷ್ಟು ಪ್ರೇರಣೆ ಸಿಗುತ್ತಿದೆ. ಅದನ್ನು ಮೀರಿ ಒಳ್ಳೆಯತನ ನಿಲ್ಲಬೇಕು. ಪದೇಪದೇ ಒಳ್ಳೆಯತನದ ಬಗ್ಗೆ ಹೇಳಬೇಕು.  ಒಳ್ಳೆಯತನ ಹೆಚ್ಚಾಗಬೇಕು. ಈ ತರಹದ ಸಿನಿಮಾಗಳನ್ನು ನೋಡಿ, ನಮ್ಮ ಜಗತ್ತು ಕ್ಲೀನ್‍ ಆಗಬೇಕು. ಒಳ್ಳೆಯ ಸಮಾಜ, ದೇಶ, ಭವಿಷ್ಯ ನಿರ್ಮಾಣ ಆಗಬೇಕು. ಆ ನಿಟ್ಟಿನಲ್ಲಿ ನಾವು ಗೆದ್ದಿದ್ದೇವೆ. ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಎಷ್ಟು ಗಳಿಕೆ ಮಾಡುತ್ತೋ ಗೊತ್ತಿಲ್ಲ. ಒಳ್ಳೆಯ ಪ್ರಯತ್ನ ಗೆದ್ದಿದೆ. ನಾನು ಹೋದರೂ ಜನ ಈ ಚಿತ್ರವನ್ನು ನೆನಪಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಇದಕ್ಕಿಂತ ಒಳ್ಳೆಯ ಗೆಲುವು ಬೇಕಾಗಿಲ್ಲ. ಇದರಲ್ಲಿ ನಾನು ಗೆದ್ದಿದ್ದೇನೆ’ ಎಂದರು.

‘ಯುದ್ಧಕಾಂಡ’ ಚಿತ್ರದಲ್ಲಿ ಅಜೇಯ್‍ ರಾವ್‍, ಸುಪ್ರಿತಾ ಸತ್ಯನಾರಾಯಣ್‍, ಅರ್ಚನಾ ಜೋಯಿಸ್‍, ಪ್ರಕಾಶ್‍ ಬೆಳವಾಡಿ, ಟಿ.ಎಸ್. ನಾಗಾಭರಣ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ:-



ಹೆಚ್ಚಿನ ಓದಿಗೆ:-

  1. […] Yuddakanda box office collection; ಗಳಿಕೆ ಗೊತ್ತಿಲ್ಲ, ಒಳ್ಳೆಯ ಪ್ರಯತ್ನ ಗೆದ್ದಿದೆ ಎಂದ ಅಜೇಯ್‍ ರಾವ್‍ […]

  2. […] Yuva Rajkumar Ekka; ‘ಎಕ್ಕ’ದಲ್ಲಿ ಪುನೀತ್‍ ಅವರನ್ನು ನೆನಪಿಸಿದ ಯುವ ರಾಜಕುಮಾರ್ […]

One thought on “Yuddakanda box office collection; ಗಳಿಕೆ ಗೊತ್ತಿಲ್ಲ, ಒಳ್ಳೆಯ ಪ್ರಯತ್ನ ಗೆದ್ದಿದೆ ಎಂದ ಅಜೇಯ್‍ ರಾವ್‍

Leave a Reply

Your email address will not be published. Required fields are marked *