Di Di Dikki; ಗಣೇಶ್‍ ಮಗನ ಜೊತೆಗೆ ‘ಡಿ ಡಿ ಢಿಕ್ಕಿ’ ಹೊಡೆಯುತ್ತಿದ್ದಾರೆ ಪ್ರೇಮ್

‘ನೆನಪಿರಲಿ’ ಪ್ರೇಮ್‍ (Nenapirali Prem) ಇತ್ತೀಚೆಗಷ್ಟೇ ‘ಸ್ಪಾರ್ಕ್’ (Spark) ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಬಂದಿತ್ತು. ಅದರ ಜೊತೆಗೆ ಅವರು ನಟಿ ಮತ್ತು ‘ಕನ್ನಡತಿ’ ಧಾರಾವಾಹಿ ಖ್ಯಾತಿಯ ರಂಜಿನಿ ರಾಘವನ್‍ (Ranjani Raghavan) ನಿರ್ದೇಶನದ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಚಿತ್ರತಂಡ ಇಷ್ಟು ದಿನ ಗೌಪ್ಯವಾಗಿಟ್ಟಿತ್ತು. ಈಗ ಚಿತ್ರದ ಶೀರ್ಷಿಕೆ ಅನಾವರಣವಾಗಿದ್ದು, ಚಿತ್ರಕ್ಕೆ ‘ಡಿ ಡಿ ಢಿಕ್ಕಿ’ (Di Di Dikki) ಎಂಬ ಹೆಸರನ್ನು ಇಡಲಾಗಿದೆ.

‘ಡಿ ಡಿ ಢಿಕ್ಕಿ’ ಚಿತ್ರವನ್ನು ನಿರ್ದೇಶಕ ಜಡೇಶ್‍ ಕೆ. ಹಂಪಿ, ರಾಮಕೃಷ್ಣ ಮತ್ತು ಆನಂದ್ ಕುಮಾರ್ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಹಂಪಿ ಪಿಕ್ಚರ್ಸ್ ಎಂಬ ಹೊಸ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿರುವ ಜಡೇಶ್, R K & A K ಎಂಟರ್ಟೈನ್ಮೆಂಟ್ ಸಂಸ್ಥೆ ಜೊತೆಗೆ ಈ ಚಿತ್ರ ನಿರ್ಮಿಸುತ್ತಿದ್ದಾರೆ. ತರುಣ್‍ ಸುಧೀರ್‍ ಈ ಚಿತ್ರದ ಕ್ರಿಯೇಟಿವ್‍ ಹೆಡ್‍ ಆಗಿ ಕೆಲಸ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ‘ನೆನಪಿರಲಿ’ ಪ್ರೇಮ್‍ ನಾಯಕನಾಗಿ ಕಾಣಿಸಿಕೊಂಡರೆ, ಅವರ ಮಗನಾಗಿ ಗಣೇಶ್‍ ಮಗ ವಿಹಾನ್‍ ನಟಿಸುತ್ತಿದ್ದಾನೆ. ಇತ್ತೀಚೆಗೆ ಪ್ರೇಮ್‍ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಶೀರ್ಷಿಕೆ ಅನಾವರಣಗೊಂಡಿದೆ.

ಈ ಚಿತ್ರ ನೋಡಿದ ಮೇಲೆ ಊರು ಬಿಟ್ಟು ಬಂದ ಜನರಿಗೆ ತಾವು ಮಾಡಿದ್ದು ತಪ್ಪಾಯಿತಾ? ಎಂದನಿಸುತ್ತದೆ ಎನ್ನುವ ಪ್ರೇಮ್‍, ‘ಈ ಚಿತ್ರದಲ್ಲಿ ನಟಿಸಲು ನನಗೆ ಇಷ್ಟವಿರಲಿಲ್ಲ. ಇದು ಮತ್ತೊಂದು ಫ್ಯಾಮಿಲಿ ಚಿತ್ರ ಎಂದು ಸುಮ್ಮನಿದ್ದೆ. ಆದರೆ, ಕಥೆ ಕೇಳಿ ಬಹಳ ಇಷ್ಟವಾಯಿತು. ರಂಜಿನಿ. ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಗಿಸಿ ಮನೆಗೆ ಹೋದ ನಂತರ ಚಿತ್ರದ ಸನ್ನಿವೇಶಗಳನ್ನು ನೆನಪಿಸಿಕೊಂಡು ಅತ್ತಿದ್ದು ಉಂಟು. ಬೇರೆಬೇರೆ ಕಾರಣಗಳಿಂದ ತಮ್ಮ ಊರನ್ನು ಬಿಟ್ಟು ಬೆಂಗಳೂರಿಗೆ ಬಂದ ಎಷ್ಟೋ ಜನರನ್ನು ನಾವು ಊರು ಬಿಟ್ಟು ಬಂದಿದ್ದು ತಪ್ಪಾಯಿತಾ? ಎಂಬ ಪ್ರಶ್ನೆ ಈ ಚಿತ್ರ ನೋಡಿದ ಮೇಲೆ ಮೂಡುವುದಂತೂ ಖಂಡಿತಾ’ ಎಂದರು.

ಈ ಚಿತ್ರದ ಕುರಿತು ಮಾತನಾಡುವ ರಂಜನಿ ರಾಘವನ್, ‘ಈಗಾಗಲೇ ಶೇ. 60ರಷ್ಟು ಮಾತಿನ ಭಾಗದ ಚಿತ್ರೀಕರಣ ಮುಗಿದಿದೆ. ಈ ಚಿತ್ರದಲ್ಲಿ ಕಾಮಿಡಿ ಮೂಲಕ ಭಾವನಾತ್ಮಕ ಸನ್ನಿವೇಶಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ನಾಯಕ ಗಣೇಶ್ ಪುತ್ರ ವಿಹಾನ್ ಚಿತ್ರದಲ್ಲಿ ಪ್ರೇಮ್ ಅವರ ಪುತ್ರನಾಗಿ ಅಭಿನಯಿಸಿದ್ದಾರೆ’ ಎಂದರು.

ಈ ಚಿತ್ರಕ್ಕೆ ‘ಸಂಗೀತ ಜ್ಞಾನಿ’ ಇಳಯರಾಜ ಸಂಗೀತ ಸಂಯೋಜಿಸುತ್ತಿದ್ದು, ಚಿತ್ರದಲ್ಲಿ ನಾಲ್ಕು ಹಾಡುಗಳು ಇರಲಿವೆಯಂತೆ. ಆರೂರು ಸುಧಾಕರ್‍ ಶೆಟ್ಟಿ ಛಾಯಾಗ್ರಹಣ ಮಾಡುತ್ತಿದ್ದಾರೆ.

ಇದನ್ನೂ ಓದಿ:-


ಹೆಚ್ಚಿನ ಓದು:-

  1. РґСЂСѓР·СЊСЏ Р° товар что закончился? месяц пишу, Рё РіРѕРІРѕСЂСЏС‚ РІСЃРµ пусто;( http://www.pageorama.com/?p=obrrrjacoib РђРњ 2233 читал 1 Рє 30 делается, неужеле…

One thought on “Di Di Dikki; ಗಣೇಶ್‍ ಮಗನ ಜೊತೆಗೆ ‘ಡಿ ಡಿ ಢಿಕ್ಕಿ’ ಹೊಡೆಯುತ್ತಿದ್ದಾರೆ ಪ್ರೇಮ್

Leave a Reply

Your email address will not be published. Required fields are marked *