ಹೀರೋ ಆದ ರಾಜು ತಾಳಿಕೋಟೆ ಮಗ; ‘ವಿಕ್ಕಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ

ಕನ್ನಡದ ಜನಪ್ರಿಯ ಪೋಷಕ ನಟರಲ್ಲೊಬ್ಬರು ರಾಜು ತಾಳಿಕೋಟೆ. ‘ಮನಸಾರೆ’, ‘ಪಂಚರಂಗಿ’, ‘ಲೈಫು ಇಷ್ಟೇನೆ’, ‘ಟೋಪಿವಾಲ’ ಮುಂತಾದ ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿರುವ ರಾಜು ತಾಳಿಕೋಟೆ (Raju Talikote) ಅವರ ಮಗ ಭರತ್ ತಾಳಿಕೋಟೆ (Bharat Talikote), ಇದೀಗ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ.
ಭರತ್ ಅಭಿನಯದ ಮೊದಲ ಚಿತ್ರ ‘ವಿಕ್ಕಿ’ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಮಧ್ಯಮ ವರ್ಗದ ಯುವಕರ ಕುರಿತಾದ ಹಲವು ಚಿತ್ರಗಳು ಇದುವರೆಗೂ ಕನ್ನಡದಲ್ಲಿ ಮೂಡಿ ಬಂದಿವೆ. ಈಗ ಆ ಸಾಲಿಗೆ ‘ವಿಕ್ಕಿ’ ಸಹ ಸೇರಿದೆ. ಈ ಚಿತ್ರದ ಕೆಲಸಗಳು ಸಂಪೂರ್ಣವಾಗಿದೆ, ಇತ್ತೀಚೆಗೆ ಟ್ರೇಲರ್ ಬಿಡುಗಡೆಯಾಗಿದೆ. ನಟ ನವೀನ್ ಶಂಕರ್ ಮತ್ತು ತರುಣ್ ಸುಧೀರ್ ತಾಯಿ ಮಾಲತಿ ಸುಧೀರ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.
ದೀಪಕ್ ಎಸ್. ಅವಂದಕರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರವನ್ನು ಕೇಸರಿನಂದನ ಸಿನಿ ಕ್ರಿಯೇಶನ್ಸ್ ಅಡಿ ನವನೀತ ಲಕ್ಷ್ಮಿ ನಿರ್ಮಿಸಿದ್ದಾರೆ. ಇದಕ್ಕೂ ಮೊದಲು ‘ಚಿತ್ರಲಹರಿ’ ಎಂಬ ಚಿತ್ರ ನಿರ್ಮಿಸಿದ್ದರಂತೆ. ಈಗ ಸಂಸ್ಥೆಯ ಎರಡನೇ ಚಿತ್ರವಾಗಿ ‘ವಿಕ್ಕಿ’ ನಿರ್ಮಿಸಿದ್ದಾರೆ. ಈಗಾಗಲೇ ಚಿತ್ರವನ್ನು ವೀಕ್ಷಿಸಿರರುವ ಸೆನ್ಸಾರ್ ಮಂಡಳಿಯು ‘ಯು/ಎ’ ಪ್ರಮಾಣ ಪತ್ರ ನೀಡಿದೆ. ಚಿತ್ರವು ಮೇ ಎರಡನೇ ವಾರ ಬಿಡುಗಡೆ ಆಗಲಿದೆ.


ಇದಕ್ಕೂ ಮೊದಲು ನಾಲ್ಕೈದು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಭರತ್ ತಾಳಿಕೋಟೆ, ಇದೇ ಮೊದಲ ಬಾರಿಗೆ ಹೀರೋ ಆಗಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಭರತ್, ‘ಈ ಚಿತ್ರದ ಮೂಲಕ ಮೊದಲ ಬಾರಿ ಹೀರೋ ಆಗಿದ್ದೇನೆ. ಮಧ್ಯಮ ಕುಟುಂಬದ ಹುಡುಗನ ಪಾತ್ರ ನನ್ನದು’ ಎಂದರು.
ದಾವಣಗೆರೆ ಮೂಲದವರಾದ ನಿರ್ದೇಶಕ ದೀಪಕ್ ಮಾತನಾಡುತ್ತಾ, ‘ಇದೊಂದು ಕಾಮಿಡಿ ಚಿತ್ರ. ಮಧ್ಯಮ ವರ್ಗದ ಹುಡುಗನೊಬ್ಬ ದೊಡ್ಡ ಕನಸು ಕಂಡು, ಅದನ್ನು ನನಸು ಮಾಡಿಕೊಳ್ಳಲು ಹೋದಾಗ ಏನೆಲ್ಲ ಆಗಬಹುದು ಎಂಬುದನ್ನು ಹಾಸ್ಯಮಿಶ್ರಿತವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ’ ಎಂದರು.
‘ವಿಕ್ಕಿ’ ಚಿತ್ರದಲ್ಲಿ ಭರತ್ ಜೊತೆಗೆ ವಿಂಧ್ಯ ಹೆಗಡೆ, ವರುಣ್ ದೇವಯ್ಯ, ರಾಜು ತಾಳಿಕೋಟೆ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕಾಗಿ ಬೆಂಗಳೂರು, ಚಿಕ್ಕಮಗಳೂರು ಸುತ್ತಮುತ್ತ 35 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.
ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
[…] […]
[…] […]
[…] […]
[…] Yuddakanda box office collection; ಗಳಿಕೆ ಗೊತ್ತಿಲ್ಲ, ಒಳ್ಳೆಯ ಪ್ರಯತ್ನ ಗೆದ್ದಿದೆ ಎಂದ ಅಜೇಯ್ ರಾವ್ […]
[…] Yuva Rajkumar Ekka; ‘ಎಕ್ಕ’ದಲ್ಲಿ ಪುನೀತ್ ಅವರನ್ನು ನೆನಪಿಸಿದ ಯುವ ರಾಜಕುಮಾರ್ […]
2 thoughts on “ಹೀರೋ ಆದ ರಾಜು ತಾಳಿಕೋಟೆ ಮಗ; ‘ವಿಕ್ಕಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ”