AI Film; ಭಾರತದ ಮೊದಲ AI ಚಿತ್ರವಾದ ಕನ್ನಡದ ‘ಲವ್‍ ಯೂ’

ಕೃತಕ ಬುದ್ಧಿಮತ್ತೆ (AI Film) ತಂತ್ರಜ್ಞಾನವು ಎಲ್ಲಾ ಕ್ಷೇತ್ರಗಳನ್ನೂ ಆವರಿಸಿಕೊಳ್ಳುತ್ತಿವೆ. ಇದಕ್ಕೆ ಸಿನಿಮಾ ಸಹ ಹೊರತಲ್ಲ. ಈಗಾಗಲೇ ಕೆಲವು ಸಿನಿಮಾಗಳಲ್ಲಿ AI ಬಳಕೆಯಾಗುತ್ತಿದೆ. ತಮ್ಮ ಹೊಸ ಚಿತ್ರದಲ್ಲಿ AI ಮಹತ್ವದ ಪಾತ್ರ ವಹಿಸಲಿದೆ ಎಂದು ನಟ-ನಿರ್ದೇಶಕ ರವಿಚಂದ್ರನ್ ಸಹ ಹೇಳಿಕೊಂಡಿದ್ದಾರೆ.

ಹೀಗಿರುವಾಗಲೇ, ಕನ್ನಡದಲ್ಲಿ ಒಂದು ಪೂರ್ಣಪ್ರಮಾಣ AI ಚಿತ್ರ ಸದ್ದಿಲ್ಲದೆ ತಯಾರಾಗಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್‍ ಮಂಡಳಿಯು ಚಿತ್ರಕ್ಕೆ ‘U/A’ ಪ್ರಮಾಣ ಪತ್ರವನ್ನೂ ನೀಡಿದ್ದು, ಭಾರತದ ಮೊದಲ AI ಪ್ರಮಾಣ ಪತ್ರ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ.

ಅಂದಹಾಗೆ, ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ ಸೃಷ್ಟಿಯಾಗಿರುವ ಈ ಚಿತ್ರದ ಹೆಸರು ‘ಲವ್‍ ಯೂ’. ಈ ಚಿತ್ರದ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಮುಂತಾದ ಕೆಲಸಗಳನ್ನು ಹೊರತುಪಡಿಸಿದರೆ, ಮಿಕ್ಕೆಲ್ಲಾ ಕೆಲಸಗಳನ್ನೂ AI ಮೂಲಕ ಮಾಡಲಾಗಿದೆ. ಈ ಚಿತ್ರಕ್ಕೆ ಎಸ್‍. ನರಸಿಂಹ ಮೂರ್ತಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮತ್ತು ನಿರ್ಮಾಣ ಮಾಡಿದರೆ, ನೂತನ್‍ ಈ ಚಿತ್ರವನ್ನು AI ಮೂಲಕ ಸೃಷ್ಟಿಸಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ನರಸಿಂಹಮೂರ್ತಿ, ‘ನಮ್ಮ ‘ಲವ್‍ ಯೂ’ ಚಿತ್ರದಲ್ಲಿ ಬರುವ ಪ್ರತಿ ಪಾತ್ರಗಳು, ಸಂಗೀತ, ಗಾಯನ, ಛಾಯಾಗ್ರಹಣ, ಸೌಂಡ್ ಡಿಸೈನ್, ಹಿನ್ನೆಲೆಯಲ್ಲಿ ಬರುವ ಸ್ಥಳಗಳು, ಕಲರಿಂಗ್ ಹೀಗೆ ಎಲ್ಲಾ ಕೆಲಸಗಳಿಗೂ AI ಬಳಕೆ ಮಾಡಲಾಗಿದೆ. ನೂತನ್ ಎಂಬ AI ಇಂಜಿನಿಯರ್ ಮತ್ತು ಸುಂದರ್‍ ರಾಜ್‍ ಗುಂಡೂರಾವ್ ನೇತೃತ್ವದಲ್ಲಿ ಈ ಚಿತ್ರ ತಯಾರಾಗಿದೆ’ ಎನ್ನುತ್ತಾರೆ.

ಇದು ಕೇವಲ ಸಿನಿಮಾ ಅಲ್ಲ, ಇದೊಂದು ಕ್ರಾಂತಿ ಎನ್ನುವ ಎಸ್. ನರಸಿಂಹ ಮೂರ್ತಿ, ‘ಕಥೆ ನಿರೂಪಣೆ ಮತ್ತು ತಂತ್ರಜ್ಞಾನ ಸರಾಗವಾಗಿ ಬೆರೆಯುವ ಹೊಸ ಯುಗವನ್ನು ನಾವು ಪ್ರವೇಶಿಸುತ್ತಿದ್ದೇವೆ. ಕನ್ನಡ ಸಿನಿಮಾ ಜಾಗತಿಕ ಮಟ್ಟದಲ್ಲಿ ಇಂಥದ್ದೊಂದು ಬದಲಾವಣೆಗೆ ಉದಾಹರಣೆಯಾಗಿದೆ. ಭವಿಷ್ಯದಲ್ಲಿ ಈ ಬದಲಾವಣೆಗೆ ಹೊಂದಿಕೊಂಡು ನಮ್ಮ ಚಿತ್ರರಂಗ ಉಳಿದ ಚಿತ್ರರಂಗಗಳನ್ನು ಮುನ್ನಡೆಸುತ್ತಿದೆ ಎಂಬ ನಂಬಿಕೆ ನಮಗಿದೆ. ಇಂಥದ್ದೊಂದು ಕೆಲಸ ಮಾಡಿರುವುದಕ್ಕೆ ನನಗೆ ಹೆಮ್ಮೆ ಇದೆ’ ಎಂದು ಹೇಳಿದ್ದಾರೆ.

95 ನಿಮಿಷಗಳ ‘ಲವ್ ಯು’ ಚಿತ್ರದಲ್ಲಿ 12 ಹಾಡುಗಳಿದ್ದು, ಅವೆಲ್ಲವೂ AI ಮೂಲಕ ಸಂಯೋಜಿಸಲ್ಪಟ್ಟಿವೆ. ಈಗಾಗಲೇ ‘ಲವ್ ಯು’ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇತ್ತೀಚೆಗೆ ಈ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಚಿತ್ರಕ್ಕೆ ‘U/A’ ಪ್ರಮಾಣ ಪತ್ರವನ್ನೇ ನೀಡಿದೆ.

‘ಲವ್‍ ಯೂ’ ಚಿತ್ರವು ಇದೇ ಮೇ ಅಥವಾ ಜೂನ್ ವೇಳೆಗೆ ತೆರೆಗೆ ಬಿಡುಗಡೆಯಾಗಲಿದೆ.

ಇದನ್ನೂ ಓದಿ:-


ಹೆಚ್ಚಿನ ಓದು:-

  1. […] Yuddakanda box office collection; ಗಳಿಕೆ ಗೊತ್ತಿಲ್ಲ, ಒಳ್ಳೆಯ ಪ್ರಯತ್ನ ಗೆದ್ದಿದೆ ಎಂದ ಅಜೇಯ್‍ ರಾವ್‍ […]

  2. […] Yuva Rajkumar Ekka; ‘ಎಕ್ಕ’ದಲ್ಲಿ ಪುನೀತ್‍ ಅವರನ್ನು ನೆನಪಿಸಿದ ಯುವ ರಾಜಕುಮಾರ್ […]

One thought on “AI Film; ಭಾರತದ ಮೊದಲ AI ಚಿತ್ರವಾದ ಕನ್ನಡದ ‘ಲವ್‍ ಯೂ’

Leave a Reply

Your email address will not be published. Required fields are marked *