Dali Dhananjaya; ಧನಂಜಯ್‍ ಜೊತೆಗೆ ಹೇಮಂತ್‍ ರಾವ್‍ ಹೊಸ ಚಿತ್ರ; ಸದ್ಯದಲ್ಲೇ ಘೋಷಣೆ

ಶಿವರಾಜಕುಮಾರ್‌ (Shiva Rajkumar) ಅಭಿನಯದಲ್ಲಿ ಹೇಮಂತ್‍ ರಾವ್‍ (Hemanth Rao) ‘ಭೈರವನ ಕೊನೆ ಪಾಠ’ (Bhairavana Kone Paata) ಎಂಬ ಚಿತ್ರ ನಿರ್ದೇಶಿಸುತ್ತಿರುವ ಸುದ್ದಿ ಗೊತ್ತೇ ಇದೆ. ಕಳೆದ ವರ್ಷವೇ ಈ ಚಿತ್ರದ ಘೋಷಣೆಯಾಗಿತ್ತು. ಈ ಚಿತ್ರ ಇದೀಗ ಸ್ವಲ್ಪ ಮುಂದಕ್ಕೆ ಹೋಗಿದೆ. ಅದಕ್ಕೂ ಮೊದಲು ಧನಂಜಯ್‍ (Dali Dhananjaya) ಅಭಿನಯದಲ್ಲಿ ಹೇಮಂತ್‍ ಹೊಸ ಚಿತ್ರ ನಿರ್ದೇಶನ ಮಾಡಲಿದ್ದಾರೆ.

ಹೌದು, ‘ಭೈರವನ ಕೊನೆ ಪಾಠ’ ಚಿತ್ರಕ್ಕೂ ಮೊದಲು ಹೇಮಂತ್‍ ರಾವ್‍ ಹೊಸ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದು, ಈ ಚಿತ್ರದಲ್ಲಿ ಧನಂಜಯ್‍ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಇದೇ ವರ್ಷ ಶುರುವಾಗಲಿದೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಶಿವಣ್ಣ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರಂತೆ.

ಚಿತ್ರ ಯಾವುದು? ಹೆಸರೇನು? ಯಾರು ನಿರ್ಮಿಸುತ್ತಿದ್ದಾರೆ? ಯಾವಾಗ ಶುರು? ಇದ್ಯಾವುದರ ಬಗ್ಗೆಯೂ ಹೇಮಂತ್‍ ಮಾತನಾಡಿಲ್ಲ. 2023ರ ಕೊನೆಯಲ್ಲಿ ಬಿಡುಗಡೆಯಾದ ‘ಸಪ್ತ ಸಾಗರದಾಚೆ ಎಲ್ಲೋ 2’ ಚಿತ್ರದ ನಂತರ ಹೇಮಂತ್‍ ಯಾವೊಂದು ಚಿತ್ರವನ್ನೂ ನಿರ್ದೇಶನ ಮಾಡಿರಲಿಲ್ಲ. ‘ಭೈರವನ ಕೊನೆ ಪಾಠ’ ಘೋಷಣೆ ಮಾಡಿದ್ದರಾದರೂ, ಶಿವರಾಜಕುಮಾರ್‌ ಅವರ ಅನಾರೋಗ್ಯದಿಂದ ಮುಂದಕ್ಕೆ ಹೋಗಿದೆ. ಶಿವಣ್ಣ ಇದೀಗ ಆರೋಗ್ಯವಾಗಿದ್ದು, ‘ಭೈರವನ ಕೊನೆ ಪಾಠ’ ಚಿತ್ರಕ್ಕೂ ಮೊದಲು ‘ಉತ್ತರಕಾಂಡ’, ‘ಶಿವಣ್ಣ 131’, ತೆಲುಗಿನ ‘ಪೆದ್ದಿ’ ಮುಂತಾದ ಚಿತ್ರಗಳನ್ನು ಮುಗಿಸಬೇಕಿದೆ. ಆ ಚಿತ್ರಗಳು ಮುಗಿದ ಮೇಲೆ ‘ಭೈರವನ ಕೊನೆ ಪಾಠ’ ಶುರುವಾಗುವ ಸಾಧ್ಯತೆ ಇದೆ. ಅಷ್ಟರಲ್ಲಿ ಧನಂಜಯ್‍ ಅಭಿನಯದ ಚಿತ್ರವನ್ನು ಹೇಮಂತ್‍ ನಿರ್ದೇಶನ ಮಾಡಲಿದ್ದಾರೆ.

ಧನಂಜಯ್‍ ಕೈಯಲ್ಲೂ ಒಂದಿಷ್ಟು ಚಿತ್ರಗಳಿವೆ. ಪ್ರಮುಖವಾಗಿ, ‘ಹಳಗಲಿ’, ‘ಉತ್ತರಕಾಂಡ’ ಮತ್ತು ‘ಅಣ್ಣ ಫ್ರಮ್‍ ಮೆಕ್ಸಿಕೋ’ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ‘ನಾಡಪ್ರಭು ಕೆಂಪೇಗೌಡ’ ಮತ್ತು ‘ಜಿಂಗೋ’ ಚಿತ್ರಗಳು ಈಗಾಗಲೇ ಘೋಷಣೆಯಾಗಿವೆ. ಇವೆಲ್ಲದರ ಮಧ್ಯೆ, ಧನಂಜಯ್‍, ಹೇಮಂತ್‍ ನಿರ್ದೇಶನದ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ.

ಶಿವಣ್ಣ ಮತ್ತು ಧನಂಜಯ್‍ ಜೊತೆಯಾಗಿ ನಟಿಸುತ್ತಿರುವುದು ಇದು ಮೊದಲೇನಲ್ಲ. ಇದಕ್ಕೂ ಮೊದಲು ‘ಟಗರು’ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಶಿವಣ್ಣ ಪೊಲೀಸ್‍ ಅಧಿಕಾರಿಯಾಗಿ ಕಾಣಿಸಿಕೊಂಡರೆ, ಡಾಲಿ ಎಂಬ ನೆಗೆಟಿವ್ ಪಾತ್ರದಲ್ಲಿ ಧನಂಜಯ್‍ ನಟಿಸಿದ್ದರು. ಆ ನಂತರ ‘ಭೈರಾಗಿ’ ಮತ್ತು ‘ಉತ್ತರಕಾಂಡ’ ಚಿತ್ರಗಳಲ್ಲೂ ಇಬ್ಬರೂ ಜೊತೆಗೆ ನಟಿಸಿದ್ದಾರೆ. ಅವರಿಬ್ಬರೂ ಜೊತೆಯಾಗಿ ನಟಿಸಲಿರುವ ನಾಲ್ಕನೇ ಚಿತ್ರವಾಗಿ ಹೇಮಂತ್‍ ರಾವ್‍ ಚಿತ್ರ ಬರಲಿದೆ.

ಇದನ್ನೂ ಓದಿ:-


ಹೆಚ್ಚಿನ ಓದು:-

  1. Хороший магазинчик , рега хорошая , РІ общем стоит вашего внимания ))) всем удачи ! https://www.divephotoguide.com/user/abyefeecau ответь те РЅР° мыло…

  2. Меня РѕРґРёРЅ магазин вчера мурыжил СЃ 5 вечера, никак РЅРµ РјРѕРі дать реквизиты, хотя чего СѓР¶ проще? Выдал реквизиты, получил…

One thought on “Dali Dhananjaya; ಧನಂಜಯ್‍ ಜೊತೆಗೆ ಹೇಮಂತ್‍ ರಾವ್‍ ಹೊಸ ಚಿತ್ರ; ಸದ್ಯದಲ್ಲೇ ಘೋಷಣೆ

Leave a Reply

Your email address will not be published. Required fields are marked *