Watch the Video: ಪುಟ್ಟ ಗೌರಿ ದೊಡ್ಡ ಕನಸಿತ ತಯಾರಿ ಹೇಗಿದೆ ನೋಡಿ..

‘ಪುಟ್ಟ ಗೌರಿ’,’ಕನ್ನಡತಿ’ ಧಾರಾವಾಹಿಗಳಿಂದ ಮನೆಮಾತಾದ ನಟಿ ರಂಜನಿ ರಾಘವನ್ (Ranjani Raghavan). ನಂತರ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಅವರು ನಂತರ ಒಂದು ಕಥಾ ಸಂಕಲನ ಮತ್ತು ಕಾದಂಬರಿ ಬರೆದು ಬರವಣಿಗೆಯಲ್ಲೂ ತೊಡಗಿಕೊಂಡರು. ಕನ್ನಡತಿ ಧಾರಾವಾಹಿಯಲ್ಲಿ ಕನ್ನಡದ ಬಗ್ಗೆ ಪಾಠ ಮಾಡುವ ಮೂಲಕ ಮೆಚ್ಚುಗೆಯನ್ನೂ ಪಡೆದುಕೊಂಡಿದ್ದರು.

ಈಗ ಮತ್ತೊಂದು ವೃತ್ತಿಯನ್ನು ಆಯ್ಕೆಮಾಡಿಕೊಂಡಿದ್ದಾರೆ. ಇದು ಸಹ ಬಣ್ಣದ ಬದುಕಿನ ಇನ್ನೊಂದು ಭಾಗ. ಈ ಬಾರಿ ರಂಜಿನಿ ರಾಘವನ್‌ ತೆರೆಯ ಮುಂದೆ ಕೆಲಸ ಮಾಡುತ್ತಿಲ್ಲ. ತೆರೆಯ ಹಿಂದೆ ಇದ್ದುಕೊಂಡು ನಿರ್ದೇಶನದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.

ಹೌದು, ರಂಜನಿ ರಾಘವನ್ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಹಳೆ ಸುದ್ದಿ. ಈ ಮೊದಲು ಪುಟ್ಟಗೌರಿ ತಮ್ಮ ಇನ್‌ಸ್ಟಾ ಖಾತೆಯಲ್ಲಿ ನಿರ್ದೇಶನದ ಬಗ್ಗೆ ಮಾಹಿತಿ ನೀಡಿದ್ದರು. ಅಲ್ಲದೇ ಅವರ ಚೊಚ್ಚಲ ಚಿತ್ರಕ್ಕೆ ಇಳಯ ರಾಜ ಸಂಗೀತ ನಿರ್ದೇಶನ ನೀಡುತ್ತಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು.

ಈಗ ಕ್ಯಾಮೆರಾದ ಹಿಂದೆ ನಿಂತು ನಿರ್ದೇಶನ ಮಾಡುತ್ತಿರುವ ಫೋಟೋವನ್ನು ರಂಜನಿ ರಾಘವನ್ ಹಂಚಿಕೊಂಡಿದ್ದಾರೆ. “ಒಂದು ಕಥೆ, ಒಂದು ಕನಸು, ಒಂದೂವರೆ ವರ್ಷ, ನೂರಾರು ಅನುಭವಗಳು ನಿರ್ದೇಶಕಿಯಾಗಿ ನಮ್ಮ ಮೊದಲ ಸಿನಿಮಾ updates ನಿಮ್ಮೊಂದಿಗೆ ಹಂಚಿಕೊಳ್ಳೋದಕ್ಕೆ ಸಖತ್ excited ಆಗಿದ್ದೇನೆ.” ಎಂದು ಕ್ಯಾಪ್ಶನ್‌ನಲ್ಲಿ ಬರೆದುಕೊಂಡಿದ್ದಾರೆ.

ಸಿನಿಮಾದ ಬಗ್ಗೆ ಇನ್‌ಸ್ಟಾದಲ್ಲಿ ಲೈವ್‌ ಬಂದು ಹೆಚ್ಚಿನ ಮಾಹಿತಿ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ಕನ್ನಡತಿಯ ಹೊಸ ಪ್ರಯತ್ನವನ್ನು ಕನ್ನಡಿಗರು ಎದುರು ನೋಡುತ್ತಿದ್ದಾರೆ.



ಇದನ್ನೂ ಓದಿ:-


ಓದು ಮುಂದುವರೆಸಿ ಇಲ್ಲಿ..

  1. РєРѕРіРґР° появится РЅРѕРІРёРЅРєРё?? https://form.jotform.com/252456485701056 РїРѕРєР° никто ничего тут РЅРµ берите!!!!!!!!!!!!!!!!!!!!!!!!!!!!!!!!!!!!!!!!РјРѕСЏ ситуация решится если то СЏ сообщу.РџРѕРєР° кидалово нарисоваывается.Дабы даже Рѕ…

Leave a Reply

Your email address will not be published. Required fields are marked *