Kannappa ; ಎರಡು ತಿಂಗಳು ಮುಂದಕ್ಕೆ ಹೋಯ್ತು ‘ಕಣ್ಣಪ್ಪ’ ಚಿತ್ರದ ಬಿಡುಗಡೆ

Kannappa

ವಿಷ್ಣು ಮಂಚು ಅಭಿನಯದ ‘ಕಣ್ಣಪ್ಪ’ (Kannappa) ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಮೊದಲು ಚಿತ್ರ ಏಪ್ರಿಲ್‍ 25ರಂದು ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ, ಚಿತ್ರದ ಕೆಲಸಗಳು ಇನ್ನೂ ಮುಗಿದಿಲ್ಲವಾದ್ದರಿಂದ, ಚಿತ್ರದ ಬಿಡುಗಡೆಯನ್ನು ಎರಡು ತಿಂಗಳ ಕಾಲ ಮುಂದೂಡಲಾಗಿದೆ.

ಹಾಗಾದರೆ, ಚಿತ್ರದ ಬಿಡುಗಡೆ ಯಾವಾಗ? ‘ಕಣ್ಣಪ್ಪ’ ಚಿತ್ರವು ಜೂನ್‍ 27ರಂದು ಜಗತ್ತಿನಾದ್ಯಂತ ಪ್ಯಾನ್‍ ಇಂಡಿಯಾ ಚಿತ್ರವಾಗಿ ತೆಲುಗು, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

ಇತ್ತೀಚೆಗೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕದ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಡಾ. ಮೋಹನ್‍ ಬಾಬು, ವಿಷ್ಣು ಮಂಚು, ಪ್ರಭುದೇವ ಮತ್ತು ಚಿತ್ರದ ಕಾರ್ಯಕಾರಿ ನಿರ್ಮಾಪಕ ವಿನಯ್‍ ಮಹೇಶ್ವರಿ ಹಾಜರಿದ್ದರು.

‘ಕಣ್ಣಪ್ಪ’ ಚಿತ್ರದಲ್ಲಿ ಶಿವಭಕ್ತ ಕಣ್ಣಪ್ಪನಾಗಿ ವಿಷ್ಣು ಮಂಚು ನಟಿಸಿದ್ದು, ಪ್ರಭಾಸ್‍, ಅಕ್ಷಯ್‍ ಕುಮಾರ್‌, ಮೋಹನ್‍ ಲಾಲ್‍, ಕಾಜಲ್‍ ಅಗರ್ವಾಲ್‍ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಿಕ್ಕಂತೆ ಡಾ. ಮೋಹನ್‍ ಬಾಬು, ಶರತ್‍ ಕುಮಾರ್, ಮಧು, ದೇವರಾಜ್‍ ಮುಂತಾದವರು ನಟಿಸಿದ್ದಾರೆ,

ಎ.ವಿ.ಎ. ಎಂಟರ್‍ಟೈನ್‍ಮೆಂಟ್‍ ಮತ್ತು 24 ಫ್ರೇಮ್ಸ್ ಫ್ಯಾಕ್ಟರಿ ಅಡಿ ಡಾ. ಮೋಹನ್‍ ಬಾಬು ನಿರ್ಮಿಸಿರುವ ‘ಕಣ್ಣಪ್ಪ’ ಚಿತ್ರವನ್ನು ಮುಕೇಶ್‍ ಕುಮಾರ್‌ ಸಿಂಗ್‍ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಸ್ಟೀಫನ್‍ ದೇವಸ್ಸಿ ಸಂಗೀತಸವಿದ್ದು, ಶೆಲ್ಡನ್‍ ಚಾವ್‍ ಅವರ ಛಾಯಾಗ್ರಹಣವಿದೆ.

ಇದನ್ನೂ ಓದಿ:-

One thought on “Kannappa ; ಎರಡು ತಿಂಗಳು ಮುಂದಕ್ಕೆ ಹೋಯ್ತು ‘ಕಣ್ಣಪ್ಪ’ ಚಿತ್ರದ ಬಿಡುಗಡೆ

Leave a Reply

Your email address will not be published. Required fields are marked *