Bank Janardhan; ಪೋಷಕ, ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ಇನ್ನಿಲ್ಲ

ಹಾಸ್ಯ, ಪೋಷಕ, ಖಳನಾಯಕ ಹೀಗೆ ಚಂದನವನದ ಸಿನಿಮಾಗಳಲ್ಲಿ ನಾನಾ ರೀತಿಯ ಪಾತ್ರಗಳನ್ನು ಮಾಡಿ ರಂಜಿಸಿದ್ದ ಕಲಾವಿದ ಬ್ಯಾಂಕ್ ಜನಾರ್ಧನ್ (Bank Janardhan) (76) ರಾತ್ರಿ 2.30ರ ಸುಮಾರಿಗೆ ಇಹಲೋಕದ ಪ್ರಯಣ ಮುಗಿದ್ದಾರೆ.
ಜನಾರ್ಧನ್ ಚಿತ್ರದುರ್ಗದ ಹೊಳಲ್ಕೆಯವರು. ಅವರ ಶಿಕ್ಷಣ 10ನೇ ಕ್ಲಾಸಿನವರೆಗೆ ಮಾತ್ರ. ಜನಾರ್ಧನ್ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಬೆಳೆದವರು. ಜಯಲಕ್ಷ್ಮೀ ಬ್ಯಾಂಕ್‍ನಲ್ಲಿ ಜವಾನನಾಗಿ ಕೆಲಸ ಮಾಡುತ್ತಾ, ನಾಟಕಗಳಲ್ಲಿ ಇವರು ನಟಿಸುತ್ತಿದ್ದರು. ಮಲ್ಲಿಕಾರ್ಜುನ ಟೂರಿಂಗ್ ಟಾಕೀಸ್‌ನಲ್ಲೂ ಕೆಲಸ ಮಾಡಿದ್ದರು. ಅವರ ಅಭಿನಯದ ‘ಗೌಡ್ರ ಗದ್ಲ’ ನಾಟಕ ಯಶಸ್ವಿಯಾಯಿತು. ಅವರ ನಟನೆ ಕಂಡ ಧೀರೇಂದ್ರ ಗೋಪಾಲ್, ಜನಾರ್ಧನ್ ಅವರನ್ನು ಸಿನಿಮಾದಲ್ಲಿ ನಟಿಸುವುದಕ್ಕೆ ಪ್ರೋತ್ಸಾಹಿಸಿದರು.
‘ಸಾಹಸ ಸಿಂಹ’ ಚಿತ್ರದ ಚಿತ್ರೀಕರಣಕ್ಕೆ ನೋಡಲು ಧೀರೇಂದ್ರ ಗೋಪಾಲ್ ಜೊತೆ ಹೋದಾಗ ಅಲ್ಲಿ ಕುಣಿಗಲ್ ನಾಗಭೂಷಣ್ ಅವರ ಪರಿಚಯವಾಗಿ, ‘ಊರಿಗೆ ಉಪಕಾರಿ’ ಚಿತ್ರದಲ್ಲೊಂದು ಪಾತ್ರದ ಅವಕಾಶ ಸಿಗುತ್ತದೆ. ಆ ಚಿತ್ರದಲ್ಲಿ ವಜ್ರಮುನಿ ಅವರ ಬಾಡಿಗಾರ್ಡ್ ಪಾತ್ರದಲ್ಲಿ ಜನಾರ್ಧನ್ ಗಮನಸೆಳೆಯುತ್ತರೆ. ಜನಾರ್ಧನ್ ಅವರಿಗೆ ದೊಡ್ಡ ಬ್ರೇಕ್ ನೀಡಿದ್ದು ಕಾಶೀನಾಥ್ ಅಭಿನಯದ ‘ಅಜಗಜಾಂತರʼ ಚಿತ್ರ. ನಂತರ ಉಪೇಂದ್ರ ನಿರ್ದೇಶನದ ‘ತರ್ಲೆ ನನ್ಮಗ’ ಚಿತ್ರದಲ್ಲಿ ಪರಂಧಾಮಯ್ಯ ಊರುಬಾಗಿಲ್ ಪಾತ್ರದಲ್ಲಿ ದೊಡ್ಡ ಹೆಸರು ಮಾಡಿದರು. ಈ ಚಿತ್ರದ ನಂತರ ಜಗ್ಗೇಶ್ ಮತ್ತು ಜನಾರ್ಧನ್ ಜೋಡಿ ಹಿಟ್ ಆಯ್ತು.
ಮುಂದಿನ ದಿನಗಳಲ್ಲಿ ‘ಶ್’, ‘ಮೇಕಪ್’, ‘ಮಿಸ್ಟರ್ ಬಕ್ರ’, ‘ಓಳು ಸಾರ್ ಬರೀ ಓಳು’, ‘ರೂಪಾಯಿ ರಾಜ’, ‘ಬೊಂಬಾಟ್ ಹೆಂಡ್ತಿ’ ಸೇರಿದಂತೆ ಇದುವರೆಗೂ 600 ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. 2023ರಲ್ಲಿ ಬಿಡುಗಡೆಯಾದ ‘ಉಂಡೆನಾಮ’ ಚಿತ್ರವು ಅವರ ಕೊನೆಯ ಚಿತ್ರ.
(sandalwood-senior-actor-bank-janardhan-passed away)
One thought on “Bank Janardhan; ಪೋಷಕ, ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ಇನ್ನಿಲ್ಲ”