Gangster Alla Prankster; ತಿಲಕ್ ಈಗ ‘ಗ್ಯಾಂಗ್‍ಸ್ಟರ್ ಅಲ್ಲ ಪ್ರ್ಯಾಂಕ್‍ಸ್ಟರ್’

ಕಳೆದ ವರ್ಷ ಬಿಡುಗಡೆಯಾದ ‘ಜೋಗ್ 101’ ಚಿತ್ರದಲ್ಲಿ ನಟಿಸಿದ ನಂತರ ತಿಲಕ್ (Tilak) ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ಒಂದಿಷ್ಟು ಚಿತ್ರಗಳಲ್ಲಿ ತಿಲಕ್ ಅಭಿನಯಿಸುತ್ತಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಈ ಮಧ್ಯೆ, ತಿಲಕ್ ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ಮುಗಿಸಿದ್ದು, ಆ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ತಿಲಕ್ ನಟಿಸಿರುವ ಹೊಸ ಚಿತ್ರದ ಹೆಸರು ‘ಗ್ಯಾಂಗ್‍ಸ್ಟರ್ ಅಲ್ಲ ಪ್ರ್ಯಾಂಕ್‍ಸ್ಟರ್’ (Gangster Alla Prankster). ಈ ಚಿತ್ರವನ್ನು ಗಿರೀಶ್ ಕುಮಾರ್ (Girish Kumar B) ನಿರ್ದೇಶಿಸುವುದರ ಜೊತೆಗೆ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಇತ್ತೀಚೆಗೆ ಸೆನ್ಸಾರ್ ಮಂಡಳಿಯು ವೀಕ್ಷಣೆ ಮಾಡಿದ್ದು ಚಿತ್ರಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡಿದೆ.
ನಿರ್ದೇಶಕ ಗಿರೀಶ್ ಇದಕ್ಕೂ ಮೊದಲು ‘ಭಾವಚಿತ್ರ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಈಗ ‘ಗ್ಯಾಂಗ್‍ಸ್ಟರ್ ಅಲ್ಲ ಪ್ರ್ಯಾಂಕ್‍ಸ್ಟರ್’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಅವರು, ‘ತಿಲಕ್ ಚಿತ್ರದಲ್ಲಿ ಗ್ಯಾಂಗ್‍ಸ್ಟರ್ ಪಾತ್ರ ಮಾಡಿದರೆ, ನಾನು ಪ್ರ್ಯಾಂಕ್‍ಸ್ಟರ್ ಪಾತ್ರವನ್ನು ಮಾಡಿದ್ದೇನೆ. ಇದು ಯೂಟ್ಯೂಬರ್ ಒಬ್ಬನ ಸುತ್ತ ನಡೆಯುವ ಕಥೆಯಾಗಿದೆ. ತಿಲಕ್ ಅವರು ಬಹಳ ದಿನಗಳ ನಂತರ ಗ್ಯಾಂಗ್‍ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಬಹಳ ಬೇಗ ತೆರೆಗೆ ಬರಲಿದೆ’ ಎಂದು ಹೇಳಿದ್ದಾರೆ.

‘ಗ್ಯಾಂಗ್‍ಸ್ಟರ್ ಅಲ್ಲ ಪ್ರ್ಯಾಂಕ್‍ಸ್ಟರ್’ ಚಿತ್ರದಲ್ಲಿ ತಿಲಕ್ ಶೇಖರ್, ಗಿರೀಶ್ ಕುಮಾರ್, ವಿರಾನಿಕ ಶೆಟ್ಟಿ, ಬಲ ರಾಜವಾಡಿ, ಹೊನವಳ್ಳಿ ಕೃಷ್ಣ, ಸಂಗೀತ ಅನಿಲ್, ಸುಂದರ್, ‘ಮಜಾ ಟಾಕೀಸ್’ ಪವನ್, ಹನುಮಂತೇಗೌಡ, ಭವಾನಿ ಪ್ರಕಾಶ್ ಮುಂತಾದವರು ನಟಿಸಿದ್ದು, ಚಿತ್ರಕ್ಕೆ ಜಾನ್ ಕೆನಡಿ (John Kennady) ಸಂಗೀತ, ಅಜಯ್ ಕುಮಾರ್ ಛಾಯಾಗ್ರಹಣವಿದೆ.
ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
- Shiva Rajkumar; ಪಿ. ವಾಸು ಸಹೋದರಿಯ ಮಗನ ಚಿತ್ರದಲ್ಲಿ ಶಿವಣ್ಣ ಅಭಿನಯ
- Preethi Prema Panganama; ಪ್ರೀತಿ, ಪ್ರೇಮ ಮಾಡಿ ಪಂಗನಾಮ ಹಾಕಲು ಹೊರಟವರ ಕಥೆ ಇದು …
- Puppy; ಇಬ್ಬರು ಬಾಲಕರು ಹಾಗೂ ಶಾನ್ವದ ಸುತ್ತ ಸಾಗುವ ‘ಪಪ್ಪಿ’ ಮೇ1ಕ್ಕೆ ಬಿಡುಗಡೆ
- Yuva Rajkumar Ekka; ‘ಎಕ್ಕ’ದಲ್ಲಿ ಪುನೀತ್ ಅವರನ್ನು ನೆನಪಿಸಿದ ಯುವ ರಾಜಕುಮಾರ್
- Yuddakanda box office collection; ಗಳಿಕೆ ಗೊತ್ತಿಲ್ಲ, ಒಳ್ಳೆಯ ಪ್ರಯತ್ನ ಗೆದ್ದಿದೆ ಎಂದ ಅಜೇಯ್ ರಾವ್
ನಿಮ್ಮ ಓದನ್ನೂ ಇನ್ನೂ ವಿಸ್ತರಿಸಿ..
[…] […]
[…] […]
[…] […]
[…] Yuddakanda box office collection; ಗಳಿಕೆ ಗೊತ್ತಿಲ್ಲ, ಒಳ್ಳೆಯ ಪ್ರಯತ್ನ ಗೆದ್ದಿದೆ ಎಂದ ಅಜೇಯ್ ರಾವ್ […]
[…] Yuva Rajkumar Ekka; ‘ಎಕ್ಕ’ದಲ್ಲಿ ಪುನೀತ್ ಅವರನ್ನು ನೆನಪಿಸಿದ ಯುವ ರಾಜಕುಮಾರ್ […]
One thought on “Gangster Alla Prankster; ತಿಲಕ್ ಈಗ ‘ಗ್ಯಾಂಗ್‍ಸ್ಟರ್ ಅಲ್ಲ ಪ್ರ್ಯಾಂಕ್‍ಸ್ಟರ್’”