K L Rahul; ಕೆ.ಎಲ್ ರಾಹುಲ್ ಸಂಭ್ರಮಾಚರಣೆಯ ಹಿಂದಿದೆ ʻಕಾಂತಾರʼ ರಹಸ್ಯ..!

ಇಲ್ಲಿನ ನೆಲ, ನಾನು ಬೆಳೆದು ಬಂದಿರುವ ಸ್ಥಳ. ಇಲ್ಲಿನ ಬಗ್ಗೆ ಎಲ್ಲರಿಗಿಂತ ಹೆಚ್ಚಾಗಿ ನನಗೆ ಚೆನ್ನಾಗಿ ಗೊತ್ತಿದೆ. ಅದನ್ನು ನೆನಪಿಸಿಕೊಂಡೆ. ಈ ಹೇಳಿಕೆಯನ್ನು ನೀಡಿದ್ದು ಬೇರೆಯಾರು ಅಲ್ಲ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (Indian Premier League) (ಐಪಿಎಲ್) (IPL) ಡೆಲ್ಲಿ ಕ್ಯಾಪಿಲ್ಸ್‌ಗಾಗಿ (Delhi Capitals) ಆಡುತ್ತಿರುವ ಕೆ.ಎಲ್. ರಾಹುಲ್ (K L Rahul). ಹೀಗೇ ರಾಹುಲ್ ಹೇಳಲು ಕಾರಣ ಏನೆಂದು ಪ್ರಶ್ನೆ ಮೂಡಬಹುದು. ಇದಕ್ಕೆ ನಿನ್ನೆ (ಏಪ್ರಿಲ್ 10) ನಡೆದ ಐಪಿಎಲ್ ಪಂದ್ಯದ ಬಗ್ಗೆ ತಿಳಿದಿರಬೇಕು.
ಈ ಕಾರಣ ಹಿನ್ನೆಲೆ ನೋಡುವುದಾದರೆ, ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) (RCB) ಮತ್ತು ಡೆಲ್ಲಿ ಕ್ಯಾಪಿಲ್ಸ್ ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಮುಖಾಮುಖಿ ಆಗಿದ್ದವು. ಈ ಪಂದ್ಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಕನ್ನಡಿಗ, ವಿಕೆಟ್ ಕೀಪರ್-ಬ್ಯಾಟರ್ ಕೆ.ಎಲ್. ರಾಹಲ್ ವಿಶೇಷವಾಗಿ ಸಂಭ್ರಮಿಸಿದರು. ಈ ಸಂಭ್ರಮಾಚಾರಣೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿತ್ತು.

ಸಂಭ್ರಮದ ಬಗ್ಗೆ ರಾಹುಲ್ ಮಾತು:
ಪಂದ್ಯದ ನಂತರ ಡೆಲ್ಲಿ ಕ್ಯಾಪಿಟಲ್ಸ್‌ನ ಸಾಮಾಜಿಕ ಜಾಲತಾಣಗಳಕ್ಕಾಗಿ ಕೆ ಎಲ್ ರಾಹುಲ್ ಕೊಟ್ಟ ಕಿರು ಸಂದರ್ಶನದಲ್ಲಿ ಗೆಲುವಿನ ನಂತರದ ಸಂಭ್ರಮಾಚರಣೆಯ ಬಗ್ಗೆ ಹಂಚಿಕೊಂಡಿದ್ದಾರೆ. ಅದರಲ್ಲಿ ‘ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ನನಗೆ ವಿಶೇಷವಾದ ತಾಣವಾಗಿದೆ. ನನ್ನ ಮೆಚ್ಚಿನ ಸಿನಿಮಾ ‘ಕಾಂತಾರ’ದಲ್ಲಿ ಇರುವಂತೆಯೇ ನಾನು ಸಂಭ್ರಮಾಚರಣೆಯನ್ನು ಮಾಡಿದ್ದೆ. ಹೌದು, ಇಲ್ಲಿನ ನೆಲ, ನಾನು ಬೆಳೆದು ಬಂದಿರುವ ಸ್ಥಳ. ಇಲ್ಲಿನ ಬಗ್ಗೆ ಎಲ್ಲರಿಗಿಂತ ಹೆಚ್ಚಾಗಿ ನನಗೆ ಚೆನ್ನಾಗಿ ಗೊತ್ತಿದೆ. ಅದನ್ನು ನೆನಪಿಸಿಕೊಂಡೆʼ ಎಂದು ಹೇಳಿದ್ದಾರೆ.
ಪಂದ್ಯದಲ್ಲಿ ಏನಾಯ್ತು?
ಟಾಸ್ ಸೋತ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿತು. ಮೊಲದ ಐದು ಓವರ್ ಮತ್ತು ಕೊನೆಯ ಮೂರು ಓವರ್‌ನಲ್ಲಿ ಮಾತ್ರ ಬಿರುಸಾದ ಬ್ಯಾಟಿಂಗ್ ಮಾಡಿದ ಕಾರಣ ಬೆಂಗಳೂರಿನ ಪಿಚ್‌ಗೆ ಹೋಲಿಸಿದರೆ 70 ರಿಂದ 80 ರನ್ ಕಡಿಮೆ ಗಳಿಸಿತು. 20 ಮುಕ್ತಾಯಕ್ಕೆ ಬೆಂಗಳೂರು ತಂಡ ಗಳಿಸಿದ್ದು 167 ರನ್ ಅಷ್ಟೇ.
ಈ ಗುರಿ ಬೆನ್ನತ್ತಿದ ಡಿಸಿ ತಂಡಕ್ಕೆ ಆರಂಭಿಕ ಆಘಾತ ಎದುರಾದರೂ ಕನ್ನಡಿಗ ಕೆ ಎಲ್ ರಾಹುಲ್ ಆಸರೆ ಆದರು. ಈ ಕಾರಣದಿಂದ ಕೇವಲ 4 ವಿಕೆಟ್ ನಷ್ಟದಿಂದ 17 ಓವರ್‌ನಲ್ಲೇ ತಂಡ ಗುರಿಯನ್ನು ತಲುಪಿತ್ತು. ಕೆ. ಎಲ್. ರಾಹುಲ್ ತಮ್ಮ ಅದ್ಭುತ ಬ್ಯಾಟಿಂಗ್‌ನಿಂದ 93 ರನ್ ಗಳಿಸಿ ಅಜೇಯವಾಗಿ ಉಳಿದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಕಾರಣಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
ಪಂದ್ಯದ ಗೆಲುವಿನ ಶಾಟ್ ಹೊಡದ ನಂತರ ರಾಹುಲ್ ಕಾಂತಾರ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ರಿಷಬ್ ಶೆಟ್ಟಿ ಗುಳಿಗನ ಪಾತ್ರದಲ್ಲಿ ನಟಿಸುವಾಗ ಈ ಭೂಮಿ ನನ್ನದು ಎಂದು ಹೇಳುವ ಆಂಗಿಕ ಅಭಿನಯವನ್ನು ನಕಲಿಸಿದರು.
ರಾಹುಲ್‌ಗಿದೆ ಕರಾವಳಿ ನಂಟು:
ಕೆ ಎಲ್ ರಾಹುಲ್ ಮೂಲತಃ ಮಂಗಳೂರಿನವರು. ರಾಹುಲ್ ತಾಯಿ ಯುನಿವರ್ಸಿಟಿ ಕಾಲೇಜಿನ ಉಪನ್ಯಾಸಕಿ. ಕೆ. ಎಲ್. ರಾಹುಲ್ ಹುಟ್ಟಿ ಬೆಳೆದ ಊರು ಮಂಗಳೂರು ಹೀಗಾಗಿ ಇಲ್ಲಿನ ಆಚರಣೆಗಳ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿದೆ. ಅಲ್ಲದೇ ರಾಹುಲ್ ಆಡಿ ಬೆಳೆದ ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ. ಹೀಗಾಗಿ ಇಲ್ಲಿ ಚೆಂಡು ಬ್ಯಾಟಿಗೆ ಹೇಗೆ ಬರುತ್ತದೆ ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ಇದೂ ಸಹ ಅವರ ಲೀಲಾಜಾಲ ಬ್ಯಾಟಿಂಗ್‌ಗೆ ಕಾರಣ ಎಂದು ಹೇಳಿದರೆ ತಪ್ಪಾಗಲಾರದು.
Delhi Capitals’ wicket keeper-batsman K L Rahul thumped his chest, pointed to the ground and then drew a circle with his bat, during the match against Royal Challengers Bengaluru on April 10, 2025, not many realized the significance of what he was doing, until he mentioned it in a post-match. Speaking after the match, Rahul had said, “This is a special place from me. This celebration was from one of my favourite movies, Kantara. So, a tiny reminder that this ground, this turf, this place where I grew up, is mine.”
- ಕನ್ನಡದ ಸಿನಿಮಾ KendaSampige ದಶಕದ ಸಂಭ್ರಮ
- ಯುವ ಪ್ರತಿಭೆಗಳ “ಆಸ್ಟಿನ್ ನ ಮಹನ್ಮೌನ”(Austin Na Mahan Mouna) ಚಿತ್ರದ ಹಾಡುಗಳ ಬಿಡುಗಡೆ : ಸೆಪ್ಟಂಬರ್ 5 ಕ್ಕೆ ರಿಲೀಸ್
- Shivaraj Kumar ಹೊಸ ಚಿತ್ರ ‘ಡ್ಯಾಡ್’; ಡಾಕ್ಟರ್ ಪಾತ್ರದಲ್ಲಿ ನಟನೆ
- Dr Vishnuvardhan ಸ್ಮಾರಕ ಅಭಿಮಾನಿಗಳಿಂದಲೇ ಬೆಂಗಳೂರಿನಲ್ಲಿ ; ಸೆ. 18ಕ್ಕೆ ಅಡಿಗಲ್ಲು
- Vikram Ravichanrdran ಹುಟ್ಟುಹಬ್ಬಕ್ಕೆ ಹೊಸ ಸುದ್ದಿ …
I was recommended this web site by my cousin. I’m not sure whether this post is written by him as…
888starz скачать http://procurement.gov.ck/wordpress/?p=14464
Hiya very cool site!! Man .. Beautiful .. Wonderful .. I will bookmark your website and take the feeds additionally?…
это самый ровный магаз братцы!!!) работаю СЃ РЅРёРјРё целый РіРѕРґ, РЅРµ разу даже нервы РЅРµ потрепали) !!! конспирация РЅР° высоте,…
Very great post. I simply stumbled upon your weblog and wanted to say that I’ve truly loved browsing your blog…