Kiran Raj; ಜಾಕಿಯಾದ ಕಿರಣ್ ರಾಜ್; ಗುರುತೇಜ್ ಶೆಟ್ಟಿ ನಿರ್ದೇಶನದಲ್ಲಿ ಹೊಸ ಚಿತ್ರ

- ಕುದುರೆ ಏರಿ ಜಾಕಿಯಾದ ಕಿರಣ್ ರಾಜ್
- ಗುರುತೇಜ್ ಮತ್ತು ಕಿರಣ್ ರಾಜ್ ಕಾಂಬಿನೇಷನ್ನ ಮೂರನೇ ಸಿನಿಮಾ
ಈ ಹಿಂದೆ ಕಿರಣ್ ರಾಜ್ ಅಭಿನಯದ ‘ಬಡ್ಡೀಸ್’ ಮತ್ತು ‘ರಾನಿ’ (Ronny) ಚಿತ್ರಗಳನ್ನು ನಿರ್ದೇಶನ ಮಾಡಿದ್ದರು ಗುರುತೇಜ್ ಶೆಟ್ಟಿ (GuruTej Shetty). ಒಂದು ಸ್ನೇಹದ ಕಥೆಯಾದರೆ, ಇನ್ನೊಂದು ಆ್ಯಕ್ಷನ್ ಪ್ರೇಮಕಥೆಯಾಗಿದ್ದು. ಇದೀಗ ಮೂರನೇ ಚಿತ್ರಕ್ಕೆ ಗುರುತೇಜ್ ಮತ್ತು ಕಿರಣ್ ರಾಜ್ (Kiran Raj) ಜೊತೆಯಾಗಿ ಕೈಹಾಕಿದ್ದು, ಫ್ಯಾಮಿಲಿ ಸೆಂಟಿಮೆಂಟ್ ಒಳಗೊಂಡ ಥ್ರಿಲ್ಲರ್ ಚಿತ್ರಕ್ಕೆ ಈ ಜೋಡಿ ಜೊತೆಯಾಗಿದೆ.

‘ರಾನಿ’ ಯಲ್ಲಿ ಲಾಂಗ್ ಹಿಡಿದಿದ್ದ ಕಿರಣ್ ರಾಜ್, ಈಗ ಕುದುರೆ ಏರಿ ಜಾಕಿಯಾಗಿದ್ದಾರೆ. ಈ ಚಿತ್ರಕ್ಕೆ ‘ಜಾಕಿ 42’ ಎಂಬ ಹೆಸರಿಡಲಾಗಿದ್ದು, ಈ ಚಿತ್ರವು ರೇಸ್ ಹಿನ್ನೆಲೆಯಲ್ಲಿ ಸಾಗುತ್ತದೆ. ಗೋಲ್ಡನ್ ಗೇಟ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಭಾರತಿ ಸತ್ಯನಾರಾಯಣ, ‘ಜಾಕಿ 42’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
‘ಜಾಕಿ 42’ ಚಿತ್ರದ ಬರವಣಿಗೆ ಮತ್ತು ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದ್ದು, ಮೇ 15 ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಬೆಂಗಳೂರು, ಮೈಸೂರು, ವಿದೇಶದಲ್ಲೂ ಚಿತ್ರೀಕರಣ ನೆಡೆಯಲಿದೆ. ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು, ರೇಸ್ನಲ್ಲಿ ಜಾಕಿಯೊಬ್ಬ ಕುದುರೆ ಓಡಿಸುತ್ತಿರುವ ದೃಶ್ಯವಿದ್ದು, ಕುದುರೆಯ ಕೆಳಗೆ 500 ರೂ.ಗಳ ನೋಟುಗಳ ಬಂಡಲ್ ನೋಡಬಹುದು. ರೇಸ್ ಮತ್ತು ಜೂಜಿನ ಕುರಿತಾಗಿ ಈ ಚಿತ್ರ ಹಲವು ವಿಷಯಗಳನ್ನು ಹೇಳುತ್ತದೆ ಎಂದು ಈ ಪೋಸ್ಟರ್ ಸೂಚಿಸುತ್ತದೆ.
‘ರಾನಿ’ಯಲ್ಲಿ ಕೆಲಸ ಮಾಡಿದ ತಂತ್ರಜ್ಞರ ತಂಡ ಇಲ್ಲೂ ಕೆಲಸ ಮಾಡುತ್ತಿದೆ. ರಾಘವೇಂದ್ರ ಬಿ. ಕೋಲಾರ ಛಾಯಾಗ್ರಹಣ, ಸತೀಶ್ ಕಲಾ ನಿರ್ದೇಶನ ಹಾಗೂ ಉಮೇಶ ಆರ್.ಬಿ ಸಂಕಲನ ಈ ಚಿತ್ರಕ್ಕಿದೆ. ವಿಕಾಸ್ ನೇಗಿಲೋಣಿ ಚಿತ್ರಕಥೆ ಮತ್ತು ಸಂಭಾಷಣೆ ರಚಿಸುತ್ತಿದ್ದಾರೆ.
‘ಜಾಕಿ 42’ ಚಿತ್ರವಲ್ಲದೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಕರ್ಣ’ ಎಂಬ ಹೊಸ ಧಾರಾವಾಹಿಯಲ್ಲೂ ಕಿರಣ್ ರಾಜ್, ಕರ್ಣನಾಗಿ ನಟಿಸುತ್ತಿದ್ದಾರೆ.
(Earlier, Gurutej Shetty had directed the films ‘Buddies’ and ‘Ronny’, both starring Kiran Raj. While one was a story about friendship, the other was an action-romantic film. Now, for their third collaboration, Gurutej and Kiran Raj are teaming up once again — this time for a thriller with strong family sentiments at its core.)
One thought on “Kiran Raj; ಜಾಕಿಯಾದ ಕಿರಣ್ ರಾಜ್; ಗುರುತೇಜ್ ಶೆಟ್ಟಿ ನಿರ್ದೇಶನದಲ್ಲಿ ಹೊಸ ಚಿತ್ರ”