Agnyathavasi; ಈ ‘ಅಜ್ಞಾತವಾಸಿ’ ಯಾರು? ಏ. 11ಕ್ಕೆ ಸಿಗಲಿದೆ ಉತ್ತರ

ಹೇಮಂತ್‍ ರಾವ್ (Hemanth Rao) ನಿರ್ಮಾಣದಲ್ಲಿ, ಜನಾರ್ಧನ್‍ ಚಿಕ್ಕಣ್ಣ (Janardhan Chikkanna) ನಿರ್ದೇಶನದಲ್ಲಿ ಎರಡು ವರ್ಷಗಳ ಹಿಂದೆ ‘ಅಜ್ಞಾತವಾಸಿ’ (Agnyathavasi) ಎಂಬ ಚಿತ್ರ ಶುರುವಾಗಿತ್ತು. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಚಿತ್ರವು ಏಪ್ರಿಲ್‍ 11ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ.

ಅದಕ್ಕೂ ಮೊದಲು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಮಲೆನಾಡಿನಲ್ಲಿ 90ರ ಕಾಲಘಟ್ಟದಲ್ಲಿ ನಡೆಯುವ ಒಂದಿಷ್ಟು ಕೊಲೆಗಳ ಸುತ್ತ ಸುತ್ತುವ ಈ ಚಿತ್ರದಲ್ಲಿ ರಂಗಾಯಣ ರಘು (Ragayana Raghu), ಶರತ್‍ ಲೋಹಿತಾಶ್ವ, ಪಾವನಾ ಗೌಡ, ಸಿದ್ದು ಮೂಲಿಮನಿ, ರವಿಶಂಕರ್‌ ಗೌಡ ಮುಂತಾದವರು ನಟಿಸಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ರಂಗಾಯಣ ರಘು, ‘ಒಬ್ಬ ನಿರ್ದೇಶಕ ಇನ್ನೊಬ್ಬ ನಿರ್ದೇಶಕರ ಕಥೆ ಕೇಳಿ ಮೆಚ್ಚಿ ಸಿನಿಮಾ ನಿರ್ಮಿಸಿದ್ದು, ಚಿತ್ರರಂಗ ಬೆಳೆಯೋದಕ್ಕೆ ಬಹಳ ಸಹಕಾರಿಯಾಗುತ್ತದೆ. ಈ ಚಿತ್ರವನ್ನು ನಾನೇ ಮಾಡುತ್ತೀನಿ ಎಂದು ಹೇಮಂತ್‍ ಹೇಳಬಹುದಿತ್ತು. ಅವರು ಈಗಾಗಲೇ ಸಾಕಷ್ಟು ಒಳ್ಳೆಯ ಚಿತ್ರಗಳನ್ನು ಮಾಡಿರುವವರು. ಆದರೆ, ಅವರು ಜನಾರ್ಧನ್‍ ಚಿಕ್ಕಣ್ಣಗೆ ಚಿತ್ರ ನಿರ್ದೇಶಿಸುವ ಅವಕಾಶ ಕೊಟ್ಟರು’ ಎಂದು ನೆನಪಿಸಿಕೊಂಡರು.

ಜನಾರ್ಧನ್‍ ಈ ಕಥೆ ಹೇಳಿದಾಗ, ಯಾರು ಈ ಕಥೆ ಮಾಡಿದ್ದು ಎಂದು ರಘು ಕೇಳಿದರಂತೆ. ‘ಈ ಕಥೆಯನ್ನು ಜನಾರ್ಧನ್‍ಗೆ ಹೇಳಿದ್ದು ಅವರ ಗುರುಗಳಂತೆ. ಯಾವ ಪಾತ್ರ ಕೇಳಿದರೂ ಹೊಟ್ಟೆಕಿಚ್ಚಾಗುವಂತಿದೆ. ಶರತ್‍ ಪಾತ್ರವಂತೂ ಡಬ್ಬಲ್‍ ಹೊಟ್ಟೆಕಿಚ್ಚಾಗುತ್ತದೆ. ಪಾವನಾ, ಸಿದ್ದು, ರವಿಶಂಕರ್‍ ಗೌಡ ಎಲ್ಲಾ ಪಾತ್ರಗಳೂ ಚೆನ್ನಾಗಿವೆ. ಇಲ್ಲಿ ಕೊಲೆಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಆಗುತ್ತದೆ. ಇದಕ್ಕೆ ಪೂರಕವಾಗಿ ಬಹಳ ಒಳ್ಳೆಯ ಲೊಕೇಶನ್‍ಗಳು ಸಿಕ್ಕಿವೆ. ಈಗಾಗೇ ಕೊಲೆಗಳ ಬಗ್ಗೆ ಸಾಕಷ್ಟು ಒಳ್ಳೆಯ ಚಿತ್ರಗಳು ಬಂದಿವೆ. ಆ ಸಾಲಿಗೆ ಇದು ಸಹ ಸೇರುತ್ತದೆ ಎಂಬ ನಂಬಿಕೆ ಇದೆ’ ಎಂದರು.

ಜನಾರ್ಧನ್ ಚಿಕ್ಕಣ್ಣ ಮಾತನಾಡಿ, ‘ಮಲೆನಾಡಿನಲ್ಲಿ ನಡೆಯುವ ಕಥೆ. ಸಣ್ಣ ಹಳ್ಳಿಯೊಂದರಲ್ಲಿ ನಡೆಯುವ ಕಾಲ್ಪನಿಕ ಕಥೆ. ಹಳ್ಳಿಯಲ್ಲಿ ಪೊಲೀಸ್ ಸ್ಟೇಷನ್ ಸ್ಥಾಪನೆಯಾಗಿ 25 ವರ್ಷವಾಗಿರುತ್ತದೆ. ಯಾವುದೇ ಸಣ್ಣ ಕೇಸ್ ಕೂಡ ಅಲ್ಲಿ ದಾಖಲಾಗಿರುತವುದಿಲ್ಲ. 1997ರಲ್ಲಿ ಮರ್ಡರ್ ಕೇಸ್ ದಾಖಲಾಗುತ್ತದೆ. ಅನುಭವ ಇಲ್ಲದ ಪೊಲೀಸ್ ಅಲ್ಲಿಗೆ ಬಂದಾಗ ಈ ಕೇಸ್ ಹೇಗೆ ಬಗೆಹರಿಸುತ್ತಾರೆ ಎಂಬುವುದೇ ಕಥೆ. ‘ಗುಳ್ಟು’ ಬಳಿಕ ಏನೂ ಮಾಡಬೇಕು ಅಂದುಕೊಂಡಾಗ ಈ ಕಥೆ ನನ್ನನ್ನು ಎಕ್ಸೈಟ್ ಮಾಡಿತು. ಹೇಮಂತ್ ಅವರಿಗೆ ಕಥೆ ಹೇಳಿದೆ. ಅವರಿಗೆ ಇಷ್ಟವಾಯ್ತು. ಅವರು ಚಿತ್ರ ನಿರ್ಮಿಸುವುದಕ್ಕೆ ಮುಂದೆ ಬಂದರು’ ಎಂದರು.

ಹೇಮಂತ್ ರಾವ್ ಮಾತನಾಡಿ, ‘ಜನಾರ್ಧನ್ ಚಿಕ್ಕಣ್ಣ ಒಳ್ಳೆಯ ನಿರ್ದೇಶಕರು. ರಘು ಸರ್ ಸೇರಿದಂತೆ ಇಡಿ ತಂಡ ಚಿತ್ರದಲ್ಲಿ ಸಾಕಷ್ಟು ಕೆಲಸ ಮಾಡಿದೆ. ಸಿನಿಮಾ ಚೆನ್ನಾಗಿ ಬಂದಿದೆ. ಜನರನ್ನು ನಂಬಿ ಈ ರೀತಿ ಸಿನಿಮಾ ಮಾಡಿದ್ದೇವೆ’ ಎಂದರು.

2 ನಿಮಿಷ 6 ಸೆಕೆಂಡ್ ಇರುವ ‘ಅಜ್ಞಾತವಾಸಿ’ ಟ್ರೇಲರ್‍ ಸಾಕಷ್ಟು ಕುತೂಹಲ ಮೂಡಿಸಿದ್ದು, ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಅದ್ವೈತ ಗುರುಮೂರ್ತಿ ಛಾಯಾಗ್ರಹಣವಿದೆ.



Under the production of Hemanth Rao and directed by Janardhan Chikkanna, the film Ajnaatavasi began two years ago. Featuring Rangayana Raghu in a prominent role, the film is now ready for release. It has hit theatres across the state on April 11.

Before that, the film’s trailer was released, generating anticipation. Set in the Malnad region during the 1990s, the story revolves around a series of mysterious murders. The cast includes Rangayana Raghu, Sharath Lohitashwa, Pavana Gowda, Siddu Moolimani, Ravishankar Gowda, and others.

Agnyathavasi-is an Drama Thriller movie directed by Janardhan Chikkanna. The movie casts Ragayana Raghu in the lead role along with Siddu Moolimani, Pavana Gowdaand many others are seen in supporting roles. The music was composed by Charan Raj while cinematography is done by Advaith.The film is produced by Hemanth Rao.

One thought on “Agnyathavasi; ಈ ‘ಅಜ್ಞಾತವಾಸಿ’ ಯಾರು? ಏ. 11ಕ್ಕೆ ಸಿಗಲಿದೆ ಉತ್ತರ

Leave a Reply

Your email address will not be published. Required fields are marked *

Megha Shetty; ಒಲವಿನ ಬಣ್ಣದ ಸೀರೆಯಲ್ಲಿ ಜೊತೆ ಜೊತೆಯಲು ಮೇಘಾ ಶೆಟ್ಟಿ Rachana Inder; ರಚನಾ ಇಂದರ್‌ ಅವರ ಬಳಿ ಇರುವ ಚಿತ್ರಗಳಿವು..