Guerrilla war: ಅರ್ಧ ಸೆಂಚ್ಯುರಿಯತ್ತ ಓಂಪ್ರಕಾಶ್‍ ರಾವ್‍; ಹೊಸ ಚಿತ್ರಕ್ಕೆ ಲೋಕಿ ನಾಯಕ

ಕನ್ನಡ ಚಿತ್ರರಂಗದಲ್ಲಿ ಅರ್ಧ ಸೆಂಚ್ಯುರಿ ಬಾರಿಸಿದ ನಿರ್ದೇಶಕರ ಸಂಖ್ಯೆ ಕಡಿಮೆಯೇ. ಸಾಯಿಪ್ರಕಾಶ್‍ (Om Saiprakash), ಎಸ್‍. ನಾರಾಯಣ್‍ (S. Narayan) ಸೇರಿದಂತೆ ಕೆಲವು ನಿರ್ದೇಶಕರನ್ನು ಹೊರತುಪಡಿಸಿದರೆ, 50 ಚಿತ್ರಗಳನ್ನು ನಿರ್ದೇಶಿಸಿದ ನಿರ್ದೇಶಕರು ಇಲ್ಲ. ಈಗ ಆ ಸಾಲಿಗೆ ಓಂಪ್ರಕಾಶ್‍ ರಾವ್ (N. Om Prakash Rao) ಸಹ ಸೇರಿದ್ದಾರೆ.

ಈ ಹಿಂದೆ ‘ಲಾಕಪ್‍ ಡೆತ್‍’, ‘AK 47’, ‘ಕಲಾಸಿಪಾಳ್ಯ’, ‘ಹುಚ್ಚ’ ಸೇರಿದಂತೆ ಕೆಲವು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ಹಿರಿಯ ನಿರ್ದೇಶಕ ಓಂಪ್ರಕಾಶ್ ರಾವ್, ಇದೀಗ ತಮ್ಮ 50ನೇ ಚಿತ್ರ ನಿರ್ದೇಶಿಸುವುದಕ್ಕೆ ಸಜ್ಜಾಗಿದೆ.

ಈ ಹಿಂದೆ ‘ಮಂಡ್ಯ ಸ್ಟಾರ್‌’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿ, ‘ಮಂಡ್ಯ ಸ್ಟಾರ್‌’ ಎಂದೇ ಜನಪ್ರಿಯರಾಗಿರುವ ಲೋಕೇಶ್‍ ಅಲಿಯಾಸ್‍ ಲೋಕಿ, ಓಂಪ್ರಕಾಶ್‍ ರಾವ್‍ ಅವರ 50ನೇ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಯುಗಾದಿ ಹಬ್ಬದ ದಿನದಂದು ಈ ಚಿತ್ರದ ಪೋಸ್ಟರ್ ಅಧಿಕೃತವಾಗಿ ಬಿಡುಗಡೆ ಆಗಿದೆ. ಚಿತ್ರಕ್ಕೆ ‘ಗೆರಿಲ್ಲಾ ವಾರ್‌’ (Guerilla War) ಎಂದು ಹೆಸರಿಡಲಾಗಿದೆ.

ಈ ಚಿತ್ರವನ್ನು ಗಂಗಮ್ಮ ಎಂಟರ್ಪ್ರೈಸಸ್ ಲಾಂಛನದಲ್ಲಿ ರಮೇಶ್ ಅಬ್ಬನಕುಪ್ಪೆ (ಬಿಡದಿ) ಹಾಗೂ ಸ್ನೇಹಿತರು ನಿರ್ಮಿಸುತ್ತಿರುವ ಈ ಚಿತ್ರವನ್ನು ಸಿ.ಮಾದೇಶ್(AVVA) ಅವರು ಅರ್ಪಿಸುತ್ತಿದ್ದಾರೆ. ಓಂಪ್ರಕಾಶ್ ರಾವ್ ಅವರೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ದೀಪು.ಪಿ.ಆರ್ ಸಂಭಾಷಣೆ ಬರೆಯುತ್ತಿದ್ದಾರೆ. ರವಿಕುಮಾರ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರವಿವರ್ಮ ಸಾಹಸ ನಿರ್ದೇಶನ ಹಾಗೂ ಲಕ್ಷ್ಮಣ್ ರೆಡ್ಡಿ ಅವರ ಸಂಕಲನವಿದೆ.

ಇದು ಐತಿಹಾಸಿಕ ಚಿತ್ರವಲ್ಲ ಎನ್ನುವ ಓಂಪ್ರಕಾಶ್ ರಾವ್, ʻಗೆರಿಲ್ಲಾ WAR’ ಒಂದು ರೀತಿಯ ಯುದ್ಧವಾಗಿದ್ದು, ಅಲ್ಲಿ ಒಂದು ಸಣ್ಣ ಗುಂಪು ದೊಡ್ಡ ಸಂಖ್ಯೆಯ ಶತ್ರುಗಳೊಂದಿಗೆ ವ್ಯವಹರಿಸುವಾಗ ಅಸಾಂಪ್ರದಾಯಿಕ ತಂತ್ರಗಳನ್ನು ಬಳಸುತ್ತದೆ. ಈ ವಿಷಯವನ್ನಿಟ್ಟುಕೊಂಡು ಈಗಿನ ಸಮಾಜದಲ್ಲಿ ಹೆಣ್ಣುಮಕ್ಕಳು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಓಂಪ್ರಕಾಶ್ ರಾವ್‍ ಹೇಳಿದ್ದಾರೆ. ಈ ಚಿತ್ರದ ಚಿತ್ರೀಕರಣ ಜೂನ್‍ ತಿಂಗಳಿನಿಂದ ಪ್ರಾರಂಭವಾಗಲಿದೆಯಂತೆ.

‘ಗೆರಿಲ್ಲಾ ವಾರ್‌’ ಚಿತ್ರದಲ್ಲಿ ಲೋಕಿ ಜೊತೆಗೆ ಅಚ್ಯುತ್ ಕುಮಾರ್, ರಂಗಾಯಣ ರಘು, ಸ್ವಸ್ತಿಕ್ ಶಂಕರ್, ಸುಧಾ ಬೆಳವಾಡಿ, ಚಿತ್ರಾ ಶೆಣೈ, ಪೂಜಾ ಗೌಡ ಮುಂತಾದವರು ನಟಿಸುತ್ತಿದ್ದು, ನಾಯಕಿ ಮತ್ತು ಇತರೆ ತಂತ್ರಜ್ಞರ ಆಯ್ಕೆ ಇನ್ನಷ್ಟೇ ಆಗಬೇಕಿದೆ.



(The number of directors who have directed 50 films in the Kannada film industry is quite low. Except for a few directors like Saiprakash and S. Narayan, there aren’t many who have reached this milestone. Now, Om Prakash Rao has joined this list. Senior director Om Prakash Rao, who has previously directed popular films like Lockup Death, AK 47, Kalasipalya, and Huchcha, is now set to direct his 50th film.)

2 thoughts on “Guerrilla war: ಅರ್ಧ ಸೆಂಚ್ಯುರಿಯತ್ತ ಓಂಪ್ರಕಾಶ್‍ ರಾವ್‍; ಹೊಸ ಚಿತ್ರಕ್ಕೆ ಲೋಕಿ ನಾಯಕ

Leave a Reply

Your email address will not be published. Required fields are marked *