KD Hook step Challenge; ಹುಕ್‍ ಸ್ಟೆಪ್‍ ಮಾಡಿ ಕಳಿಸಿ, ಇಷ್ಟವಾದರೆ ‘ಕೆಡಿ’ ಕುಣಿಯುತ್ತಾನೆ

‘ಕೆಡಿ – ದಿ ಡೆವಿಲ್‍’ ಚಿತ್ರದ ‘ಶಿವ ಶಿವ’ ಹಾಡು ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾಗಿತ್ತು. ಈಗ ಇನ್ನೊಂದು ಹಾಡು ಬಿಡುಗಡೆಯಾಗಿದೆ. ಸಾಮಾನ್ಯವಾಗಿ ಒಂದು ಹಾಡು ಬಿಡುಗಡೆ ಆದಾಗ, ಅದರ ಚಿತ್ರೀಕರಣ ಸಹ ಮುಗಿದಿರುತ್ತದೆ. ಆದರೆ, ‘ಸೆಟ್‍ ಆಗೋಲ್ಲ …’ ಹಾಡಿನ ಚಿತ್ರೀಕರಣ ಇನ್ನೂ ಆಗಿಲ್ಲ. ಅಷ್ಟೇ ಅಲ್ಲ, ಈ ಹಾಡಿಗೆ ಹುಕ್‍ ಸ್ಟೆಪ್‍ ಮಾಡಿ ಕಳಿಸಿ ಎಂದು ನಿರ್ದೇಶಕ ಪ್ರೇಮ್‍, ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ. (KD Hook step Challenge)

‘ಸೆಟ್‍ ಆಗೋಲ್ಲ ಕಣೆ ನಂಗೂ ನಿಂಗೂ …’ ಹಾಡನ್ನು ಮಿಕಾ ಸಿಂಗ್ ‍ಹಾಡಿದ್ದು, ಅರ್ಜುನ್‍ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಆನಂದ್‍ ಆಡಿಯೋದಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಪ್ರೇಮ್‍ ಸಾಹಿತ್ಯ ಬರೆದಿದ್ದಾರೆ.

ಈ ಕುರಿತು ಮಾತನಾಡಿರುವ ಪ್ರೇಮ್‍, ‘ಈ ಹಾಡಿನ ಹೊರತಾಗಿ ಬೇರೆ ಚಿತ್ರೀಕರಣ ಮುಗಿದಿದೆ. ಈ ಹಾಡನ್ನು ಏಪ್ರಿಲ್‍ ತಿಂಗಳಲ್ಲಿ Amsterdamನಲ್ಲಿ ಚಿತ್ರೀಕರಣ ಮಾಡುವ ಯೋಚನೆ ಇದೆ. ಈ ಹಾಡಿಗೆ ಯಾರು ಬೇಕಾದರೂ ಹುಕ್‍ ಸ್ಟೆಪ್‍ ಮಾಡಿ ಕಳಿಸಬಹುದು. ಏಪ್ರಿಲ್‍ 20ರೊಳಗೆ ಕೆವಿಎನ್‍ ಅಥವಾ ಆನಂದ್‍ ಆಡಿಯೋದವರಿಗೆ ರೀಲ್‍ ಮಾಡಿ ಕಳಿಸಿದರೆ, ಚೆನ್ನಾಗಿದ್ದುದನ್ನು ಬಳಸಿಕೊಳ್ಳುತ್ತೇವೆ’ ಎಂದು ಹೇಳಿದರು.

ಮೊದಲ ಹಾಡಿನಂತೆ ಈ ಹಾಡು ಸಹ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲಿದೆ ಎಂಬ ನಂಬಿಕೆ ಇದೆ ಎಂದ ಧ್ರುವ ಸರ್ಜಾ, ‘ಈ ಚಿತ್ರದ ಮೊದಲ ಹಾಡು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಯ್ತು. ಆರು ಲಕ್ಷಕ್ಕೂ ಹೆಚ್ಚು ರೀಲ್ಸ್ ಆಗಿವೆ. ಈಗ ಎರಡನೆಯ ಹಾಡು ಬಿಡುಗಡೆಯಾಗಿದೆ. ಈ ಚಿತ್ರದ ನಿಜವಾದ ಹೀರೋ ಪ್ರೇಮ್‍. ಚಿತ್ರವನ್ನು ಹೇಗೆ ಪ್ರೆಸೆಂಟ್‍ ಮಾಡಬೇಕು ಎಂದು ಯಾವಾಗಲೂ ತಲೆ ಕೆಡಿಸಿಕೊಂಡಿರುತ್ತಾರೆ. ರೀಷ್ಮಾ ಅವರು ಅದ್ಭುತವಾಗಿ ನೃತ್ಯ ಮಾಡುತ್ತಾರೆ. ಅವರಿಗೆ ಮ್ಯಾಚ್‍ ಮಾಡುವುದು ಬಹಳ ಕಷ್ಟ. ಅರ್ಜುನ್‍ ಜನ್ಯ ಸಹ ಈ ಚಿತ್ರಕ್ಕೆ ಇನ್ನೊಬ್ಬ ಹೀರೋ. ಈ ಹಾಡು ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ.

‘ಕೆಡಿ – ದಿ ಡೆವಿಲ್‍’ ಚಿತ್ರಕ್ಕೆ ಪ್ರೇಮ್‍ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಕೆ.ವಿ.ಎನ್‍. ಪ್ರೊಡಕ್ಷನ್ಸ್ ಬ್ಯಾನರ್‍ನಡಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್‍, ರಮೇಶ್‍ ಅರವಿಂದ್‍, ಸಂಜಯ್‍ ದತ್‍, ಶಿಲ್ಪಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಅರ್ಜುನ್‍ ಜನ್ಯ ಸಂಗೀತ ಮತ್ತು ವಿಲಿಯಂ ಡೇವಿಡ್‍ ಛಾಯಾಗ್ರಹಣ ಚಿತ್ರಕ್ಕಿದೆ.


(The “KD Hook Step Challenge” refers to a dance challenge, likely originating from the Kidzee India initiative, where participants create reels showcasing the Kidzee Hook Step, tag friends, and use the hashtag #KidzeeHookStepChallenge for a chance to win prizes. )

2 thoughts on “KD Hook step Challenge; ಹುಕ್‍ ಸ್ಟೆಪ್‍ ಮಾಡಿ ಕಳಿಸಿ, ಇಷ್ಟವಾದರೆ ‘ಕೆಡಿ’ ಕುಣಿಯುತ್ತಾನೆ

Leave a Reply

Your email address will not be published. Required fields are marked *