Vaamana; ಜನ ಕನ್ನಡ ಚಿತ್ರಗಳನ್ನು ನೋಡದಿದ್ದರೆ ತೋಟ ಮಾಡಿಕೊಂಡಿರುತ್ತೇವೆ : ದರ್ಶನ್

ಧನ್ವೀರ್ ಅಭಿನಯದ ‘ವಾಮನ’ (Vaamana) ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಈ ಟ್ರೇಲರ್ ಅನ್ನು ದರ್ಶನ್ (Darshan Thoogudeepa) ಬಿಡುಗಡೆ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ದರ್ಶನ್ ಟ್ರೇಲರ್ ಬಿಡುಗಡೆ ಮಾಡಿದರಾದರೂ, ಅಂದುಕೊಂಡಂತೆ ಆಗಲಿಲ್ಲ. ಮೊದಲು ಪ್ರಸನ್ನ ಚಿತ್ರಮಂದಿರಕ್ಕೆ ದರ್ಶನ್ ಬಂದು ಬಿಡುಗಡೆ ಮಾಡುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ‘ದಿ ಡೆವಿಲ್’ ಚಿತ್ರದ ಚಿತ್ರೀಕರಣದಲ್ಲಿ ದರ್ಶನ್, ರಾಜಸ್ತಾನದಲ್ಲಿ ಬೀಡುಬಿಟ್ಟಿದ್ದರಿಂದ ವೀಡಿಯೋ ಮೂಲಕ ಟ್ರೇಲರ್ ಬಿಡುಗಡೆ ಮಾಡುವುದರ ಜೊತೆಗೆ ಚಿತ್ರತಂಡವನ್ನು ಹಾರೈಸಿದ್ದಾರೆ.
ವೀಡಿಯೋದಲ್ಲಿ ಮಾತನಾಡಿರುವ ಮಾತನಾಡಿರುವ ದರ್ಶನ್, ‘ಇದು ಧನ್ವೀರ್ ಅಭಿನಯದ ನಾಲ್ಕನೇ ಚಿತ್ರ. ನಾಲ್ಕೂ ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಯಾವುದೇ ಚಿತ್ರದಲ್ಲೂ ಕಥೆ ರಿಪೀಟ್ ಇಲ್ಲ. ಇದೊಂದು ತಾಯಿ ಸೆಂಟಿಮೆಂಟ್ ಸಿನಿಮಾ. ತಾಯಿಗಾಗಿ, ಪ್ರೀತಿಗಾಗಿ ಒಬ್ಬ ಮನುಷ್ಯ ಹೇಗೆ ಬದಲಾಗುತ್ತಾನೆ, ಹೇಗೆಲ್ಲಾ ಬದಲಾಗುತ್ತಾನೆ ಎನ್ನುವುದು ಚಿತ್ರದ ಕಥೆ. ಈ ಚಿತ್ರದ ‘ಮುದ್ದು ರಾಕ್ಷಸಿ’ ನನಗೆ ಬಹಳ ಇಷ್ಟವಾದ ಹಾಡು. ಇದೊಂದು ಮನರಂಜನಾತ್ಮಕ ಚಿತ್ರ. ಚಿತ್ರ ನೋಡಿ ಹರಸಿ, ಪ್ರೋತ್ಸಾಹಿಸಿ’ ಎಂದಿದ್ದಾರೆ.
ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸಿ ಎಂದು ಮನವಿ ಮಾಡಿದ್ದಾರೆ. ‘ಬಹಳಷ್ಟು ಜನ ಬೇರೆಬೇರೆ ಭಾಷೆಗಳಲ್ಲಿ ನಟಿಸುತ್ತಿದ್ದಾರೆ. ಕೆಲವರು ಮಾತ್ರ ನಾವು ಇಲ್ಲಿಗೆ ಸೀಮಿತ ಅಂತ ಕನ್ನಡದಲ್ಲಿ ಚಿತ್ರಗಳನ್ನು ಮಾಡುತ್ತಿದ್ದೇವೆ. ಕನ್ನಡ ಚಿತ್ರಗಳನ್ನು ನೋಡದಿದ್ದರೆ, ನಾವು ಎಲ್ಲೂ ಹೋಗುವುದಿಲ್ಲ. ಜನರ ಆಶೀರ್ವಾದದಿಂದ ಇಲ್ಲೇ ತೋಟ ಮಾಡಿಕೊಂಡು ಇರುತ್ತೇವೆ. ಅಚ್ಚುಕಟ್ಟಾಗಿ ಹಸು ಸಾಕಿಕೊಂಡು ಇರುತ್ತೇವೆ. ಆದರೆ, ಯಾವತ್ತಿದ್ದರೂ ನಾವು ಕನ್ನಡಕ್ಕೇ ಸಿನಿಮಾ ಮಾಡೋದು. ಏಕೆಂದರೆ, ಇದು ಬಿಟ್ಟರೆ ನಮಗೆ ಬೇರೇನೂ ಗೊತ್ತಿಲ್ಲ. ನಾವು ಕನ್ನಡ ಚಿತ್ರರಂಗವ ಮತ್ತು ಪ್ರೇಕ್ಷಕರನ್ನು ನಂಬಿಬಂದಿದ್ದೇವೆ. ಚಿತ್ರಮಂದಿರಗಳು ಸಹ ಕನ್ನಡ ಚಿತ್ರಗಳನ್ನೇ ನಂಬಿಕೊಂಡಿವೆ. ಹಾಗಾಗಿ, ಕನ್ನಡ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸಿ’ ಎಂದಿದ್ದಾರೆ.
‘ವಾಮನ’ ಚಿತ್ರಕ್ಕೆ ಶಂಕರ್ ರಾಮನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಧನ್ವೀರ್ ಮತ್ತು ರೀಷ್ಮಾ ಜೊತೆಗೆ ತಾರಾ, ಸಂಪತ್, ಅವಿನಾಶ್, ಅಚ್ಯುತ್ ಕುಮಾರ್, ಕಾಕ್ರೊಚ್ ಸುಧಿ ಮುಂತಾದವರು ಅಭಿನಯಿಸಿದ್ದಾರೆ. ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಅವರ ಸಂಗೀತವಿರುವ ಈ ಚಿತ್ರವನ್ನು ಚೇತನ್ ಗೌಡ ನಿರ್ಮಾಣ ಮಾಡಿದ್ದಾರೆ.
(Kannada actor Darshan Thoogudeepa recently released the teaser for the upcoming film “Vaamana,” starring Dhanveer Gowda and Reeshma Nanaiah. Directed by Shankar Raman S and produced by Chethan Gowda, “Vaamana” promises a gripping story, intense action sequences, and a powerful musical score by B. Ajaneesh Loknath.)
2 thoughts on “Vaamana; ಜನ ಕನ್ನಡ ಚಿತ್ರಗಳನ್ನು ನೋಡದಿದ್ದರೆ ತೋಟ ಮಾಡಿಕೊಂಡಿರುತ್ತೇವೆ : ದರ್ಶನ್”