Veera Chandrahasa; ಏಪ್ರಿಲ್‌ 18ಕ್ಕೆ ವೈಭವದ ತೆರೆ ಕಾಣದಲಿದೆ ರವಿ ಬಸ್ರೂರು ನಿರ್ದೇಶನ ವೀರ ಚಂದ್ರಹಾಸ

ʼಕೆಜಿಎಫ್‌ʼ, ʼಸಲಾರ್‌ʼ.. ರೀತಿಯ ಬಿಗ್‌ ಬಜೆಟ್‌ ಸಿನಿಮಾಗಳಿಗೆ ತನ್ನ ಮ್ಯೂಸಿಕ್‌ ಕಂಪೋಸ್‌ನಿಂದ ಜನಮನ ಗೆದ್ದ ರವಿ ಬಸ್ರೂರು, ಸಂಗೀತ ಲೋಕದಲ್ಲಿನ ಪ್ರಯೋಗದಿಂದ ಎಷ್ಟು ಜನಪ್ರಿಯರೋ ಸಿನಿಮಾ ನಿರ್ದೇಶನದಲ್ಲಿನ ಹೊಸ ಪ್ರಯೋಗದಿಂದಲೂ ಅಷ್ಟೇ ಜನಪ್ರಿಯರು. ಮಕ್ಕಳ ಕೈಯಿಂದಲೇ ದೊಡ್ಡವರ ಹಾಗೆ ಅಭಿನಯ ಮಾಡಿಸಿ ಅದನ್ನು ಯಶ್‌ ಹಾಗೂ ರಾಧಿಕಾ ಅವರಿಂದ ಧ್ವನಿ ಕೊಟ್ಟು ʼಗಿರ್ಮಿಟ್ʼ ಎನ್ನುವ ಸಿನಿಮಾ ಇದಕ್ಕೆ ಉದಾಹರಣೆ.

ಇನ್ನೊಂದು ಭಿನ್ನ ಪ್ರಯತ್ನಕ್ಕೆ ರವಿ ಬಸ್ರೂರು (Ravi Basrur) ಕೈ ಹಾಕಿರುವುದು ಎಲ್ಲರಿಗೂ ತಿಳಿದ ವಿಚಾರ. ಇತ್ತೀಚೆಗೆ “ವೀರ ಚಂದ್ರಹಾಸ” (Veera Chandrahasa) ಎಂಬ ಯಕ್ಷಗಾಯವನ್ನೇ ಬೆಳ್ಳಿ ಪರದೆಯ ಮೇಲೆ ತರುವ ವಿಚಾರವನ್ನು ಪ್ರಕಟಿಸಿ, ಟೀಸರ್‌ನ್ನು ಬಿಡುಗಡೆ ಮಾಡಿದ್ದರು. ಈಗ ವೀರ ಚಂದ್ರಹಾಸ ಚಿತ್ರ ಏಪ್ರೀಲ್‌ 18ಕ್ಕೆ ತೆರಕಾಣಲಿದೆ ಎಂಬ ಸುದ್ದಿ ಹೊರ ಬಿದ್ದಿದೆ. ಯುಗಾದಿಯ ಸಂಭ್ರಮದಂದು ಚಿತ್ರದ ಬಿಡುಗಡೆ ದಿನಾಂಕವನ್ನು ರವಿ ಬಸ್ರೂರು ಪ್ರಕಟಿಸಿದ್ದಾರೆ.

ಯಕ್ಷಗಾನವನ್ನು ವಿಶ್ವಮಟ್ಟಕ್ಕೆ ಪರಿಚಯಿಸಬೇಕೆಂಬ ರವಿ ಬಸ್ರೂರು ಅವರ ತಂಡಕ್ಕೆ ರಾಜ್ಯದ ದೊಡ್ಡ ನಿರ್ಮಾಣ, ಹಂಚಿಕೆಯನ್ನು ಮಾಡುವ ಸಂಸ್ಥೆ ಹೊಂಬಾಳೆ ಫಿಲ್ಮ್‌ ಸಹಕಾರ ನೀಡಿದೆ. ರವಿ ಬಸ್ರೂರು ಅವರು ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ಚಿತ್ರಗಳಾದ ಕೆಜಿಎಫ್‌ ಮತ್ತು ಸಲಾರ್‌ಗೆ ಸಂಗೀತ ನಿರ್ದೇಶನ ಮಾಡಿದ್ರು. ಈಗ ವೀರ ಚಂದ್ರಹಾಸ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್‌ ಪ್ರಸ್ತುತಪಡಿಸುತ್ತಿದೆ.

ವೀರ ಚಂದ್ರಹಾಸ ಕುಂತಲ ಸಾಮ್ರಾಜ್ಯದ ಚಂದ್ರಹಾಸನ ಕಥೆ ಕುರಿತು ಹೇಳುತ್ತದೆ. ಇದು ಮಹಾಭಾರತಕ್ಕೂ ಮುಂಚೆಯೇ ಅಸ್ತಿತ್ವದಲ್ಲಿತ್ತು ಎಂದು ನಂಬಲಾಗಿದೆ. ಸಾಂಪ್ರದಾಯಿಕ ಯಕ್ಷಗಾನದೊಂದಿಗೆ ಐತಿಹಾಸಿಕ ಅಂಶಗಳನ್ನು ಸಂಯೋಜಿಸಿ, ಪ್ರಾಚೀನ ಕಲೆಯನ್ನು ಆಧುನಿಕ ಚಿತ್ರ ನಿರ್ಮಾಣ ತಂತ್ರಗಳೊಂದಿಗೆ ವಿಲೀನಗೊಳಿಸಿ ನವೀನವಾಗಿ ಕಥೆ ಹೇಳಲು ಚಿತ್ರ ತಂಡ ಮುಂದಾಗಿದೆ.

ಕ್ಯಾಲೇಂಡರ್‌ ವರ್ಷದ ಮೊದಲ ಹಬ್ಬದಂದು ಅಂದರೆ ಸಂಕ್ರಾಂತಿಗೆ ಶಿವರಾಜ್‌ ಕುಮಾರ್‌ ಈ ಚಿತ್ರದಲ್ಲಿ ನಟಿಸುವ ನಾಡಪ್ರಭು ಶಿವ ಪುಟ್ಟಸ್ವಾಮಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ವಿಚಾರವನ್ನು ಹಂಚಿಕೊಳ್ಳಲಾಗಿತ್ತು. ಶಿವರಾಜಕುಮಾರ್ ಈ ಚಿತ್ರದಲ್ಲಿ ಯಕ್ಷಗಾನದ ಅವತಾರದಲ್ಲಿ ಕಾಣಿಸಿಕೊಂಡು ಇತಿಹಾಸ ನಿರ್ಮಿಸಲು ಸಿದ್ಧರಾಗಿದ್ದಾರೆ. ಕಾಕತಾಳಿಯೌೋ ಎಂಬಂತೆ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಅವರ ನಿಜವಾದ ಹೆಸರು ನಾಗರಾಜು ಶಿವ ಪುಟ್ಟಸ್ವಾಮಿ ಆಗಿದ್ದು, ಚಿತ್ರದ ಪಾತ್ರಕ್ಕೆ ಸಾಮ್ಯತೆಯನ್ನು ಕೊಟ್ಟಿದೆ.

ಚಿತ್ರರಂಗದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸಂಪೂರ್ಣ ಯಕ್ಷಗಾನ ವೈಭವ ಬೆಳ್ಳಿತೆರೆಯ ಮೇಲೆ ತಂದ ಹೆಗ್ಗಳಿಗೆ ಈ ಚಿತ್ರ ತಂಡ ಪಾತ್ರವಾಗಲಿದೆ. ಶಿಥಿಲ್ ಶೆಟ್ಟಿ, ನಾಗಶ್ರೀ ಜಿ.ಎಸ್, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಉದಯ್ ಕಡಬಾಳ್, ರವೀಂದ್ರ ದೇವಾಡಿಗ, -ನಾಗರಾಜ್ ಸರ್ವೇಗಾರ್, ಗುಣಶ್ರೀ ಎಂ ನಾಯಕ್, ಶ್ರೀಧರ್ ಕಾಸರಕೋಡು, ಶ್ವೇತಾ ಅರೆಹೊಳೆ, ಪ್ರಜ್ವಲ್ ಕಿನ್ನಾಳ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.



“Veera Chandrahasa” is a historical drama film directed by Ravi Basrur, set in the mythical Kuntala kingdom, and features Shivaraj kumar in a key role, portraying Nadaprabhu Shiva Puttaswamy in a Yakshagana avatar. 

Here’s a more detailed breakdown:
Release Date: April 18 film to be released. 
Director: Ravi Basrur, known for composing music for films like K.G.F: Chapter 1 and Chapter 2. 
Genre: Historical Drama. 
Setting: Mythical Kuntala kingdom. 
Key Character: Chandrahasa, a character believed to have existed before the Mahabharata. 
Yakshagana: The film incorporates traditional Yakshagana performance, a unique storytelling approach. Shivarajkumar: The film features Shivarajkumar in a key role, portraying Nadaprabhu Shiva Puttaswamy in a Yakshagana avatar. 
Cast: The film features a talented ensemble cast including Shithil Shetty, Nagashree G S, Prasanna Shettigar Mandarti, Uday Kadabaal, Ravindra Devadiga, Nagaraj Servegar, Gunashree M Nayak, Shridhar Kasarkodu, Shwetha Arehole, and Prajwal Kinnal. 
Story: The film explores the legend of Chandrahasa, a character believed to have existed even before the Mahabharata. 
Teaser: The teaser for the film was released on August 18, 2024. 

3 thoughts on “Veera Chandrahasa; ಏಪ್ರಿಲ್‌ 18ಕ್ಕೆ ವೈಭವದ ತೆರೆ ಕಾಣದಲಿದೆ ರವಿ ಬಸ್ರೂರು ನಿರ್ದೇಶನ ವೀರ ಚಂದ್ರಹಾಸ

Leave a Reply

Your email address will not be published. Required fields are marked *