UI OTT Release; ಯುಗಾದಿಗೆ UI ಜೊತೆಗೆ ಮನೆಗೆ ಬರುತ್ತಿದ್ದಾರೆ ಉಪೇಂದ್ರ

World Television Premiere 'UI'

ಹಬ್ಬದ ಸಂದರ್ಭದಲ್ಲಿ ಚಾನಲ್‍ಗಳಲ್ಲಿ ಹೊಸ ಚಿತ್ರಗಳು ಪ್ರಸಾರವಾಗುವುದು ವಾಡಿಕೆ. ಈ ಯುಗಾದ ಹಬ್ಬದ ಪ್ರಯುಕ್ತ ಉಪೇಂದ್ರ (Upendra) ಅಭಿನಯದ ಮತ್ತು ನಿರ್ದೇಶನದ ‘UI’ ಪ್ರಸಾರವಾಗುವುದಕ್ಕೆ ಸಜ್ಜಾಗಿದೆ. (UI OTT Release)

‘UI’ ಚಿತ್ರದ ಟಿವಿ ಮತ್ತು ಓಟಿಟಿ ಹಕ್ಕುಗಳನ್ನು ಜೀ ಕನ್ನಡ ಕೊಂಡಿದ್ದು, ಈ ಚಿತ್ರವನ್ನು ಯುಗಾದ ಹಬ್ಬದ ಪ್ರಯುಕ್ತ ಭಾನುವಾರ ಸಂಜೆ 4.30ಕ್ಕೆ ಪ್ರಸಾರ ಮಾಡಲಿದೆ. ಟಿವಿಯಲ್ಲಿ ಪ್ರಸಾರದ ಜೊತೆಗೆ ಅಂದೇ, ಅದೇ ಸಮಯಕ್ಕೆ ಜಿ5 ಓಟಿಟಿಯಲ್ಲೂ ಪ್ರಸಾರ ಕಾಣಲಿದೆ. ಈ ಮೂಲಕ ಚಿತ್ರ ಟಿವಿ ಮತ್ತು ಓಟಿಟಿಯಲ್ಲಿ ಯಾವಾಗ ಪ್ರಸಾರ ಎಂಬ ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. (World Television Premiere ‘UI’)

‘UI’ ಚಿತ್ರವು ಸುಮಾರು ಮೂರು ತಿಂಗಳ ಹಿಂದೆ, ಅಂದರೆ ಡಿಸೆಂಬರ್‌ 20ರಂದು ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಉಪೇಂದ್ರ ಮತ್ತೊಮ್ಮೆ ಪ್ರೇಕ್ಷಕರ ತಲೆಗೆ ಹುಳಬಿಟ್ಟಿದ್ದಾರೆ ಎಂದು ಒಂದು ವಲಯ ಹೇಳಿದರೆ, ಇನ್ನೊಂದು ವಲಯ ಚಿತ್ರವನ್ನು ಪ್ರಶಂಸಿಸಿತ್ತು.

ಇಲ್ಲಿ ತಲೆಗೆ ಹುಳ ಬಿಡುವಂತದ್ದೇನ್ನೂ ಇಲ್ಲ, ಎಲ್ಲವೂ ನೇರವಾಗಿಯೇ ಇದೆ ಎಂದಿದ್ದ ಉಪೇಂದ್ರ, ‘ಈ ಚಿತ್ರದಿಂದ ಯಾರಿಗೆ ಏನೇನು ಅರ್ಥವಾಯ್ತು ಎಂಬುದು ಅವರವರಿಗೆ ಬಿಟ್ಟಿದ್ದು. ಅವರವರ ಗ್ರಹಿಕೆಯ ಮೇಲೆ ಚಿತ್ರವು ಬೇರೆಬೇರೆ ರೀತಿ ಅರ್ಥವಾಗುತ್ತಾ ಹೋಗುತ್ತದೆ. ಇಂಥ ಚಿತ್ರಗಳಿಗೆ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂಬ ಸರ್ವಾನುಮತದ ಅಭಿಪ್ರಾಯ ಸಿಗುವುದಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಗ್ರಹಿಸುತ್ತಾರೆ’ ಎಂದು ಉಪೇಂದ್ರ ಹೇಳಿಕೊಂಡಿದ್ದರು.

‘UI’ ಚಿತ್ರವನ್ನು ಲಹರಿ ಫಿಲಂಸ್‍ ನಿರ್ಮಾಣ ಮಾಡಿದ್ದು, ಉಪೇಂದ್ರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇನ್ನು, ಚಿತ್ರದಲ್ಲಿ ಉಪೇಂದ್ರ, ರೀಷ್ಮಾ ನಾಣಯ್ಯ, ನಿಧಿ ಸುಬ್ಬಯ್ಯ, ರವಿಶಂಕರ್, ಅಚ್ಯುತ್‍ ಕುಮಾರ್‍, ಸಾಧು ಕೋಕಿಲ ಮುಂತಾದವರು ನಟಿಸಿದ್ದಾರೆ.


​(Upendra’s much-anticipated Kannada film, UI, made its theatrical debut on December 20, 2024, coinciding with the Christmas weekend. The film, directed by Upendra himself, is a dystopian sci-fi action thriller that delves into the psychological conflict between two brothers, Sathya and Kalki, exploring themes of power, knowledge, and technology misuse leading to societal and environmental consequences.​

For those who missed its theatrical run, UI is set to make its digital premiere on Zee5. Reports suggest that the film will be available for streaming starting March 30, 2025, aligning with the Ugadi festival celebrations. However, it’s important to note that while multiple sources indicate this release date, an official confirmation from Zee5 is still awaited)

One thought on “UI OTT Release; ಯುಗಾದಿಗೆ UI ಜೊತೆಗೆ ಮನೆಗೆ ಬರುತ್ತಿದ್ದಾರೆ ಉಪೇಂದ್ರ

Leave a Reply

Your email address will not be published. Required fields are marked *