Kaviraj Margadalli; ‘ಕವಿರಾಜ್‍ ಮಾರ್ಗದಲ್ಲಿ’ ಕವಿರಾಜ್‍; ಏ.5ರಂದು ಪುಸ್ತಕ ಬಿಡುಗಡೆ

ಕನ್ನಡದ ಜನಪ್ರಿಯ ಗೀತರಚನೆಕಾರರಲ್ಲಿ ಕವಿರಾಜ್‍ (Kaviraj) ಸಹ ಒಬ್ಬರು. 2003ರಲ್ಲಿ ಬಿಡುಗಡೆಯಾದ ‘ಕರಿಯ’ ಚಿತ್ರದ ಮೂಲಕ ಗೀತರಚನೆಕರರಾದ ಅವರು, ಈ 22 ವರ್ಷಗಳಲ್ಲಿ 1000ಕ್ಕೂ ಹೆಚ್ಚು ಸಿನಿಮಾಗಳಿಗೆ, 2250ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. ಜೊತೆಗೆ ಎರಡು ಚಿತ್ರಗಳನ್ನು ಸಹ ನಿರ್ದೇಶನ ಮಾಡಿದ್ದಾರೆ.

ಇದೀಗ ಕವಿರಾಜ್‍ ಸದ್ದಿಲ್ಲದೆ ಒಂದು ಪುಸ್ತಕ ಬರೆದು ಮುಗಿಸಿದ್ದಾರೆ. ಈ ಪುಸ್ತಕಕ್ಕೆ ‘ಕವಿರಾಜ್‍ ಮಾರ್ಗದಲ್ಲಿ’ (Kaviraj Margadalli) ಎಂಬ ಹೆಸರನ್ನು ಇಟ್ಟಿದ್ದು, ಈ ಪುಸ್ತಕವು ಏಪ್ರಿಲ್‌ 05ರಂದು ಸಂಜೆ ಕನ್ನಡ ಚಲನಚಿತ್ರ ಕಲಾವಿದರ ಸಂಘದಲ್ಲಿ ಬಿಡುಗಡೆಯಾಗಲಿದೆ. ಹರಿವು ಪುಸ್ತಕ ಹೊರತಂದಿರುವ ಈ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕವಿರಾಜ್‍ ಬರೆದಿರುವ ಹಲವು ಜನಪ್ರಿಯ ಹಾಡುಗಳನ್ನು, ಜನಪ್ರಿಯ ಗಾಯಕ-ಗಾಯಕಿಯರು ಹಾಡಲಿದ್ದಾರೆ.

ಈ ಕುರಿತು ಮಾತನಾಡಿರುವ ಕವಿರಾಜ್‍, ‘ನಿನ್ನೆ ಮೊನ್ನೆಯಷ್ಟೇ ಮೊದಲ ಹಾಡು ಬರೆದಂತಿದೆ. ಆದರೆ, ಇದೀಗ ಬೆಳ್ಳಿಹಬ್ಬದ ಹೊಸ್ತಲಲ್ಲಿ ನಿಂತಿದ್ದೇನೆ. ಸುಮಾರು 25 ವರ್ಷಗಳ ಸುಂದರ ಪಯಣ ನನ್ನದು. ಈ ಸಂಭ್ರಮದ ಕುರುಹಾಗಿ 28 ರಸಮಯ ಘಟನನೆಗಳ ಗುಚ್ಛವನ್ನು ಪುಸ್ತಕ ರೂಪದಲ್ಲಿ ಕೈಗಿಡುತ್ತಿದ್ದೇನೆ’ ಎಂದಿದ್ದಾರೆ.

ಈ ಪುಸ್ತಕದಲ್ಲಿ ‘ಗೋಲ್ಡನ್‍ ಸ್ಟಾರ್‌’ ಮಾಡಿದ ಕಿಡ್ನಾಪ್‍, ಎನ್‍ಕೌಂಟರ್‌ ವಿತ್‍ ಮುತ್ತಪ್ಪ ರೈ, ಹುಲಿ ಬಂತು ಹುಲಿ, ಬಂಗಾರದ ಮನುಷ್ಯ ಅಪ್ಪು ಮುಂತಾದ ಹಲವು ಅಧ್ಯಾಯಗಳಿವೆ.


(Kaviraj, the renowned Indian lyricist, writer, and film director known for his contributions to Kannada cinema, is set to release his book Kaviraj Margadalli on April 5th. Since his debut in 2003 with the film Kariya, he has penned lyrics for over 2,000 songs across more than 1,000 movies. His accolades include multiple Filmfare Awards South and Mirchi Music Awards, recognizing his significant impact on the industry.)

2 thoughts on “Kaviraj Margadalli; ‘ಕವಿರಾಜ್‍ ಮಾರ್ಗದಲ್ಲಿ’ ಕವಿರಾಜ್‍; ಏ.5ರಂದು ಪುಸ್ತಕ ಬಿಡುಗಡೆ

Leave a Reply

Your email address will not be published. Required fields are marked *