Marali Manasagide; ಮರಳಿ ಮನಸಾಗಿದೆ ಚಿತ್ರದ ಸುಳಿಮಿಂಚು ಕಣ್ಣ ಒಳಗೆ ಗೀತೆ ಬಿಡುಗಡೆ

ಬೆನಕ ಟಾಕೀಸ್ (Benaka Talkies) ಲಾಂಛನದಲ್ಲಿ ಮುದೇಗೌಡ್ರು ನವೀನ್ ಕುಮಾರ್ ಆರ್ ಓ (Naveen Kumar R O) ಹಾಗೂ ತೆಲಿಗಿ ಮಲ್ಲಿಕಾರ್ಜುನಪ್ಪ (Telagi Mallikarjunappa) ನಿರ್ಮಿಸಿರುವ “ಮರಳಿ ಮನಸಾಗಿದೆ” (Marali Manasagide) ಚಿತ್ರದ “ಸುಳಿಮಿಂಚು ಕಣ್ಣ ಒಳಗೆ” ಗೀತೆ ಬಿಡುಗಡೆ ಆಗಿದೆ. ಈ ಚಿತ್ರವನ್ನು ನಾಗರಾಜ್ ಶಂಕರ್ (Nagaraj Shankar) ನಿರ್ದೇಶಿಸುತ್ತಿದ್ದಾರೆ. ಅರ್ಜುನ್ ವೇದಾಂತ್ (Arjun Vedanth) ನಾಯಕನಾಗಿ ನಟಿಸುತ್ತಿದ್ದಾರೆ.
ಮರಳಿ ಮನಸಾಗಿದೆ ಚಿತ್ರದ ಎರಡನೇ ಸಿನಿಮಾ “ಸುಳಿಮಿಂಚು ಕಣ್ಣ ಒಳಗೆ” ಹಾಡನ್ನು ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿಗಳು ಸುಲಫಲ ಮಠ ಅವರು ಕಲ್ಬುರ್ಗಿ ನಗರದ ಸಂಗಮ ಥಿಯೇಟರ್ (Sangam Theater)ನಲ್ಲಿ ಅನಾವರಣ ಮಾಡಿದರು. ಹರೀಶ್ ಎಸ್. ಎಂ ಅವರು ಬರೆದಿರುವ ಈ ಹಾಡನ್ನು ಶಶಾಂಕ್ ಶೇಷಾಗಿರಿ ಹಾಗೂ ಈಶ ಸುಚಿ ಹಾಡಿದ್ದಾರೆ. ಇನ್ನು ಇದೊಂದು ಯುವಜನತೆಗೆ ಹತ್ತಿರವಾದ ಚಿತ್ರದ ಜೊತೆಗೆ ಸಂಬಂಧಗಳ ಮೌಲ್ಯಗಳನ್ನು ತಿಳಿಸುವ ಚಿತ್ರವೂ ಹೌದು ಎಂದು ನಿರ್ದೇಶಕ ನಾಗರಾಜ್ ಶಂಕರ್ (Nagaraj Shankar) ತಿಳಿಸಿದರು.

ನಿರ್ಮಾಪಕರಾದ ಮುದೇಗೌಡ ನವೀನ್ ಕುಮಾರ್ ಆರ್. ಓ ಮಾತನಾಡಿ, ನಾನು ಮೂಲತಃ ಮಧ್ಯಕರ್ನಾಟಕದವನು ಹಾಗೂ ಈ ಚಿತ್ರದ ಚಿತ್ರೀಕರಣ ದಾವಣಗೆಯಿಂದ ಆರಂಭವಾಗಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಚಿತ್ರೀಕರಣ ನಡೆದಿದೆ. ಈ ಸಂದರ್ಭದಲ್ಲಿ ಸಹಕಾರ ನೀಡಿದ ಕಲ್ಬುರ್ಗಿ ಜನತೆಗೆ ಶುಭ ಕೋರಿದರು. ಮುಂದೆ ಏಪ್ರಿಲ್ 12 ರಂದು ಉಡುಪಿಯಲ್ಲಿ ಮೂರನೇ ಹಾಡಿನ ಅನಾವರಣವಾಗಲಿದೆ ಎಂದು ತಿಳಿಸಿದರು.
ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ನಿರೀಕ್ಷಾ ಶೆಟ್ಟಿ (Niriksha Shetty) ಹಾಗೂ ಸ್ಮೃತಿ ವೆಂಕಟೇಶ್ (Smruthi Venkatesh). ತಂಡದ ವಿಜಯ್ ಕುಮಾರ್ (Vijay Kumar), ಆಶಿತ್ ಸುಬ್ರಮಣ್ಯ (Ashith Subramanya), ಸಂಜಯ್ ಉಮ್ರಾನಿ (Sanjay Umrani) ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.