Vaamana Trailer; ‘ವಾಮನʼನ ಜೊತೆಯಾದ ದರ್ಶನ್, ಇಂದು ಟ್ರೇಲರ್ ಬಿಡುಗಡೆ

- ಏಪ್ರಿಲ್ 10ಕ್ಕೆ ರಾಜ್ಯಾದ್ಯಂತ ʻವಾಮನʼ ತೆರೆಗೆ
- ದರ್ಶನ್ನಿಂದ ವಾಮನ ಟ್ರೇಲರ್ ಬಿಡುಗಡೆ
- ತಾಯಿ ಸೆಂಟಿಮೆಂಟ್ ಸಾಂಗ್ ರಿಲೀಸ್ ಮಾಡಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮೀ
ದರ್ಶನ್ (Challenging Star Darshan) ಅವರ ಆಪ್ತಬಳಗದಲ್ಲಿ ಗುರುತಿಸಿಕೊಂಡವರು ನಟ ಧನ್ವೀರ್ (Dhanveer). ದರ್ಶನ್ ಜೈಲಿನಿಂದ ಬಿಡುಗಡೆಯಾದ ನಂತರ ಅವರು ಚಿಕಿತ್ಸೆಗೆಂದು ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ, ಅವರ ಜೊತೆಗೆ ಓಡಾಡಿಕೊಂಡಿದ್ದವರು ಧನ್ವೀರ್. ಕೆಲವು ದಿನಗಳ ಹಿಂದೆ ದರ್ಶನ್ ತಮ್ಮ ಅಭಿಮಾನಿಗಳಿಗೆ ವೀಡಿಯೋ ಸಂದೇಶ ಕಳುಹಿಸಿದ ಸಂದರ್ಭದಲ್ಲಿ ಧನ್ವೀರ್ ಅವರಿಗೆ ವಿಶೇಷ ಕೃತಜ್ಞತೆಗಳನ್ನೂ ಸಲ್ಲಿಸಿದ್ದರು. ಈಗ ಧನ್ವೀರ್ ಅಭಿನಯದ ʻವಾಮನʼ (Vaamana) ಚಿತ್ರವು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ ದರ್ಶನ್.

ಇತ್ತೀಚೆಗೆ ʻವಾಮನʼ ಚಿತ್ರದ ತಾಯಿ ಸೆಂಟಿಮೆಂಟ್ ಹಾಡು ಬಿಡುಗಡೆಯನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ (Vijaya Lakshmi Darshan) ಮಾಡಿಕೊಟ್ಟು, ಧನ್ವೀರ್ಗೆ ಶುಭಾಶಯಗಳನ್ನು ತಿಳಿಸಿದ್ದರು. ಇದೀಗ ʻವಾಮನʼ ಚಿತ್ರದ ಟ್ರೇಲರ್ ಬಿಡುಗಡೆ ಇಂದು ಸಂಜೆ ಪ್ರಸನ್ನ ಚಿತ್ರಮಂದಿರದಲ್ಲಿ ಸಂಜೆ ಆಯೋಜಿತವಾಗಿದೆ. ಈ ಸಮಾರಂಭಕ್ಕೆ ದರ್ಶನ್ ಮುಖ್ಯ ಅತಿಥಿಯಾಗಿ ಬಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಡಲಿದ್ದಾರೆ. ಅವರನ್ನು ಬರಮಾಡಿಕೊಳ್ಳುವುದಕ್ಕೆ ಚಿತ್ರತಂಡ ಸಿದ್ಧತೆ ನಡೆಸಿದ್ದು, ಪ್ರಸನ್ನ ಚಿತ್ರಮಂದಿರದ ಎದುರು ಧನ್ವೀರ್ ಮತ್ತು ದರ್ಶನ್ ಅವರ 20 ಅಡಿ ಅಗಲದ, 60 ಅಡಿ ಎತ್ತರದ ಕಟೌಟ್ ನಿಲ್ಲಿಸಿದೆ. ಅಂದಹಾಗೆ, ʻವಾಮನʼ ಚಿತ್ರವು ಏಪ್ರಿಲ್ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಇತ್ತೀಚೆಗಷ್ಟೇ, ಕೇರಳದ ದೇವಸ್ಥಾನವೊಂದರಲ್ಲಿ ಹೋಮ ಮಾಡಿಸಿದ ದರ್ಶನ್, ಸದ್ಯ ರಾಜಸ್ತಾನದಲ್ಲಿ ʻದಿ ಡೆವಿಲ್ʼ (Devil: The Hero) ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಸದ್ಯ ಈ ಚಿತ್ರಕ್ಕಾಗಿ ಮಾತಿನ ಭಾಗದ ಚಿತ್ರೀಕರಣ ನಡೆಯುತ್ತಿದ್ದು, ದರ್ಶನ್, ರಚನಾ ರೈ, ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್ ಮುಂತಾದ ಕಲಾವಿದರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ವಾಮನ ತಾರಾಗಣ:-
‘ವಾಮನ’ ಚಿತ್ರದಲ್ಲಿ ಧನ್ವೀರ್ ಮತ್ತು ರೀಷ್ಮಾ ಜೊತೆಗೆ ತಾರಾ, ಸಂಪತ್, ಆದಿತ್ಯ ಮೆನನ್, ಶಿವರಾಜ್ ಕೆ.ಆರ್. ಪೇಟೆ, ಅವಿನಾಶ್, ಅಚ್ಯುತ್ ಕುಮಾರ್, ‘ಕಾಕ್ರೊಚ್’ ಸುಧಿ, ಭೂಷಣ್ ಮುಂತಾದವರು ಅಭಿನಯಿಸಿದ್ದಾರೆ. ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಅವರ ಸಂಗೀತವಿದೆ. ಚೇತನ್ ಗೌಡ ನಿರ್ಮಿಸಿರುವ ಈ ಚಿತ್ರಕ್ಕೆ ಶಂಕರ್ ರಾಮನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
(The trailer for the upcoming Kannada film “Vaamana,” starring Dhanveerrah and Reeshma Nanaiah, is scheduled to be released today, March 27, 2025. Challenging Star Darshan, who has been a strong supporter of Dhanveerrah throughout this project, will unveil the trailer at a grand event. The film is set to hit theaters on April 10. Produced by Chethan Gowda under the banner of Equinox Global Entertainment and directed by Shankar Raman, “Vaamana” features music composed by Ajaneesh Loknath and cinematography by Mahendra Simha.)
One thought on “Vaamana Trailer; ‘ವಾಮನʼನ ಜೊತೆಯಾದ ದರ್ಶನ್, ಇಂದು ಟ್ರೇಲರ್ ಬಿಡುಗಡೆ”