Aviram Kanteerava; ಕನ್ನಡದ ಚಿತ್ರ ಚೀನಿ ಭಾಷೆಗೆ; ಹೊಸ ಹೆಗ್ಗಳಿಕೆಗೆ ಪಾತ್ರವಾದ ‘ಕರಳೆ’

ಕನ್ನಡದ ಚಿತ್ರವೊಂದನ್ನು ಬೇರೆ ಭಾಷೆಗಳಿಗೆ ಡಬ್‍ ಆಗಿ ಪ್ಯಾನ್‍ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುವುದು ಹೊಸ ವಿಷಯವಲ್ಲ. ಆದರೆ, ಕನ್ನಡ ಚಿತ್ರವೊಂದು ಅಂತರಾಷ್ಟ್ರೀಯ ಭಾಷೆಗೆ ಡಬ್‍ ಆಗಿದ್ದು ಕಡಿಮೆಯೇ. ಈಗ ಅಂಥದ್ದೊಂದು ಪ್ರಯೋಗ ಕನ್ನಡದಲ್ಲಾಗುತ್ತಿದೆ.

ಈ ಹಿಂದೆ ‘ಕಲಿವೀರ’ ಮತ್ತು ‘ಕನ್ನಡದೇಶದೊಳ್’ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಅವಿರಾಮ್ ಕಂಠೀರವ (Aviram Kanteerava), ಇನ್ನೊಂದು ವಿಭಿನ್ನ ಕಥೆ ಇರುವ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅದೇ ‘ಕರಳೆ’ (Karale). ಭಾರತದ ಪ್ರಮುಖ ಭಾಷೆ ಕನ್ನಡ ಜೊತೆಗೆ ನೆರೆ ರಾಷ್ಟ್ರ ಚೀನಾದ ಮಾಂಡರೀನ್‍ ಭಾಷೆಯಲ್ಲಿ ತಯಾರಾಗುತ್ತಿರುವ ಮೊದಲ ಭಾರತದ ಸಿನಿಮಾ ಎಂಬ ಹೆಗ್ಗಳಿಕೆ ‘ಕರಳೆ’ ಚಿತ್ರಕ್ಕಿದೆ.

ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು ಇತ್ತೀಚೆಗೆ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಆಗಿದೆ. ಇದು ನೈಜ ಘಟನೆ ಆಧಾರಿಸಿದ ಚಿತ್ರವಾಗಿದ್ದು, ಸಮಾಜದ ವಾಸ್ತವ ಅಂಶಗಳನ್ನು, ಅಷ್ಟೇ ನೈಜವಾಗಿ ಮತ್ತು ಹಸಿಹಸಿಯಾಗಿ ಈ ಚಿತ್ರದಲ್ಲಿ ಚಿತ್ರೀಕರಿಸಲಾಗಿದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ.

ಈ ಚಿತ್ರವು ಕನ್ನಡವಲ್ಲದೆ ಚೀನಿ ಭಾಷೆಗೆ ಡಬ್‍ ಆಗುತ್ತಿರುವುದಕ್ಕೆ ಕಾರಣವಿದೆಯಂತೆ. ಇದು ಭಾರತ ಹಾಗೂ ಚೀನಾ ದೇಶಕ್ಕೆ ಸಾಮ್ಯತೆ ಹೊಂದಿರುವ ಕಥೆ ಇದಾಗಿದ್ದು, ಹೀಗಾಗಿ ಈ ಚಿತ್ರವನ್ನು ಕನ್ನಡ ಹಾಗೂ ಚೀನಿ ಭಾಷೆಯಲ್ಲಿ ತೆರೆಗೆ ತರಲು ನಿರ್ದೇಶಕ ಅವಿರಾಮ್ ಕಂಠೀರವ ಸಿದ್ಧತೆ ನಡೆಸುತ್ತಿದ್ದಾರೆ. ಎರಡು ದೇಶಗಳಲ್ಲಿ ನೆಡೆಯುವ ಘಟನೆಗಳಿಗೆ ಸಾಮ್ಯತೆ ಇರುವ ಕಾರಣ ಕನ್ನಡ ಮತ್ತು ಚೀನಿ ಭಾಷೆಯಲ್ಲಿ ಸಿನಿಮಾ ಮಾಡಲಾಗುತ್ತಿದೆಯಂತೆ. ಈ ಚಿತ್ರದಲ್ಲಿ ಕುಂಕುಮ್‍ ಹರಿಹರ ಮುಂತಾದವರು ನಟಿಸುತ್ತಿದ್ದಾರೆ.

ಈಗಾಗಲೇ ಎರಡು ಹಂತದ ಚಿತ್ರೀಕರಣ ಮುಗಿದಿದೆ. ಈಗಾಗಲೇ 52 ದಿನಗಳ ಚಿತ್ರೀಕರಣವಾಗಿದ್ದು, ಚಿಂತಾಮಣಿ, ಮದ್ದೂರು, ಹುಲಿರಾಯನದುರ್ಗ ಸೇರಿ ಹಲವು ಕಡೆ ಶೂಟಿಂಗ್ ನೆಡೆಸಲಾಗಿದೆ. ಇನ್ನು 20 ದಿನಗಳ ಶೂಟಿಂಗ್ ಬಾಕಿಯಿದೆ. ಚಿತ್ರತಂಡವು ಸದ್ಯದಲ್ಲೇ ಮೂರನೇ ಹಂತದ ಚಿತ್ರೀಕರಣ ಪ್ರಾರಂಭಿಸಲಿದೆ.

(Aviram Kanteerava Kannada film in Chinese Karale achieves a new milestone.It is not new for a Kannada film to be dubbed into other languages and released as a pan-India film. However, it is rare for a Kannada film to be dubbed into an international language. Now, such an experiment is happening in Kannada.)

Leave a Reply

Your email address will not be published. Required fields are marked *