45 The Movie Teaser Releasing on Ugadi: ಸಂಕ್ರಾಂತಿಗೊಂದು ಟೀಸರ್, ಯುಗಾದಿಗೆ ‘45’ ಚಿತ್ರದ ಇನ್ನೊಂದು ಟೀಸರ್

ಸಂಕ್ರಾಂತಿ ಹಬ್ಬದಂದು ‘45’ ಚಿತ್ರದ ಟೀಸರ್ ಬಿಡುಗಡೆ ಆಗುವುದರ ಜೊತೆಗೆ, ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿತ್ತು. ಈ ಟೀಸರ್‌ನಲ್ಲಿ ಬರೀ ಶಿವರಾಜಕುಮಾರ್ ಮಾತ್ರ ಕಾಣಿಸಿಕೊಂಡಿದ್ದರು. ಇದೀಗ ಚಿತ್ರದ ಇನ್ನೊಂದು ಟೀಸರ್ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಿದ್ಧತೆ ನಡೆಸಿದ್ದು, ಈ ಟೀಸರ್‌ನಲ್ಲಿ ಉಪೇಂದ್ರ ಮತ್ತು ರಾಜ್‍ ಬಿ. ಶೆಟ್ಟಿ ಸಹ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. (45 The Movie Teaser Releasing on Ugadi)

‘45’ ಚಿತ್ರದ ಹೊಸ ಟೀಸರ್, ಇದೇ ಯುಗಾದಿ ಪ್ರಯುಕ್ತ ಮಾರ್ಚ್‍ 30ರಂದು ಸಂಜೆ 06:45ಕ್ಕೆ ಆನಂದ್‍ ಆಡಿಯೋ ಯೂಟ್ಯೂಬ್‍ ಚಾನಲ್‍ನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತದೆ. (45 The Movie Ugadi Teaser)

ಶಿವರಾಜಕುಮಾರ್ (Shiva Rajkumar), ಉಪೇಂದ್ರ (Upendra) ಮತ್ತು ರಾಜ್‍ ಬಿ ಶೆಟ್ಟಿ (Raj B Shetty) ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ‘45’ ಚಿತ್ರವು ಆಗಸ್ಟ್ 15ರಂದು ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಸೂರಜ್ ಪ್ರೊಡಕ್ಷನ್ಸ್ (Suraj Production) ಬ್ಯಾನರ್‍ ಅಡಿ ರಮೇಶ್ ರೆಡ್ಡಿ (M Ramesh Reddy) ನಿರ್ಮಿಸುತ್ತಿದ್ದು, ಅರ್ಜುನ್‍ ಜನ್ಯ (Arjun Janya) ನಿರ್ದೇಶನ ಮಾಡಿದ್ದಾರೆ. ಇದುವರೆಗೂ ಸಂಗೀತ ನಿರ್ದೇಶಕರಾಗಿ ಹೆಸರು ಮಾಡಿದ್ದ ಅರ್ಜುನ್‍ ಜನ್ಯಗೆ ನಿರ್ದೇಶಕರಾಗಿ ಇದು ಮೊದಲ ಚಿತ್ರ.

‘45’ ಈ ವರ್ಷದ ನಿರೀಕ್ಷಿತ ಚಿತ್ರಗಳಲ್ಲೊಂದು. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ. ಟೊರೊಂಟೋದ ಖ್ಯಾತ VFX ಸಂಸ್ಥೆಯಾದ MARZನಲ್ಲಿ VFX ಕೆಲಸಗಳು ನಡೆಯುತ್ತಿವೆ. ಮೇ ತಿಂಗಳ ಅಂತ್ಯದ ವೇಳೆಗೆ ಗ್ರಾಫಿಕ್ ಕೆಲಸ ಮುಗಿಯಲಿದೆ. ಆನಂತರ ಎರಡು ತಿಂಗಳ ಸಮಯ ಚಿತ್ರದ ಪ್ರಚಾರ ಮಾಡಿ, ಆಗಸ್ಟ್ 15ರಂದು ಚಿತ್ರ ಬಿಡುಗಡೆ ಮಾಡಲಾಗುತ್ತಿದೆ.

ನಿರ್ದೇಶನದ ಜೊತೆಜೊತೆಗೆ ಅರ್ಜುನ್‍ ಜನ್ಯ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ಸಂಗೀತವನ್ನೂ ಸಂಯೋಜಿಸಿದ್ದು, ಸತ್ಯ ಹೆಗಡೆ ಛಾಯಾಗ್ರಹಣವಿದೆ. ಚಿತ್ರದಲ್ಲಿ ಶಿವರಾಜಕುಮಾರ್, ಉಪೇಂದ್ರ, ರಾಜ್‍ ಬಿ. ಶೆಟ್ಟಿ, ಕೌಸ್ತುಭ ಮಣಿ ಮುಂತಾದವರು ನಟಿಸಿದ್ದಾರೆ.

(Kannada composer Arjun Janya’s directorial debut, 45, has been announced as an Independence Day (August 15) 2025 release. The film, starring Century Star Shivarajkumar, Real Star Upendra and Raj B Shetty in the lead. The team has decided to reveal the teaser of 45 on the auspicious occasion of Ugadi, on March 30 at 6.45 pm.)

One thought on “45 The Movie Teaser Releasing on Ugadi: ಸಂಕ್ರಾಂತಿಗೊಂದು ಟೀಸರ್, ಯುಗಾದಿಗೆ ‘45’ ಚಿತ್ರದ ಇನ್ನೊಂದು ಟೀಸರ್

Leave a Reply

Your email address will not be published. Required fields are marked *

Megha Shetty; ಒಲವಿನ ಬಣ್ಣದ ಸೀರೆಯಲ್ಲಿ ಜೊತೆ ಜೊತೆಯಲು ಮೇಘಾ ಶೆಟ್ಟಿ Rachana Inder; ರಚನಾ ಇಂದರ್‌ ಅವರ ಬಳಿ ಇರುವ ಚಿತ್ರಗಳಿವು..