Karnataka bandh tomorrow, March 22; ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗ ಬೆಂಬಲ; ಬೆಳಗಿನ ಪ್ರದರ್ಶನ ರದ್ದು

ಬೆಳಗಾವಿ ಗಡಿಯಲ್ಲಿ ಮರಾಠಿ ಸಂಘಟನೆಗಳ ಪುಂಡಾಟದ ವಿರುದ್ಧ ಧ್ವನಿ ಎತ್ತಲು ಹೊರಟಿರುವ ಕನ್ನಡ ಪರ ಸಂಘಟನೆಗಳು, ಮಾರ್ಚ್ 22 ರಂದು ಕರ್ನಾಟಕ ಬಂದ್‌ (Karnataka Bandh) ಗೆ ಕರೆ ಕೊಟ್ಟಿವೆ. ಈ ಬಂದ್‍ಗೆ ಕನ್ನಡ ಚಿತ್ರರಂಗ ತನ್ನ ಬೆಂಬಲ ವ್ಯಕ್ತಪಡಿಪಡಿಸಿದೆ.

ಈ ಕುರಿತು ಮಾತನಾಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber of Commerce (KFCC) ಅಧ್ಯಕ್ಷ ನರಸಿಂಹಲು, ಕನ್ನಡ ಚಿತ್ರರಂಗ ಕರ್ನಾಟಕ ಬಂದ್‌ಗೆ ತನ್ನ ಬೆಂಬಲ ನೀಡುತ್ತಿದೆ, ಆದರೆ ಯಾವುದೇ ಚಿತ್ರೀಕರಣ ಬಂದ್ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕ ಬಂದ್‌ (Karnataka Bandh) ಗೆ ಚಿತ್ರರಂಗದ ಬೆಂಬಲ ಇರಲಿದೆಯಾದರೂ ಸಿನಿಮಾ ಚಿತ್ರೀಕರಣಗಳನ್ನು ನಿಲ್ಲಿಸಲಾಗುತ್ತಿಲ್ಲ. ಚಿತ್ರಪ್ರದರ್ಶಕರು ಸಹ ಬಂದ್‌ಗೆ ತಮ್ಮ ಬೆಂಬಲ ನೀಡಿದ್ದು, ಶನಿವಾರದ ಬೆಳಗಿನ ಪ್ರದರ್ಶನವನ್ನು ನಿಲ್ಲಿಸುತ್ತಿದ್ದಾರೆ. ಆದರೆ, ಮಧ್ಯಾಹ್ನದ ನಂತರ ಎಂದಿನಂತೆ ಪ್ರದರ್ಶನ ಮುಂದುವರೆಯಲಿದೆ.

ಈ ಕುರಿತು ಮಾತನಾಡಿರುವ ನರಸಿಂಹಲು, ‘ಡಾ. ರಾಜ್‍ ಅವರ ಕಾಲದಿಂದಲೂ ಕನ್ನಡ ನೆಲ, ಜಲ, ಭಾಷೆಗೆ ಕುತ್ತು ಬಂದಾಗ ಚಿತ್ರರಂಗ ಬೆಂಬಲ ನೀಡುತ್ತಾ ಬಂದಿದೆ. ಈಗ ರಾಜ್ಯದ ಹಿತದೃಷ್ಟಿಯಿಂದ ಮಾಡುತ್ತಿರುವ ಈ ಬಂದ್‌ಗೆ ಚಿತ್ರರಂಗದ ಎಲ್ಲಾ ವಲಯಗಳ ಬೆಂಬಲವಿದೆ. ಚಿತ್ರೀಕರಣಕ್ಕೆ ಯಾವುದೇ ಕಡಿವಾಣ ಇರುವುದಿಲ್ಲ. ಆದರೆ, ಚಿತ್ರ ತಂಡಗಳು ಅಥವಾ ನಿರ್ಮಾಪಕರು ಸ್ವಯಂಪ್ರೇರಿತವಾಗಿ ಚಿತ್ರೀಕರಣ ಬಂದ್ ಮಾಡಿದರೆ ಅದಕ್ಕೆ ನಮ್ಮ ಸ್ವಾಗತವಿದೆ. ಕಲಾವಿದರ ಸಂಘ, ನಿರ್ಮಾಪಕರ ಸಂಘವೂ ಸಹ ಬೆಂಬಲ ವ್ಯಕ್ತಪಡಿಸಿವೆ’ ಎಂದು ಹೇಳಿದ್ದಾರೆ.

ಈ ಶುಕ್ರವಾರ ‘ನಾರಾಯಣ ನಾರಾಯಣ (Narayan Narayan )’, ‘ಬರ್ಗೆಟ್‍ ಬಸ್ಯಾ’ (Barget Basya), ‘ಯಾಳ್ವಿ’ ಮುಂತಾದ ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಈ ಬಂದ್‍ನಿಂದ ಕನ್ನಡ ಚಿತ್ರಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಮಾರ್ಚ್ 22 ರಂದು ಬೆಳಗ್ಗೆ 6 ರಿಂದ ಸಂಜೆ 6 ಗಂಟೆ ತನಕ ಬಂದ್ ಮಾಡಲು ಕನ್ನಡಪರ ಸಂಘಟನೆಗಳು ಉದ್ದೇಶಿಸಿವೆ. ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಟೌನ್‌ಹಾಲಿನಿಂದ ಫ್ರೀಡಂ ಪಾರ್ಕ್ ತನಕ ಪ್ರತಿಭಟನಾ ಮೆರವಣಿಗೆ ನಡೆಸಲು ಉದ್ದೇಶಿಸಲಾಗಿದೆ. ಬಂದ್ ವೇಳೆ ಬಸ್, ಆಟೋ, ವಾಹನಗಳ ಸಂಚಾರ ಬಂದ್ ಆಗಬೇಕು ಎಂದು ಕನ್ನಡಪರ ಸಂಘಟನೆಗಳು ಕರೆ ನೀಡಿವೆ.

  • Shiva Rajkumar; ಪಿ. ವಾಸು ಸಹೋದರಿಯ ಮಗನ ಚಿತ್ರದಲ್ಲಿ ಶಿವಣ್ಣ ಅಭಿನಯ

    Shiva Rajkumar; ಪಿ. ವಾಸು ಸಹೋದರಿಯ ಮಗನ ಚಿತ್ರದಲ್ಲಿ ಶಿವಣ್ಣ ಅಭಿನಯ

    ತಮಿಳಿನ ಜನಪ್ರಿಯ ನಿರ್ದೇಶಕ ಪಿ. ವಾಸು ನಿರ್ದೇಶನದ ‘ಶಿವಲಿಂಗ’ ಮತ್ತು ‘ಆಯುಷ್ಮಾನ್‍ ಭವ’ ಚಿತ್ರಗಳಲ್ಲಿ ಶಿವರಾಜಕುಮಾರ್ (Shiva Rajkumar) ಅಭಿನಯಿಸಿದ್ದರು. ಈಗ ಪಿ. ವಾಸು ಅವರ ಸಹೋದರಿಯ ಮಗನ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ಇತ್ತೀಚೆಗೆ ಡಾ. ರಾಜಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಶಿವರಾಜಕುಮಾರ್ ಅಭಿನಯದ ಹೊಸ ಚಿತ್ರದ ಘೋಷಣೆ ಅಧಿಕೃತವಾಗಿ ಆಗಿದೆ. ಶ್ರಿತಿಕ್ ಮೋಷನ್ ಪಿಕ್ಚರ್ಸ್ ಸಂಸ್ಥೆ ಲಾಂಛನದಲ್ಲಿ ಸಾಗರ್, ಕೃಷ್ಣಕುಮಾರ್ ಹಾಗೂ ಸೂರಜ್ ಶರ್ಮ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪಿ. ವಾಸು…

  • Preethi Prema Panganama; ಪ್ರೀತಿ, ಪ್ರೇಮ ಮಾಡಿ ಪಂಗನಾಮ ಹಾಕಲು ಹೊರಟವರ ಕಥೆ ಇದು …

    Preethi Prema Panganama; ಪ್ರೀತಿ, ಪ್ರೇಮ ಮಾಡಿ ಪಂಗನಾಮ ಹಾಕಲು ಹೊರಟವರ ಕಥೆ ಇದು …

    ಕೆಲವು ವರ್ಷಗಳ ಹಿಂದೆ ಉದಯ ಟಿ.ವಿಯಲ್ಲಿ ಪ್ರಸಾರವಾಗುತ್ತಿದ್ದ ಅತ್ಯಂತ ಜನಪ್ರಿಯ ಕಾರ್ಯಕ್ರಮವೆಂದರೆ ಅದು ‘ಹಾಸ್ಯ ಲಾಸ್ಯ’. ಮುತ್ತುರಾಜ್‍ ಮತ್ತು ಶ್ರೀಕಂಠ ಜೋಡಿಯ ಈ ಕಾರ್ಯಕ್ರಮ ಸಾಕಷ್ಟು ಯಶಸ್ವಿಯಾಗಿತ್ತು. ಈಗ ಈ ಜೋಡಿ, ಹೊಸ ಚಿತ್ರವೊಂದರ ಮೂಲಕ ವಾಪಸ್ಸಾಗಿದ್ದಾರೆ. ಸಿನಿಮಾ ಮಾಡಬೇಕು ಎನ್ನುವುದು ಮುತ್ತುರಾಜ್‍ ಮತ್ತು ಶ್ರೀಕಂಠ ಅವರ ಬಹುವರ್ಷಗಳ ಕನಸಾಗಿತ್ತಂತೆ. ಅದು ಈಗ ‘ಪ್ರೀತಿ ಪ್ರೇಮ ಪಂಗನಾಮ’ (Preethi Prema Panganama) ಎಂಬ ಹೊಸ ಚಿತ್ರದ ಮೂಲಕ ಈಡೇರಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಶ್ರೀಕಂಠ…

  • Puppy; ಇಬ್ಬರು ಬಾಲಕರು ಹಾಗೂ ಶಾನ್ವದ ಸುತ್ತ ಸಾಗುವ ‘ಪಪ್ಪಿ’ ಮೇ1ಕ್ಕೆ ಬಿಡುಗಡೆ

    Puppy; ಇಬ್ಬರು ಬಾಲಕರು ಹಾಗೂ ಶಾನ್ವದ ಸುತ್ತ ಸಾಗುವ ‘ಪಪ್ಪಿ’ ಮೇ1ಕ್ಕೆ ಬಿಡುಗಡೆ

    ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಶ್ವಾನದ ಸುತ್ತ ಸುತ್ತವ ‘777 ಚಾರ್ಲಿ’ ಮತ್ತು ‘ನಾನು ಮತ್ತು ಗುಂಡ’ ಚಿತ್ರಗಳು ಬಿಡುಗಡೆಯಾಗಿವೆ. ಸದ್ಯದಲ್ಲೇ ‘ನಾನು ಮತ್ತು ಗುಂಡ 2’ ಚಿತ್ರಗಳು ಬಿಡುಗಡೆಯಾಗಬೇಕಿದೆ. ಹೀಗಿರುವಾಗಲೇ ಇಬ್ಬರು ಬಾಲಕರು ಹಾಗೂ ಶಾನ್ವದ ಸುತ್ತ ಸಾಗುವ ‘ಪಪ್ಪಿ’ ಎಂಬ ಇನ್ನೊಂದು ಚಿತ್ರ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ. ಒಂದಿಷ್ಟು ಹೊಸಬರು ಸೇರಿಕೊಂಡು ಉತ್ತರ ಕರ್ನಾಟದ ಜವಾರಿ ಭಾಷೆಯಲ್ಲೊಂದು ‘ಪಪ್ಪಿ’ (Puppy) ಎಂಬ ಸಿನಿಮಾ ಮಾಡಿದ್ದು, ಈ ಟ್ರೇಲರ್‌ ಈಗಾಗಲೇ ಬಿಡುಗಡೆ ಆಗಿದೆ. ಈ ಚಿತ್ರ್ಕೆಕ್ಕೆ ಇದೀಗ…

(Karnataka Bandh 2025: What’s Open, What’s Closed & Impact on Kannada Film Industry. The Karnataka Bandh 2025 is scheduled for tomorrow, bringing potential disruptions across the state. As protests intensify, many are wondering about Karnataka bandh tomorrow—what is open, what is closed? From public transport to cinemas, here’s a comprehensive update on the bandh and how it may affect the Kannada film industry.)

Leave a Reply

Your email address will not be published. Required fields are marked *