Kyle Paul on Yash Toxic; ಟಾಕ್ಸಿಕ್‌ ಸನ್ನಿವೇಶಗಳಲ್ಲಿ ನಟಿಸಿದ್ದನ್ನು ಮರೆಯೋಕೆ ಸಾಧ್ಯವಿಲ್ಲ: ಕೈಲ್ ಪೌಲ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ (Toxic Movie) ಬಗ್ಗೆ ಹಾಲಿವುಡ್ ನಟ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗ ವೈರಲ್‌ ಆಗಿದೆ. ರಾಕಿಂಗ್ ಸ್ಟಾರ್ ಯಶ್ (Yash) ಅವರ ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ಹಾಲಿವುಡ್‌ ಕಲಾವಿದರು, ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ ಎಂಬುವುದು ಗೊತ್ತಿರುವ ವಿಚಾರ. ಕೈಲ್ ಪೌಲ್ (KylePaul) ಎಂಬ ಹಾಲಿವುಡ್ ನಟ ತಮ್ಮ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ವಿಡಿಯೊದಲ್ಲಿ ಕೈಲ್ ಪೌಲ್, ‘ಟಾಕ್ಸಿಕ್’ ಸಿನಿಮಾದಲ್ಲಿ ಎಮೋಷನಲ್ ಸನ್ನಿವೇಶಗಳಿವೆ. ಭಾರತದ ಭಾಷೆ ಕನ್ನಡದಲ್ಲಿ ಮಾತನಾಡಿದ್ದೇನೆ. ಇಂತಹ ಸನ್ನಿವೇಶಗಳಲ್ಲಿ ನಟಿಸಿದ್ದನ್ನು ಮರೆಯೋಕೆ ಸಾಧ್ಯವಿಲ್ಲ. ನಿರ್ದೇಶಕಿ ಗೀತು ನಟಿಸಲು ಬಹಳ ಸಹಕಾರ ನೀಡಿದರು. ಬಹಳ ಸಮಯ ತೆಗೆದುಕೊಂಡು ನಟಿಸಲು ಹೇಳುತ್ತಿದ್ದರು, ಸದಾ ಹುರಿದುಂಬಿಸುತ್ತಿದ್ದರು. ಚಿತ್ರತಂಡದ ಜೊತೆ ಕೆಲಸ ಮಾಡಿದ ಅನುಭವ ನಿಜಕ್ಕೂ ಅದ್ಭುತವಾಗಿತ್ತು ಎಂದು ಕೈಲ್ ಪೌಲ್ ಕೊಂಡಾಡಿದ್ದಾರೆ.

ʻಟಾಕ್ಸಿಕ್’ನ ಚಿತ್ರೀಕರಣವು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಒಟ್ಟಿಗೆ ಮಾಡಲಾಗುತ್ತಿದೆ. ಈ ಚಿತ್ರದ ಆಕ್ಷನ್ ದೃಶ್ಯಗಳನ್ನ ಹಾಲಿವುಡ್‌ನ ಫೇಮಸ್ ಸ್ಟಂಟ್ ಮಾಸ್ಟರ್ ಜೆಜೆ ಪೆರ್ರಿ ಡೈರೆಕ್ಟ್‌ ಮಾಡುತ್ತಿದ್ದಾರೆ. ಯಶ್ ಮತ್ತು ಕೆವಿಎನ್ ಸಂಸ್ಥೆ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕೆಜಿಎಫ್‌ ಸಿನಿಮಾ ಜಾಗತಿಕ ಮಟ್ಟದಲ್ಲಿ ವೀಕ್ಷಣೆ ಕಂಡ ನಂತರ ಯಶ್‌ ಅವರ ಮುಂದಿನ ಚಿತ್ರದ ನಿರೀಕ್ಷೆ ಹೆಚ್ಚಿತ್ತು. 2024 ಆಗಸ್ಟ್‌ನಲ್ಲಿ ಸಿನಿಮಾ ಮುಹೂರ್ತ ಕಾರ್ಯಕ್ರಮ ಜರುಗಿದ್ದು, ಬೆಂಗಳೂರು ಮತ್ತು ಮುಂಬೈನಲ್ಲಿ ಸಿನಿಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದೆ.

ಜಾಗತಿಕ ಸ್ಟಾರ್‌ ಆಗಿ ಬೆಳೆದ ಯಶ್‌:- ಯಶ್‌ ಕಿರುತೆರೆಯಿಂದ ಬೆಳೆದ ನಟ. ಯಶ್ ಈಟಿವಿ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾದ ಅಶೋಕ್ ಕಶ್ಯಪ್ ನಿರ್ದೇಶನದ ಗೋಕುಲ ಧಾರವಾಹಿಯಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ನಂತಹ ಮಳೆಬಿಲ್ಲು ಮತ್ತು ಪ್ರೀತಿ ಇಲ್ಲದ ಮೇಲೆ ಎಂಬ ಧಾರವಾಹಿಗಳಲ್ಲೂ ನಟಿಸಿದ್ದಾರೆ.

ಪ್ರಿಯಾ ಹಾಸನ್ ನಿರ್ದೇಶನದ ಜಂಭದ ಹುಡುಗಿ (2007) ಚಲನಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ನಂದ ಗೋಕುಲ ಧಾರಾವಾಹಿಯ ಸಹನಟಿ ರಾಧಿಕಾ ಪಂಡಿತ್ ಜೊತೆ ಪೋಷಕ ಪಾತ್ರದಲ್ಲಿ ನಟಿಸಿ ಖ್ಯಾತಿ ಪಡೆದಿದ್ದರು. ಶಶಾಂಕ್ ನಿರ್ದೇಶನ ಮೊಗ್ಗಿನ ಮನಸ್ಸು ಚಿತ್ರದಲ್ಲಿ ರಾಧಿಕ ಪಂಡಿತ್‌ ಜೊತೆ ಅಭಿನಯಿಸಿದರು. ಈ ಚಿತ್ರದ ಪೋಷಕ ನಟನೆಯ ಪಾತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ ಪಡೆದರು. ಯಶ್ ನಂತರ ರಾಕಿ (2008), ಕಳ್ಳರ ಸಂತೆ (2009), ಗೋಕುಲ (2009) ನಲ್ಲಿ ನಾಯಕ ಪಾತ್ರಗಳಲ್ಲಿ ನಟಿಸಿದರು.

2010ರಲ್ಲಿ ಮೊದಲ ಸಲ, ಕಿರಾತಕ (2011), ಡ್ರಾಮ (2012), ಗೂಗ್ಲಿ (2013), ರಾಜಾ ಹುಲಿ (2013), ಗಜಕೇಸರಿ (2014) ಮುಂತಾದ ಚಿತ್ರಗಳಲ್ಲಿ ನಟಿಸಿದರು. ಈ ಎಲ್ಲಾ ಚಿತ್ರಗಳಿಗೂ ಯಶ್‌ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದಲ್ಲದೇ ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯು ಹಣ ಗಳಿಕೆಯನ್ನು ಮಾಡಿತು. ಮಿಸ್ಟರ್ ಅಂಡ್‌ ಮಿಸ್ಸೆಸ್‌ ರಾಮಚಾರಿ (2014) ಯಶ್‌ಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಕನ್ನಡದ ರಾಮಾಚಾರಿ ಹೆಸರಿನ ಎರಡನೇ ಚಿತ್ರ ಇದಾಗಿದ್ದು, ಎರಡೂ ಹಿಟ್‌ ಲಿಸ್ಟ್‌ನಲ್ಲಿದೆ.

2015ರಲ್ಲಿ ಮಾಸ್ಟರ್ ಪೀಸ್, 2019ರಲ್ಲಿ ಸಂತು ಸ್ಟ್ರೈಟ್ ಫಾರ್ವರ್ಡ್, 2018ರಲ್ಲಿ ಕೆಜಿಎಫ್ ಚಾಪ್ಟರ್ 1 ಮತ್ತು 2021ರಲ್ಲಿ ಕೆಜಿಎಫ್ ಚಾಪ್ಟರ್ 2 ಬಿಡುಗಡೆ ಆಗಿತ್ತು. ಕೋವಿಡ್‌ ಮುನ್ನ ಬಂದ ಕೆಜಿಎಫ್‌ ಚಾಪ್ಟರ್‌ 1 ಆರ್ಥಕವಾಗಿ ದುಡ್ಡು ಮಾಡಿದ್ದಲ್ಲದೇ, ಪ್ಯಾನ್‌ ಇಂಡಿಯಾ ಸಿನಿಮಾ ಆಗಿ ದೊಡ್ಡ ಹಿಟ್‌ ಆಯಿತು. ಅದರ ಮುಂದಿನ ಭಾಗ ಕೆಜಿಎಫ್ ಚಾಪ್ಟರ್ 2 ಜಾಗತಿಕ ಸಿನಿಮಾ ಆಗಿ ತೆರೆಕಂಡಿದ್ದಲ್ಲದೇ ವಿದೇಶಿ ಪ್ರೇಕ್ಷಕರಿಂದಲೂ ಮೆಚ್ಚುಗೆ ಪಡೆಯಿತು. ಹೀಗಾಗಿ ಯಶ್‌ ವರ್ಲ್ಡ್‌ ಲೆವೆಲ್‌ನಲ್ಲಿ ಅಭಿಮಾನಿಗಳನ್ನು ಪಡೆದರು. ಇದರಿಂದ ಅವರ ಮುಂದಿನ ಸಿನಿಮಾ ಟಾಕ್ಸಿಕ್‌ ಮೇಲೆ ನಿರೀಕ್ಷೆ ಹೆಚ್ಚಿದೆ.

ಟಾಕ್ಸಿಕ್‌ಗಾಗಿ ಯಶ್‌ ಹಾಲಿವುಡ್‌ ನಟರೊಂದಿಗೆ ಟೈ ಅಪ್‌ ಮಾಡಿಕೊಂಡಿದ್ದಾರೆ. ಹಾಲಿವುಡ್‌ನ ನಟರು, ತಂತ್ರಜ್ಞರು ಈ ಚಿತ್ರದಲ್ಲಿ ನಟಿಸುತ್ತಿರುವುದರಿಂದ ಟಾಕ್ಸಿಕ್‌ನ ಸ್ಟಾರ್‌ ವ್ಯಾಲ್ಯೂ ಸಹ ಜಾಸ್ತಿಯಾಗಿದೆ. ಅಲ್ಲದೇ ಜಾಗತಿಕ ಮಟ್ಟದಲ್ಲಿ ಈ ಸಿನಿಮಾಕ್ಕೆ ನಿರೀಕ್ಷೆ ಇದೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಣ ಮಾಡುವ ಮೂಲಕ ಈ ಸಿನಿಮಾ ದಾಖಲೆ ಮಾಡಿದೆ.

(American actor Kyle Paul, who recently completed filming for Yash’s upcoming Toxic: A Fairytale for Grown-ups, shared his exhilarating experience on set. The film, produced by Venkat K Narayana and Yash under KVN Productions and Monster Mind Creations, features Yash in the lead, along with Kiara Advani, Nayanthara, Human Qureshi, and Tara Sutaria.)

One thought on “Kyle Paul on Yash Toxic; ಟಾಕ್ಸಿಕ್‌ ಸನ್ನಿವೇಶಗಳಲ್ಲಿ ನಟಿಸಿದ್ದನ್ನು ಮರೆಯೋಕೆ ಸಾಧ್ಯವಿಲ್ಲ: ಕೈಲ್ ಪೌಲ್

Leave a Reply

Your email address will not be published. Required fields are marked *