Dhruva Sarja; ಚಿಕ್ಕಪ್ಪನ ‘ಸೀತಾ ಪಯಣ’ದಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ವಿಶೇಷ ಪಾತ್ರ..!

ಅರ್ಜುನ್ ಸರ್ಜಾ (Arjun Sarja) ನಿರ್ದೇಶನದ ‘ಸೀತಾ ಪಯಣ’ (Seetha Payana) ದಲ್ಲಿ ಸ್ಯಾಂಡಲ್ವುಡ್ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅರ್ಜುನ್ ಸರ್ಜಾ ಗಿರಿ ಎಂಬ ಪಾತ್ರದಲ್ಲಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯಾ ಅರ್ಜುನ್ ಮತ್ತು ಉಪೇಂದ್ರ ಅವರ ಸೋದರಳಿಯ ನಿರಂಜನ್ ಸುಧೀಂದ್ರ ನಟಿಸಿದ್ದಾರೆ. ಮಾರ್ಚ್ 17 ರಂದು ಚಿತ್ರೀಕರಣ ಪ್ರಾರಂಭವಾಗಿದೆ.
ಅರ್ಜುನ್ ಸರ್ಜಾ ನಿರ್ದೇಶನದ ಕೊನೆಯ ಚಿತ್ರ ‘ಪ್ರೇಮ ಬರಹ’ದಲ್ಲಿ ಧ್ರುವ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಸೀತಾ ಪಯಣದಲ್ಲಿ ಧ್ರುವ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಇದರಲ್ಲಿ ಫೈಟ್ ಸೀಕ್ವೆನ್ಸ್ ಕೂಡ ಇರಲಿದೆ ಎಂದು ಮೂಲಗಳು ತಿಳಿಸಿವೆ.
ಸಧ್ಯ ಧ್ರುವ ಸರ್ಜಾ ಅವರು ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ ಚಿತ್ರದ ಬಿಡುಗಡೆಯನ್ನು ಎದುರುನೋಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಕೆಡಿ ನಿರ್ಮಾಣವಾಗುತ್ತಿದ್ದು, ಮೇ ತಿಂಗಳಲ್ಲಿ ಬಹು ಭಾಷೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಸಂಜಯ್ ದತ್ ಮತ್ತು ಶಿಲ್ಪಾ ಶೆಟ್ಟಿ, ರವಿ ಚಂದ್ರನ್ ಸೇರಿದಂತೆ ಕನ್ನಡ ಮತ್ತು ಹಿಂದಿ ಚಿತ್ರರಂಗದ ಕೆಲವು ಜನಪ್ರಿಯ ನಟರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
‘ಸೀತಾ ಪಯಣ’ ಚಿತ್ರವನ್ನು ಅರ್ಜುನ್ ಸರ್ಜಾ ಅವರ ‘ಶ್ರೀ ರಾಮ್ ಫಿಲ್ಮ್ಸ್ ಇಂಟರ್ನ್ಯಾಷನಲ್’ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ಚಿತ್ರವು ತ್ರಿಭಾಷಾ ಯೋಜನೆಯಾಗಿದ್ದು, ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿದೆ. ಚಿತ್ರೀಕರಣವು ಈಗಾಗಲೇ ಅಂತಿಮ ಹಂತದಲ್ಲಿದೆ. ಚಿತ್ರಕ್ಕೆ ಅನುಪ್ ರೂಬೆನ್ಸ್ ಅವರು ಸಂಗೀತ ಸಂಯೋಜಿಸಿದ್ದಾರೆ.