IIFA Awards 2025 Full List of Winners; 10 ಪ್ರಶಸ್ತಿ ಗೆದ್ದ ಲಾಪತಾ ಲೇಡೀಸ್; ಐಫಾ ಪ್ರಶಸ್ತಿ ಪಟ್ಟಿ ಹೀಗಿದೆ..!

IIFA 2025 Winners List: 25ನೇ ಐಫಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲಾಪತಾ ಲೇಡೀಸ್ ಸಿನಿಮಾ ಹೆಚ್ಚು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಕಿರಣ್ ರಾವ್ ನಿರ್ದೇಶನದ ಈ ಸಿನಿಮಾ ಒಟ್ಟು 10 ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಅತ್ಯುತ್ತಮ ಚಿತ್ರ ಪ್ರಶಸ್ತಿ ಕೂಡ ಇದೇ ಸಿನಿಮಾಕ್ಕೆ ಸಿಕ್ಕಿದೆ. ಕಾರ್ತಿಕ್ ಆರ್ಯನ್ ಉತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಪ್ರಶಸ್ತಿ ಪಟ್ಟಿ ಹೀಗಿದೆ..
ಅತ್ಯುತ್ತಮ ಚಿತ್ರ – ಲಾಪತಾ ಲೇಡೀಸ್
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ಅಭಿನಯ (ಪುರುಷ) – ಕಾರ್ತಿಕ್ ಆರ್ಯನ್ (ಭೂಲ್ ಭುಲೈಯಾ 3)
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ಅಭಿನಯ (ಮಹಿಳೆ) – ನಿತಾಂಶಿ ಗೋಯೆಲ್ (ಲಾಪತಾ ಲೇಡೀಸ್)
ಅತ್ಯುತ್ತಮ ನಿರ್ದೇಶನ – ಕಿರಣ್ ರಾವ್ (ಲಾಪತಾ ಲೇಡೀಸ್)
ನಕಾರಾತ್ಮಕ ಪಾತ್ರದಲ್ಲಿ ಅತ್ಯುತ್ತಮ ಅಭಿನಯ – ರಾಘವ್ ಜುಯಾಲ್ (ಕಿಲ್)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ಅಭಿನಯ (ಮಹಿಳೆ) – ಜಾಂಕಿ ಬೋಡಿವಾಲಾ (ಶೈತಾನ್)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ಅಭಿನಯ (ಪುರುಷ) – ರವಿ ಕಿಶನ್ (ಲಾಪತಾ ಲೇಡೀಸ್)
ಜನಪ್ರಿಯ ವಿಭಾಗದಲ್ಲಿ ಅತ್ಯುತ್ತಮ ಕಥೆ (ಮೂಲ) – ಬಿಪ್ಲಬ್ ಗೋಸ್ವಾಮಿ (ಲಾಪಾತಾ ಲೇಡೀಸ್)
ಅತ್ಯುತ್ತಮ ಕಥೆ (ಅಡಾಪ್ಟೇಶನ್) – ಶ್ರೀರಾಮ್ ರಾಘವನ್, ಅರಿಜಿತ್ ಬಿಸ್ವಾಸ್, ಪೂಜಾ ಲಧಾ ಸೂರ್ತಿ, ಮತ್ತು ಅನುಕೃತಿ ಪಾಂಡೆ (ಮೆರ್ರಿ ಕ್ರಿಸ್ಮಸ್)
ಅತ್ಯುತ್ತಮ ಚೊಚ್ಚಲ ನಿರ್ದೇಶನ – ಕುನಾಲ್ ಕೆಮ್ಮು (ಮಡಗಾಂವ್ ಎಕ್ಸ್‌ಪ್ರೆಸ್)
ಬೆಸ್ಟ್ ಡೆಬ್ಯುಟ್ (ಪುರುಷ) – ಲಕ್ಷ್ಯ ಲಾಲ್ವಾನಿ (ಕಿಲ್)
ಬೆಸ್ಟ್ ಡೆಬ್ಯುಟ್ (ಮಹಿಳೆ) – ಪ್ರತಿಭಾ ರಂತ (ಲಾಪತಾ ಲೇಡೀಸ್)
ಅತ್ಯುತ್ತಮ ಸಂಗೀತ ನಿರ್ದೇಶಕ – ರಾಮ್ ಸಂಪತ್ (ಲಾಪತಾ ಲೇಡೀಸ್)
ಅತ್ಯುತ್ತಮ ಸಾಹಿತ್ಯ – ಪ್ರಶಾಂತ್ ಪಾಂಡೆ (ಲಾಪತಾ ಲೇಡೀಸ್‌ನಿಂದ ಸಜ್ನಿ)
ಅತ್ಯುತ್ತಮ ಗಾಯಕ (ಪುರುಷ) – ಜುಬಿನ್ ನೌಟಿಯಲ್ (ಆರ್ಟಿಕಲ್ 370 ರಿಂದ ದುವಾ)
ಅತ್ಯುತ್ತಮ ಗಾಯಕಿ (ಮಹಿಳೆ) – ಶ್ರೇಯಾ ಘೋಷಾಲ್ (ಭೂಲ್ ಭುಲೈಯಾ 3 ರಿಂದ ಅಮಿ ಜೆ ತೋಮರ್ 3.0)
ಅತ್ಯುತ್ತಮ ಧ್ವನಿ ವಿನ್ಯಾಸ – ಸುಬಾಷ್ ಸಾಹೂ, ಬೊಲೊಯ್ ಕುಮಾರ್ ಡೊಲೊಯ್, ರಾಹುಲ್ ಕರ್ಪೆ (ಕಿಲ್)
ಅತ್ಯುತ್ತಮ ಚಿತ್ರಕಥೆ – ಸ್ನೇಹಾ ದೇಸಾಯಿ (ಲಾಪತಾ ಲೇಡೀಸ್)
ಅತ್ಯುತ್ತಮ ಸಂಭಾಷಣೆ – ಅರ್ಜುನ್ ಧವನ್, ಆದಿತ್ಯ ಧರ್, ಆದಿತ್ಯ ಸುಹಾಸ್ ಜಂಭಾಲೆ, ಮೋನಾಲ್ ಥಾಕರ್ (ಆರ್ಟಿಕಲ್ 370)
ಅತ್ಯುತ್ತಮ ಸಂಕಲನ – ಜಬೀನ್ ಮರ್ಚೆಂಟ್ (ಲಾಪತಾ ಲೇಡೀಸ್)
ಅತ್ಯುತ್ತಮ ಛಾಯಾಗ್ರಹಣ – ರಫೇ ಮಹಮೂದ್ (ಕಿಲ್)
ಅತ್ಯುತ್ತಮ ನೃತ್ಯ ಸಂಯೋಜನೆ – ಬಾಸ್ಕೋ-ಸೀಸರ್ (ಬ್ಯಾಡ್ ನ್ಯೂಜ್‌ನ ತೌಬಾ ತೌಬಾ)
ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ – ರೆಡ್ ಚಿಲ್ಲಿಸ್ VFX (ಭೂಲ್ ಭುಲೈಯಾ 3)
ಭಾರತೀಯ ಸಿನಿಮಾದಲ್ಲಿ ಅತ್ಯುತ್ತಮ ಸಾಧನೆ – ರಾಕೇಶ್ ರೋಷನ್