Nayan Sarika;ʻಪಿನಾಕಾʼಕ್ಕೆ ಗಣೇಶ್ಗೆ ಜೋಡಿಯಾದ ನಯನ ಸಾರಿಕಾ

‘ಕೃಷ್ಣಂ ಪ್ರಣಯ ಸಖಿ’ ಮೂಲಕ ಯಶಸ್ಸಿನ ಲಯಕ್ಕೆ ಮರಳಿದ ಗಣೇಶ್, ಸದ್ಯ ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಮೇಶ್ ಅರವಿಂದ್ ಕೂಡ ನಟಿಸಿದ್ದಾರೆ. ಇದರ ಜೊತೆಯಲ್ಲೇ ಗಣೇಶ್ ತಮ್ಮ ಚಿತ್ರ ‘ಪಿನಾಕ’ ಚಿತ್ರಕ್ಕೂ ಸಜ್ಜಾಗುತ್ತಿದ್ದಾರೆ.

ಸಧ್ಯ ಸಿಸಿಎಲ್ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ಗಣಿ, ಲೀಗ್ ಕ್ರಿಕೆಟ್ನ ನಂತರ, ಮಾರ್ಚ್ ಮೊದಲ ವಾರದಲ್ಲಿ ‘ಪಿನಾಕಾ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ. ಈ ಚಿತ್ರವು ನೃತ್ಯ ಸಂಯೋಜಕ – ನಿರ್ದೇಶಕ ಧನಂಜಯ್ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಅಡಿಯಲ್ಲಿ ಟಿಜಿ ವಿಶ್ವಪ್ರಸಾದ್ ಮತ್ತು ಟಿಜಿ ಕೃತಿ ಪ್ರಸಾದ್ ನಿರ್ಮಾಣ ಮಾಡುತ್ತಿದ್ದಾರೆ.
ಕೆಎ ಮತ್ತು ಆಯ್ನಂತಹ ತೆಲುಗು ಚಿತ್ರಗಳ ಮೂಲಕ ಗಮನ ಸೆಳೆದ ನಯನ ಸಾರಿಕಾ (Nayan Sarika) ಅವರನ್ನು ನಾಯಕಿಯಾಗಿ ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿದೆ. ಪಿನಾಕಾ ಅವರ ಕನ್ನಡ ಚೊಚ್ಚಲ ಚಿತ್ರವಾಗಲಿದೆ. ಆದರೆ ತಂಡದಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ. ನಂದ ಕಿಶೋರ್ ನಿರ್ದೇಶನದ ಮೋಹನ್ ಲಾಲ್ ಅಭಿನಯದ ಪ್ಯಾನ್-ಇಂಡಿಯಾ ಸಿನಿಮಾ ‘ವೃಷಭ’ದಲ್ಲೂ ನಯನ ಅಭಿನಯಿಸಿದ್ದಾರೆ.
ಈ ಚಿತ್ರ ಕನ್ನಡ ಮತ್ತು ತೆಲುಗು ಎರಡರಲ್ಲೂ ನಿರ್ಮಾಣವಾಗಲಿದೆ. ಪ್ರೇಮ ಕಥೆಗಳಲ್ಲೇ ಕಾಣಿಸಿಕೊಳ್ಳು ಗಣಿಗೆ ಇದು ಭಿನ್ನ ಶೈಲಿಯ ಚಿತ್ರ ಆಗಲಿದೆ. ಈ ಚಿತ್ರಕ್ಕೆ ಹರಿ ಕೆ ವೇದಾಂತಮ್ ಅವರ ಛಾಯಾಗ್ರಹಣ ಮತ್ತು ಸಂತೋಷ್ ಪಾಂಚಾಲ್ ಅವರ ಕಲಾ ನಿರ್ದೇಶನ ಇರಲಿದೆ.